ಸಾರಾಂಶ
ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸಗಳು ಮಾಡದೇ ಭ್ರಷ್ಟಾಚಾರದಲ್ಲಿ ಮುಳುಗಿ ಹೊಗಿದೆ ಮತ್ತು ಬೆಲೆ ಏರಿಕೆಯಿಂದ ಸಾಮಾನ್ಯ ಜನರನ್ನು ಸುಲಿಗೆ ಮಾಡುತ್ತಿದೆ. ಇಂತಹ ದುರಾಡಳಿ ಕಾಂಗ್ರೆಸ್ ಸರ್ಕಾರ ತೊಲಗಲಿ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಆಲಮೇಲ: ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸಗಳು ಮಾಡದೇ ಭ್ರಷ್ಟಾಚಾರದಲ್ಲಿ ಮುಳುಗಿ ಹೊಗಿದೆ ಮತ್ತು ಬೆಲೆ ಏರಿಕೆಯಿಂದ ಸಾಮಾನ್ಯ ಜನರನ್ನು ಸುಲಿಗೆ ಮಾಡುತ್ತಿದೆ. ಇಂತಹ ದುರಾಡಳಿ ಕಾಂಗ್ರೆಸ್ ಸರ್ಕಾರ ತೊಲಗಲಿ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ತಾಲೂಕಿನ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟ್ಟಣದಲ್ಲಿ ಬೃಹರ್ ಪ್ರತಿಭಟನೆ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮದ ಅವ್ಯವಹಾರ ಮತ್ತು ಬೆಲೆ ಏರಿಕೆ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಹಿಂದುಳಿದ ದಲಿತರಿಗೆ ಮೀಸಲಿದ್ದ ವಾಲ್ಮೀಕಿ ನಿಗಮದಲ್ಲಿನ ₹175 ಕೋಟಿ ಅನುದಾನ ತೆಲಂಗಾಣದ ಚುನಾವಣೆಗೆ ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಮಾಡಿದೆ. ಇದರಿಂದ ಮನನೊಂದ ಅಧಿಕಾರಿ ಚಂದ್ರಶೇಕರ ಆತ್ಮಹತ್ಯ ಮಾಡಿಕೊಂಡಿದ್ದಾರೆ. ಅದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆ ಹೊತ್ತು ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಸಾವಿಗೆ ನ್ಯಾಯ ಒದಗಿಸಬೇಕು ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ನಿಗಮದ ₹175 ಕೊಟಿ ಬಹುದೊಡ್ಡ ಹಗರಣ ಮಾಡುವ ಮೂಲಕ ಭ್ರಷ್ಟಾಚಾರವೇ ಅವರ ಕಾಯಕ ಮಾಡಿಕೊಂಡು ರಾಜ್ಯದ ಜನರನ್ನು ವಂಚಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳು ರಾಜ್ಯದ ಎಲ್ಲ ಫಲಾನುಭವಿಗಳಿಗೆ ತಲುಪಲು ಸಾಧ್ಯವಾಗಿಲ್ಲ. ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಖಜಾನೆ ಲೋಟಿ ಮಾಡುತ್ತಿದೆ. ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲದ ಸ್ಥಿತಿಗೆ ಬಂದೊದಗಿದೆ ಎಂದರು.ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ಎನ್. ಪಾಟೀಲ ಮಾತನಾಡಿದರು. ಮಂಡಲ ಬಿಜೆಪಿ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಶ್ರೀಶೈಲ ಗೌಡ ಮಾಗಣಗೇರಿ ಬಿರಾದಾರ, ಶಿವಾನಂದ ಮಾರ್ಸನಳ್ಳಿ, ಹರೀಶ ಎಂಟಮಾನ, ಈರಣ್ಣ ರಾವೂರ ಮುಂತಾದವರು ಮಾತನಾಡಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಿ.ಎಚ್. ಬಿರಾದಾರ, ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ, ಸಂತೋಷ ಕ್ಷೇತ್ರಿ ಬಸವರಾಜ ತಾವರಗೇರಿ, ಶ್ರೀಮಂತ ನಾಗೂರ, ಗುಂಡು ಮೇಲಿನಮನಿ, ಪಪಂ ಸದಸ್ಯ ಚಂದ್ರಶೇಖರ ಹಳೆಮನಿ, ಮುಖಂಡರಾದ ಶ್ರೀಶೈಲ ಭೋವಿ, ಅಪ್ಪು ಶೆಟ್ಟಿ, ಅಶೋಕ ಬಡದಾಳ, ಆಕಾಶ ಗಂದಗೆ ಮೈಬೂಬ ಮಸಳಿ, ಡಿ.ಸಿ.ಬಮ್ಮನಹಳ್ಳಿ, ವಿರುಪಾಕ್ಷಿ ಗಂಗನಹಳ್ಳಿ, ಸಿದ್ದರಾಯ ತಳವಾರ, ಶಿವು ಗುರಕಾರ, ದೇವಪ್ಪ ಗುಣಾರಿ, ಸಿದ್ದು ಹಾವಳಗಿ, ತಾ.ಪಂ ಮಾಜಿ ಅಧ್ಯಕ್ಷೆ ಮಹಾನಂದ ಸಾಲಕ್ಕಿ, ಸಾವಿತ್ರಿಬಾಯಿ ಹಿಕ್ಕನಗುತ್ತಿ, ಮದನ ರಜಪೂತ, ಕಮಲಕರ ಪತ್ತಾರ, ಮಾಣಿಕ ಕಲಕುಟಗೇರ, ಶಿವು ತಳವಾರ ಸೇರಿದಂತೆ ಇತರರು ಇದ್ದರು.