ಸಾರಾಂಶ
ಬೆಂಕಿ ಅವಘಡಕ್ಕೆ ಶಾರ್ಟ್‌ಸರ್ಕ್ಯೂಟ್ ಕಾರಣ ಎನ್ನಲಾಗಿದ್ದು, ಸುಮಾರು 3 ಕೋಟಿ ರು.ಗಳಷ್ಟು ನಷ್ಟ ಹೇಳಲಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಕೋಳಿ ಹಾಗೂ ಮೀನಿನ ಆಹಾರ ತಯಾರಿಕಾ ಘಟಕದಲ್ಲಿ ಗುರುವಾರ ಮುಂಜಾನೆ ಅಗ್ನಿದುರಂತ ಅವಘಡದಲ್ಲಿ ಕೋಟ್ಯಂತರ ರು. ನಷ್ಟ ಸಂಭವಿಸಿದೆ. ಫಿಶ್ ಆಯಿಲ್ ಉತ್ಪಾದಿಸುವ ಶಿಹಾರ್ ಎಂಟರ್‌ಪ್ರೈಸಸ್ ಎಂಬ ಈ ಫ್ಯಾಕ್ಟರಿಯಲ್ಲಿ ನಸುಕಿನ 4.45ರ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಮೊಹಮ್ಮದ್ ಎಂಬವರಿಗೆ ಸೇರಿದ ಫ್ಯಾಕ್ಟರಿ ಇದಾಗಿದೆ. ಕೋಳಿ ಹಾಗೂ ಫಿಶ್ ವೇಸ್ಟ್‌ನಿಂದ ಆಯಿಲ್ ಉತ್ಪಾದಿಸುವ ಫ್ಯಾಕ್ಟರಿ ಇದಾಗಿದ್ದು, ಈ ಬೆಂಕಿ ಅನಾಹುತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.ಬೆಂಕಿ ಕಾಣಿಸಿದ ಬಳಿಕ ಕ್ಷಣಾರ್ಧದಲ್ಲಿ ಇಡೀ ಫ್ಯಾಕ್ಟರಿಯನ್ನು ವ್ಯಾಪಿಸಿದೆ. ಸ್ಥಳಕ್ಕೆ ಎಂಆರ್‌ಪಿಎಲ್, ಎನ್‌ಎಂಪಿಎನಿಂದ ಸುಮಾರು ಎಂಟು ಅಗ್ನಿಶಾಮಕ ವಾಹನಗಳು ಆಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟಿವೆ. ಸುಮಾರು ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಆಗಲೇ ಫ್ಯಾಕ್ಟರಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಬೆಂಕಿ ಅವಘಡಕ್ಕೆ ಶಾರ್ಟ್‌ಸರ್ಕ್ಯೂಟ್ ಕಾರಣ ಎನ್ನಲಾಗಿದ್ದು, ಸುಮಾರು 3 ಕೋಟಿ ರು.ಗಳಷ್ಟು ನಷ್ಟ ಹೇಳಲಾಗಿದೆ.;Resize=(128,128))
;Resize=(128,128))
;Resize=(128,128))