ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ , ಚಿಣ್ಣರ ಲೋಕ ಸೇವಾಬಂಧು ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಜನವರಿ 26ರ ವರೆಗೆ ನಡೆಯಲಿರುವ ಕರಾವಳಿ ಕಲೋತ್ಸವ ಮತ್ತು ಬಹುಸಂಸ್ಕೃತಿ ಸಂಭ್ರಮಕ್ಕೆ ಶನಿವಾರ ಬಿ.ಸಿ. ರೋಡಿನ ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಮೈದಾನದಲ್ಲಿ ಚಾಲನೆ ನೀಡಲಾಯಿತು. ಅಸೋಸಿಯೇಟ್ಸ್ ಪಾಲುದಾರ ಉದ್ಯಮಿ ಜಗನ್ನಾಥ ಚೌಟ ಮಾಣಿ ಬದಿಗುಡ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದರು. ಮಕ್ಕಳಿಗೆ ಜಿಲ್ಲೆಯ ಸಂಸ್ಕೃತಿಯ ವಿಚಾರವನ್ನು ತಿಳಿಸುವುದರ ಜೊತೆ ವ್ಯಕ್ತಿಗತ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದು ಅರು ತಿಳಿಸಿದರು. ಜ್ಯೋತಿಷಿ ಅನಿಲ್ ಪಂಡಿತ್, ದ.ಕ. ಜಿಲ್ಲಾ ಮ್ಯಾನೆಜ್‌ಮೆಂಟ್ ವರ್ಕಿಂಗ್ ಕಾರ್ಯದರ್ಶಿ ಕೆ.ಪಿ. ಉಮ್ಮರ್ ಮುಸ್ಲಿಯಾರ್ ಪಾಂಡವರಕಲ್ಲು, ಬಂಟ್ವಾಳ ಪುರಸಭಾ ಅಧ್ಯಕ್ಷ ವಾಸು ಪೂಜಾರಿ, ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ ಜೈನ್ , ಚಿಣ್ಣರ ಅಧ್ಯಕ್ಷೆ ದಿಯಾ ರಾವ್, ಗೌರವಾಧ್ಯಕ್ಷ ಜಯರಾಮ ರೈ, ಉಪಾಧ್ಯಕ್ಷೆ ಪೌಝಿಯಾ, ಗೌರವ ಸಲಹೆಗಾರ ಅಶೋಕ್ ಶೆಟ್ಟಿ ಸರಪಾಡಿ, ನಿರ್ದೇಶಕರಾದ ಇಬ್ರಾಹಿಂ ಕೈಲಾರ್, ಶೋಭಾ ಶೆಟ್ಟಿ, ರಾಜಾ ಚೆಂಡ್ತಿಮಾರ್, ಕಾರ್ಯಕಾರಿ ಸಮಿತಿ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಪ್ರೇಮನಾಥ ಶೆಟ್ಟಿ ಅಂತರ, ಶಶಿಧರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು
ಅಂತಾರಾಷ್ಟ್ರೀಯ ಕ್ರೀಡಾಪಟು ಸಚಿನ್ ಸುವರ್ಣ ಅವರಿಗೆ ಉದಯ ಚೌಟ ಸಾಧನ ಪ್ರಶಸ್ತಿ ನೀಡಿ ಗೌರವಿಸಿದರು. ಬಹುಮುಖ ಪ್ರತಿಭೆ ಮಾ. ಆಶಿಕ್ ಎಂ. ರಾವ್‌ಗೆ ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಶ್ರೀ ಅನ್ನಪೂರ್ಣೇಶ್ವರಿ ಕಲಾ ಮಂಟಪದಿಂದ ಹೊರಟ ಜಾನಪದ ದಿಬ್ಬಣದ ಮೆರವಣಿಗೆಯನ್ನು ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ ಧರ್ಮಗುರು ರೆ.ಫಾ. ವಲೇರಿಯನ್ ಡಿಸೋಜ, ದ.ಕ. ಜಿಲ್ಲಾ ಮ್ಯಾನೆಜ್‌ಮೆಂಟ್ ವರ್ಕಿಂಗ್ ಕಾರ್ಯದರ್ಶಿ ಕೆ.ಪಿ. ಉಮ್ಮರ್ ಮುಸ್ಲಿಯಾರ್ ಪಾಂಡವರಕಲ್ಲು, ಅನ್ನಪೂರ್ಣೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಈಶ್ಚರ ಭಟ್ ಮಾದಕಟ್ಟೆ ಉದ್ಘಾಟಿಸಿದರು.
ಸುಮಾರು 250 ಮಂದಿ ಕಲಾವಿದರ ಜೊತೆ ರಾಜ್ಯ ಹಾಗೂ ಹೊರ ರಾಜ್ಯದ ಜಾನಪದ ತಂಡಗಳು ಭಾಗವಹಿಸುವಿಕೆ ಮೂಲಕ ರಂಜಿಸಿದರು. ಪ್ರಧಾನ ಸಂಚಾಲಕ ಮೋಹನ್ ದಾಸ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸ್ವಾಗತ ಸಮಿತಿ ಅಧ್ಯಕ್ಷ ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ಪ್ರಜ್ವಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.