ಸಾರಾಂಶ
ನಾಗರ ಪಂಚಮಿಯಂದು ಪಕ್ಕದ ಮನೆಯ ರಾಮಣ್ಣ ಕಾಳಪ್ಪ ಅರ್ಕಸಾಲಿ ಎಂಬವರ ಮನೆ ಬಳಿ ತೆರಳಿ ಆಟವಾಡುತ್ತಿದ್ದರು. ಇದೇ ವೇಳೆ ಇತ್ತೀಚಿಗೆ ಸುರಿದ ಮಳೆಯಿಂದ ನೆನೆದಿದ್ದ ಚಾವಣಿ ಹಾಗೂ ಗೋಡೆ ಬಾಲಕಿಯರ ಮೇಲೆ ಬಿದ್ದಿದೆ.
ಕುಂದಗೋಳ:
ಆಟವಾಡುತ್ತಿದ್ದ ಮಕ್ಕಳ ಮೇಲೆ ಮನೆ ಪಕ್ಕದ ಮನೆಯ ಚಾವಣಿ ಕುಸಿದು ಬಾಲಕಿಯೊಬ್ಬಳು ಮೃತಪಟ್ಟು, ಕೂದಲೆಳೆ ಅಂತರದಲ್ಲಿ ಇನ್ನೊಬ್ಬ ಬಾಲಕಿ ಪಾರಾದ ಘಟನೆ ಪಟ್ಟಣದ ಸಾದಗೇರಿ ಓಣಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.ಅಮೃತಾ ಗದಿಗೆಪ್ಪ ಮೆಣಸಗೊಂಡ (5) ಮೃತಪಟ್ಟ ಬಾಲಕಿ. ನಿಹಾರಿಕಾ ಕಮ್ಮಾರ (2) ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ.
ನಾಗರ ಪಂಚಮಿಯಂದು ಪಕ್ಕದ ಮನೆಯ ರಾಮಣ್ಣ ಕಾಳಪ್ಪ ಅರ್ಕಸಾಲಿ ಎಂಬವರ ಮನೆ ಬಳಿ ತೆರಳಿ ಆಟವಾಡುತ್ತಿದ್ದರು. ಇದೇ ವೇಳೆ ಇತ್ತೀಚಿಗೆ ಸುರಿದ ಮಳೆಯಿಂದ ನೆನೆದಿದ್ದ ಚಾವಣಿ ಹಾಗೂ ಗೋಡೆ ಬಾಲಕಿಯರ ಮೇಲೆ ಬಿದ್ದಿದೆ. ಅವರನ್ನು ಹೊರ ತೆಗೆದು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯದಲ್ಲಿಅಮೃತಾ ಮೃತಪಟ್ಟಿದ್ದಾಳೆ.ಘಟನಾ ಸ್ಥಳಕ್ಕಾ ಭೇಟಿ ನೀಡಿದ ತಹಸೀಲ್ದಾರ್ ರಾಜು ಮಾವರಕರ, ಬಿದ್ದ ಮನೆ ಅಕ್ಕಪಕ್ಕದವರನ್ನು ಬೇರೆಡೆ ಸ್ಥಳಾಂತರಿಸಿದ್ದಾರೆ. ಸ್ಥಳಕ್ಕೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಭೇಟಿ ನೀಡಿ ಬಾಲಕಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.