ಮಕ್ಕಳ ಶೈಕ್ಷಣಿಕ ಪ್ರಗತಿಗೆ ಉತ್ತಮ ಅಡಿಪಾಯ: ಶಿವಸುಜ್ಞಾನತೀರ್ಥ ಸ್ವಾಮೀಜಿ

| Published : Feb 03 2024, 01:45 AM IST

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಉತ್ತಮ ಅಡಿಪಾಯ: ಶಿವಸುಜ್ಞಾನತೀರ್ಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತಮ ಅಡಿಪಾಯ ಹಾಕಿದಾಗ ಮಾತ್ರ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮುಂದೆ ಬರಲು ಸಾಧ್ಯವಾಗಿಲಿದೆ ಎಂದು ಅರೆಮಾದನಹಳ್ಳಿ ಮಹಾ ಸಂಸ್ಥಾನ ಮಠದ ಶಿವಸುಜ್ಞಾನತೀರ್ಥ ಸ್ವಾಮೀಜಿ ತಿಳಿಸಿದರು. ಅರಕಲಗೂಡಲ್ಲಿ ಜೆಎಸ್‌ಪಿ ಪ್ರಾಥಮಿಕ ಶಾಲೆ 32ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಜೆಎಸ್‌ಪಿ ಶಾಲಾ ವಾರ್ಷಿಕೋತ್ಸವಕನ್ನಡಪ್ರಭ ವಾರ್ತೆ ಅರಕಲಗೂಡು

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತಮ ಅಡಿಪಾಯ ಹಾಕಿದಾಗ ಮಾತ್ರ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮುಂದೆ ಬರಲು ಸಾಧ್ಯವಾಗಿಲಿದೆ ಎಂದು ಅರೆಮಾದನಹಳ್ಳಿ ಮಹಾ ಸಂಸ್ಥಾನ ಮಠದ ಶಿವಸುಜ್ಞಾನತೀರ್ಥ ಸ್ವಾಮೀಜಿ ತಿಳಿಸಿದರು.

ರಾಮನಾಥಪುರ ಐಬಿ ಸರ್ಕಲ್‌ನಲ್ಲಿರುವ ಜಗದ್ಗುರು ಶ್ರೀ ವಿಶ್ವಕರ್ಮ ಪೀಠ ಅರೆಮಾದನಹಳ್ಳಿ ಮಹಾ ಸಂಸ್ಥಾನ ಮಠದ ಜೆಎಸ್‌ಪಿ ಪ್ರಾಥಮಿಕ ಶಾಲೆ 32ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಇಂದಿನ ಪೀಳಿಗೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ವೇಳೆಗೆ ಶಾಲೆಗೆ ಕಳುಹಿಸಿಕೊಡಬೇಕು. ಶಿಕ್ಷಕರು ನಿತ್ಯ ಹೇಳಿಕೊಡುವ ಪಾಠವನ್ನು ಮನೆಯಲ್ಲಿಯೂ ಸಹ ತಮ್ಮ ಮಕ್ಕಳಿಗೆ ಅವರ ಪಾಠದ ಕಡೆ ಒತ್ತು ನೀಡಬೇಕು. ವಿದ್ಯಾಭ್ಯಾಸದ ಜತೆಗೆ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶರಣರ ವಿಚಾರಧಾರೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಮಕ್ಕಳ ಶೈಕ್ಷಣಿಕ ಭದ್ರ ಬುನಾದಿಗೆ ಪೊಷಕರು ಹೆಚ್ಚಿನ ಒತ್ತು ನೀಡುವಂತೆ ಕಿವಿ ಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಹೆಚ್ಚು ಅಂಕ ಪಡೆದ ಹಾಗೂ ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಫಲಕಗಳನ್ನು ನೀಡಿ ಗೌರವಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪವನ್ ಕುಮಾರಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಆರ್.ಎಸ್.ನರಸಿಂಹಮೂರ್ತಿ, ಸದಸ್ಯರಾದ ಪುಪ್ಪ, ಸಿದ್ದರಾಜು, ಸಿಆರ್‌ಪಿ ಸತೀಶ್, ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ ಎನ್ ಕುಮಾರಸ್ವಾಮಿ, ಮುಖಂಡ ಗೋವಿಂದರಾಜು, ಹಿರಿಯ ಪತ್ರಕರ್ತರಾದ ದೇವಕಿ ಚಂದ್ರಶೇಖರ್, ಗಂಗೇಶ್, ಶಿವಣ್ಣ ರುದ್ರಪಟ್ಟಣ, ಗೋವಿಂದೇಗೌಡ, ಮಹಾಸಂಸ್ಥಾನ ಮಠದ ಭಾರತ ಪಾರು ಪತ್ತೆಗಾರ್ ಶೇಷಕುಮಾರ್, ಸಲಹೆಗಾರರಾದ ಸ್ವಾಮಿ, ಮುಖ್ಯ ಶಿಕ್ಷಕ ರವಿ ಇದ್ದರು.ರಾಮನಾಥಪುರದಲ್ಲಿ ಜೆ.ಎಸ್.ಪಿ. ಶಾಲೆಯ ವಾರ್ಷಿಕೋತ್ಸವವನ್ನು ಅರೆಮಾದನಹಳ್ಳಿ ಮಹಾ ಸಂಸ್ಥಾನ ಮಠದ ಶಿವಸುಜ್ಞಾನತೀರ್ಥ ಸ್ವಾಮೀಜಿ ಉದ್ಘಾಟಿಸಿದರು.