ಸಾರಾಂಶ
ನಗರದ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗೆ ನ್ಯಾಕ್ ನಿಂದ ಎ ಪ್ಲಸ್ ಗ್ರೇಡ್ ಬಂದಿದೆ ಎಂದು ಸಂಸ್ಥೆಯ ಡಾ. ಡಿ.ಬಿ.ಗಣೇಶ ದಾವಣಗೆರೆಯಲ್ಲಿ ಹೇಳಿದ್ದಾರೆ.
ದಾವಣಗೆರೆ: ನಗರದ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗೆ ನ್ಯಾಕ್ ನಿಂದ ಎ ಪ್ಲಸ್ ಗ್ರೇಡ್ ಬಂದಿದೆ ಎಂದು ಸಂಸ್ಥೆಯ ಡಾ. ಡಿ.ಬಿ.ಗಣೇಶ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜ್ ರಾಷ್ಟ್ರೀಯ ಮೌಲ್ಯಮಾಪನ ಮಾನ್ಯತಾ ಮಂಡಳಿ (ನ್ಯಾಕ್)ಯಿಂದ ಪ್ರತಿಷ್ಠಿತ ಎ ಪ್ಲಸ್ ಗ್ರೇಡ್ ಪಡೆದಿದೆ. ಇದರಿಂದ ದಾವಣಗೆರೆಯಲ್ಲಿಯೇ ಮೊದಲ ನ್ಯಾಕ್ ಎ+ ಗ್ರೇಡ್ ಹೊಂದಿದ ತಾಂತ್ರಿಕ ಶೈಕ್ಷಣಿಕ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ. ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಅಡಿಯಲ್ಲಿ ಬರುವ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. 2011ರಲ್ಲಿ ಸ್ಥಾಪಿತ ಈ ಸಂಸ್ಥೆ, ತನ್ನ ಮೊದಲ ನ್ಯಾಕ್ ಅಕ್ರೆಡಿಟೇಶನ್ ಪ್ರಕ್ರಿಯೆಯಲ್ಲಿ ಎ ಪ್ಲಸ್ ಗ್ರೇಡ್ ಸಾಧಿಸಿದ್ದು, ಇದು ಸಂಸ್ಥೆಯ ಶೈಕ್ಷಣಿಕ ಗುಣಮಟ್ಟದ ಬದ್ಧತೆ ಮತ್ತು ಪರಿಶ್ರಮ ತೋರಿಸುತ್ತದೆ ಎಂದರು.ನ್ಯಾಕ್ ನ ಹೊಸ ಮೌಲ್ಯಮಾಪನ ನಿಯಮಗಳ ಪ್ರಕಾರ, ಜೈನ್ ಇನ್‌ಸ್ಟಿಟ್ಯೂಟ್ 3.31 ಸಿಜಿಪಿಎ (4.0 ರಲ್ಲಿ) ಗಳಸಿ ವಿಶೇಷವಾದ ಪ್ರಶಂಸೆಗೆ ಪಾತ್ರವಾಗಿದೆ. ಈ ಸಾಧನೆಯು ಸಂಸ್ಥೆಯ ಎಲ್ಲ ಪಾಲುದಾರರ ಶ್ರಮ ಮತ್ತು ಉತ್ತಮ ಶೈಕ್ಷಣಿಕ ನೀತಿಗಳನ್ನು ಪ್ರತಿಬಿಂಬಿಸುತ್ತದೆ. ಸಂಸ್ಥೆಯ ಉತ್ತಮ ವಿದ್ಯಾರ್ಥಿ ಬೆಂಬಲ ವ್ಯವಸ್ಥೆ, ನವೀನ ಸಂಶೋಧನೆ ಮತ್ತು ಆವಿಷ್ಕಾರ, ಉತ್ತಮ ಶೈಕ್ಷಣಿಕ ನೀತಿ, ವಿದ್ಯಾರ್ಥಿಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಸಾಧನೆಗಳು ಹಾಗೂ ಉತ್ತಮ ಕೈಗಾರಿಕ ಸಂಯೋಜನೆಗಳನ್ನು ಗುರುತಿಸಿ ನ್ಯಾಕ್ ಸಂಸ್ಥೆಯು ಪ್ರತಿಷ್ಠಿತ ಎ+ ಗ್ರೇಡ್ ನೀಡಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಡಾ.ರಾಜೇಂದ್ರ ಸಲೋನಿ, ರಾಹುಲ್, ಸಂತೋಷ್ ಇದ್ದರು.- - - -16ಕೆಡಿವಿಜಿ35: