ಪೊಲೀಸರು ಪತ್ರಕರ್ತರ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿ

| Published : Jan 09 2025, 12:48 AM IST

ಸಾರಾಂಶ

ದಿನದ ೨೪ ಗಂಟೆಗಳ ಕಾಲ ಯಾವಾಗಲೂ ಒತ್ತಡದಲ್ಲಿಯೇ ಕರ್ತವ್ಯ ನಿರ್ವಹಿಸುವ ಪೊಲೀಸರು ಮತ್ತು ಪತ್ರಕರ್ತರಿಗೆ ಕ್ರೀಡೆಗಳು ಮಾನಸಿಕ ಉತ್ಸಾಹ, ದೈಹಿಕ ಸದೃಢತೆಗೆ ಸಹಕಾರಿಯಾಗಲಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವೆಂಕಟೇಶ್ ನಾಯ್ಡು ತಿಳಿಸಿದರು. ಆಗಾಗ್ಗೆ ನಡೆಯುತ್ತಿದ್ದರೇ ನಮ್ಮೊಳಗಿನ ಬಾಂಧವ್ಯದ ಜೊತೆಗೆ ಆರೋಗ್ಯಕ್ಕೂ ಸಹಕಾರಿಯಾಗುತ್ತದೆ. . ಪೊಲೀಸ್ ಇಲಾಖೆ- ಪತ್ರಕರ್ತರ ಸಂಘದಿಂದ ಸೌಹಾರ್ದಯುತ ಕ್ರಿಕೆಟ್ ಇಂತಹ ಪಂದ್ಯಾವಳಿಗಳ ಆಯೋಜನೆಯಿಂದ ಕ್ರೀಡಾಸಕ್ತಿ ಮತ್ತು ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿದೆ ಎಂದರು. ಒಂದು ದಿನದ ಈ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಲಿ ಎಂದು ಇದೇ ವೇಳೆ ಶುಭಹಾರೈಸಿದರು.

ಕನ್ನಡಪ್ರಭ ವಾರ್ತೆ ಹಾಸನ

ದಿನದ ೨೪ ಗಂಟೆಗಳ ಕಾಲ ಯಾವಾಗಲೂ ಒತ್ತಡದಲ್ಲಿಯೇ ಕರ್ತವ್ಯ ನಿರ್ವಹಿಸುವ ಪೊಲೀಸರು ಮತ್ತು ಪತ್ರಕರ್ತರಿಗೆ ಕ್ರೀಡೆಗಳು ಮಾನಸಿಕ ಉತ್ಸಾಹ, ದೈಹಿಕ ಸದೃಢತೆಗೆ ಸಹಕಾರಿಯಾಗಲಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವೆಂಕಟೇಶ್ ನಾಯ್ಡು ತಿಳಿಸಿದರು. ನಗರದ ಸಾಲಗಾಮೆ ರಸ್ತೆ ಬಳಿ ಇರುವ ಸರ್ಕಾರಿ ವಿಜ್ಞಾನ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೊಲೀಸರ ಮತ್ತು ಪತ್ರಕರ್ತರ ನಡುವಿನ ರೋಲಿಂಗ್ ಕಪ್ ಹಾಗೂ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಗೆ ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಇಂತಹ ಕ್ರೀಡೆಗಳು ಆಗಾಗ್ಗೆ ನಡೆಯುತ್ತಿದ್ದರೇ ನಮ್ಮೊಳಗಿನ ಬಾಂಧವ್ಯದ ಜೊತೆಗೆ ಆರೋಗ್ಯಕ್ಕೂ ಸಹಕಾರಿಯಾಗುತ್ತದೆ. ಈ ಕ್ರಿಕೆಟ್ ಪಂದ್ಯಾವಳಿ ನಡೆಸಲು ಪೊಲೀಸ್ ಇಲಾಖೆ ಮತ್ತು ಪತ್ರಕರ್ತರ ಸಂಘದಿಂದ ಹಲವು ಬಾರಿ ದಿನಾಂಕ ನಿಗಧಿಯಾಗಿ ಮುಂದೂಡಲ್ಪಟ್ಟಿತು. ವರ್ಷದ ಒಮ್ಮೆಯಾದರೂ ಇಂತಹ ಕ್ರೀಡೆ ಆಯೋಜನೆ ದೈಹಿಕ, ಮಾನಸಿಕ ಸದೃಢತೆಗೆ ಸಹಕಾರಿ. ಪೊಲೀಸ್ ಇಲಾಖೆ- ಪತ್ರಕರ್ತರ ಸಂಘದಿಂದ ಸೌಹಾರ್ದಯುತ ಕ್ರಿಕೆಟ್ ಇಂತಹ ಪಂದ್ಯಾವಳಿಗಳ ಆಯೋಜನೆಯಿಂದ ಕ್ರೀಡಾಸಕ್ತಿ ಮತ್ತು ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿದೆ ಎಂದರು. ಒಂದು ದಿನದ ಈ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಲಿ ಎಂದು ಇದೇ ವೇಳೆ ಶುಭಹಾರೈಸಿದರು. ಡಿವೈಎಸಿ ಪ್ರಮೋದ್ ಕುಮಾರ್ ಮಾತನಾಡಿ, ಪೊಲೀಸರು ಪ್ರತಿನಿತ್ಯ ಕರ್ತವ್ಯದಲ್ಲಿ ನಿರತರಾಗಿರುತ್ತೇವೆ. ಈ ರೀತಿಯ ಪಂದ್ಯಾವಳಿ ಆಯೋಜನೆಯಿಂದ ಕ್ರೀಡಾಸಕ್ತಿ ಮತ್ತು ಆರೋಗ್ಯ ರಕ್ಷಣೆಗೆ ಸಹಕಾರಿಯಾಗಲಿದೆ. ಇಂತಹ ಕ್ರೀಡೆಗಳನ್ನು ಹೆಚ್ಚೆಚ್ಚು ಆಯೋಜಿಸಲಿ ಎಂದು ಹೇಳಿದರು. ಪ್ರಸ್ತುತ ತಾಂತ್ರಿಕ ಯುಗದ ಮತ್ತು ವೇಗದ ಯುಗದಲ್ಲಿ ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗವಹಿಸುವುದು ಅವಶ್ಯಕವಾಗಿದೆ. ದಿನದಲ್ಲಿ ಇಂತಿಷ್ಟು ಸಮಯ ಕ್ರೀಡಾಸಕ್ತಿ ಹೊಂದುವುದು ಉತ್ತಮ ಅಭ್ಯಾಸವಾಗಿದೆ ಎಂದು ಕಿವಿಮಾತು ಹೇಳಿದರು. ಹಲವು ತಿಂಗಳಿಂದಲೂ ಪೊಲೀಸ್ ಮತ್ತು ಪತ್ರಕರ್ತರ ಸಂಘದಿಂದ ಪಂದ್ಯಾವಳಿ ಆಯೋಜನೆಗೆ ಉದ್ದೇಶಿಸಲಾಗಿತ್ತು. ಆದರೆ ಇಂದು ಕಾಲಕೂಡಿ ಬಂದಿದ್ದು, ಎರಡೂ ತಂಡದ ಸದಸ್ಯರು ಕ್ರೀಡಾ ಸ್ಫೂರ್ತಿ ಮೆರೆಯುವಂತೆ ಹಾಗೂ ಪಂದ್ಯಾವಳಿ ಯಶಸ್ಸಿಗೆ ಶುಭಕೋರಿದರು.

ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪತ್ರಕರ್ತರು ಸೆಣಸಾಡಿ ಉತ್ತಮ ಸ್ಪರ್ಧೆ ನೀಡಿದರೂ ಅಂತಿಮವಾಗಿ ಪೊಲೀಸ್ ಇಲಾಖೆಯ ತಂಡ ಜಯಗಳಿಸಿ ನಗೆ ಬೀರಿತು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಎಚ್‌.ವೇಣುಕುಮಾರ್‌, ಡಿವೈಎಸ್ಪಿ (ಮೀಸಲು ಪಡೆ) ಪಾಲಾಕ್ಷ, ಇನ್ಸ್‌ಪೆಕ್ಟರ್ ಮೋಹನ್ ಕೃಷ , ಇನ್ಸ್‌ಪೆಕ್ಟರ್ ವಿನಯ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಉಪಾಧ್ಯಕ್ಷ ಕೆ.ಎಂ. ಹರೀಶ್, ಖಜಾಂಚಿ ಕುಮಾರ್, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಕೆ.ಆರ್‌. ಮಂಜುನಾಥ್, ಎಸ್. ಆರ್. ಪ್ರಸನ್ನ ಕುಮಾರ್, ಬಿ.ಆರ್. ಉದಯ್‌ ಕುಮಾರ್, ರಾಜೇಶ್, ಇತರರು ಇದ್ದರು.