ಮಕ್ಕಳಿಗೆ ಪರೀಕ್ಷೆ ಒತ್ತಡ ನಿರ್ವಹಣೆ, ಜೀವನ ಕೌಶಲ್ಯದ ಬಗ್ಗೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಒತ್ತಡ ನಿರ್ವಹಿಸಲು ವಿದ್ಯಾರ್ಥಿಗಳಿಗೆ ನಿಗದಿತ ಸಮಯದ ವೇಳಾಪಟ್ಟಿ ಅವಶ್ಯಕ ಎಂದು ರೋಟರಿ ಕ್ಲಬ್ ಸದಸ್ಯ ಡಾ.ದಿಲೀಪ್ ಕುಮಾರ್ ಹೇಳಿದ್ದಾರೆ.
ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ರೋಟರಿ ಸಹಯೋಗದಲ್ಲಿ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು 10 ನೇ ತರಗತಿ ಮಕ್ಕಳಿಗೆ ಪರೀಕ್ಷೆ ಒತ್ತಡ ನಿರ್ವಹಣೆ ಹಾಗೂ ಜೀವನ ಕೌಶಲ್ಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಸಮತೋಲಿತ ಆಹಾರ, ಯೋಗ/ಧ್ಯಾನ ರೂಢಿಸಿಕೊಳ್ಳಬೇಕು. ಓದಿನ ನಡುವೆ ಸಣ್ಣ ವಿರಾಮ ಪಡೆ ಯುವುದು, ಧನಾತ್ಮಕ ಆಲೋಚನೆ, ಸಾಕಷ್ಟು ನಿದ್ರೆ ಮತ್ತು ವಿಷಯಗಳ ಪುನರಾವರ್ತನೆಯಿಂದ ಆತ್ಮವಿಶ್ವಾಸ ಹೆಚ್ಚಿ ಆತಂಕ ಕಡಿಮೆಯಾಗಲು ಸಹಕಾರಿ. ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕ ಸಮಯ ಮೀಸಲಿಟ್ಟು, ವೇಳಾಪಟ್ಟಿ ಸಿದ್ಧಪಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.ನಿರಂತರವಾಗಿ ಓದುವ ಬದಲು ಪ್ರತಿ 45 ನಿಮಿಷಗಳಿಗೆ 10-15 ನಿಮಿಷಗಳ ಸಣ್ಣ ವಿರಾಮ ಪಡೆದು. ಕಲಿತ ವಿಷಯಗಳನ್ನು ಹೆಚ್ಚು ಬಾರಿ ಪುನರಾವರ್ತಿಸಿ ಎಂದರು. ಪೌಷ್ಟಿಕ ಆಹಾರ ಸೇವಿಸಿ, ಜಂಕ್ ಫುಡ್ ದೂರವಿಡಿ ಮತ್ತು ದ್ರವಾಹಾರ ಹೆಚ್ಚಾಗಿ ತೆಗೆದುಕೊಳ್ಳಿ. ಪರೀಕ್ಷೆ ಮುನ್ನಾ ದಿನ ರಾತ್ರಿ ಕನಿಷ್ಠ 7-8 ಗಂಟೆಗಳ ನಿದ್ರೆ ಮಾಡುವುದು. ನೆನಪಿನ ಶಕ್ತಿಗೆ ಬಹಳ ಮುಖ್ಯ, ಮನಸ್ಸಿನ ಶಾಂತಿಗೆ ಪ್ರತಿದಿನ ಯೋಗ, ಪ್ರಾಣಾಯಾಮ ಅಥವಾ ಧ್ಯಾನ ಮಾಡಿ, ಇದು ಆತಂಕ ಕಡಿಮೆ ಮಾಡುತ್ತದೆ. ನಾನು ಓದಿದ್ದೇನೆ, ನನಗೆ ನೆನಪಿದೆ ಎಂದು ಆತ್ಮವಿಶ್ವಾಸದಿಂದಿರಿ ಎಂದು ಹೇಳಿದರು.ವಲಯ -7 ರ ಸಹಾಯಕ ಗವರ್ನರ್ ಪ್ರವೀಣ್ ನಹಾರ್ ಟಿ.ಎಂ, ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ.ರವಿ ಕುಮಾರ್, ಕಾರ್ಯದರ್ಶಿ ಪ್ರವೀಣ್ ಪಿ, ಶಿಕ್ಷಕರಾದ ಪ್ರತಿಭಾ ಶಂಕರ್, ಪ್ರಾಂಶುಪಾಲರಾದ ಲೀಲಾವತಿ, ಉಪಪ್ರಾಂಶುಪಾಲರಾದ ಪ್ರತಿಭಾ ನಾಯಕ್, ಶಿಕ್ಷಕರಾದ ಪ್ರತಿಭಾ ಶಂಕರ್ ಭಾಗವಹಿಸಿದ್ದರು.-
8ಕೆಟಿಆರ್.ಕೆ.2ಃ
ತರೀಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ.ರವಿ ಕುಮಾರ್, ಸದಸ್ಯ ಡಾ.ದಿಲೀಪ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.