ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಸುವರ್ಣಾವಕಾಶ ಕಲ್ಪಿಸುತ್ತದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಹೇಳಿದರು.ತಾಲೂಕಿನ ಡೋಣೂರ ಗ್ರಾಮದ ನೂತನ ಹೈಸ್ಕೂಲಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡೋಣೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೋಧನೆಯ ಜೊತೆಗೆ ಮನೋರಂಜನೆಯ ಆಟಗಳು, ಕಥೆ ಹೇಳುವದು, ಛದ್ಮವೇಷ, ನೃತ್ಯ, ಜಾನಪದ ಸಾಹಿತ್ಯ, ವಚನ ಸಾಹಿತ್ಯ ಇವು ಮಕ್ಕಳ ಶ್ರೇಯೋಭಿವೃದ್ಧಿಗೆ ಮಹತ್ವದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮ ರೂಪಿಸಿರುವದು ಶ್ಲಾಘನೀಯ ಎಂದರು.ಬಿ.ಆರ್.ಪಿ ಭಾರತಿ ಪಾಟೀಲ, ಶಿಕ್ಷಣ ಸಂಯೋಜಕ ಶರಣು ಮಣೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ಯುವರಾಜ ಪಡಗಾನೂರ, ಶಿವಾನಂದ ಕೆರೂಟಗಿ, ಬಸವರಾಜ ಹಳಕಟ್ಟಿ, ಎ.ಎಸ್.ಪಾಟೀಲ, ಭಾರತಿ ಕುಲಕರ್ಣಿ, ಅಶೋಕ ಚಳ್ಳಗಿ, ಕೆ.ಆರ್.ಬಿರಾದಾರ ಇದ್ದರು. ಸಿ.ಆರ್.ಪಿ.ಎಚ್.ಎಸ್.ಡೋಮನಾಳ ಸ್ವಾಗತಿಸಿದರು. ಎನ್.ಜಿ.ಬಿರಾದಾರ ನಿರೂಪಿಸಿದರು. ಎಂ.ಎಸ್.ಉತ್ನಾಳ ವಂದಿಸಿದರು. ಡೋಣೂರ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಡೋಣೂರ, ನೇಗಿನಾಳ, ಮುಳ್ಳಾಳ, ಬೊಮ್ಮನಹಳ್ಳಿ, ಮಾರ್ಕಬ್ಬಿನಹಳ್ಳಿ, ಬಿಸನಾಳ, ಯಂಭತ್ನಾಳ ಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))