ಮಾಗಡಿಯಲ್ಲಿ ಅದ್ಧೂರಿ ಗಜಗೌರಿ ಉತ್ಸವ

| Published : Jan 20 2024, 02:04 AM IST

ಸಾರಾಂಶ

ಮಾಗಡಿ: ಪಟ್ಟಣದ ವಾಸವಿ ದೇವಸ್ಥಾನದಲ್ಲಿ ಆರ್ಯವೈಶ್ಯ ಮಹಿಳಾ ಮಂಡಳಿಯಿಂದ ಮೂರು ದಿನಗಳ ಕಾಲ ಗಜಗೌರಿ ಉತ್ಸವ ವೈಭವದಿಂದ ನೆರವೇರಿತು.

ಮಾಗಡಿ: ಪಟ್ಟಣದ ವಾಸವಿ ದೇವಸ್ಥಾನದಲ್ಲಿ ಆರ್ಯವೈಶ್ಯ ಮಹಿಳಾ ಮಂಡಳಿಯಿಂದ ಮೂರು ದಿನಗಳ ಕಾಲ ಗಜಗೌರಿ ಉತ್ಸವ ವೈಭವದಿಂದ ನೆರವೇರಿತು. ಉತ್ಸವದ ಅಂಗವಾಗಿ ಅಭಿಷೇಕ, ಅಷ್ಟೋತ್ತರ, ಸಹಸ್ರನಾಮ ಪೂಜೆ, ಶ್ರೀ ಗಜಗೌರಿ ಘನ ಹೋಮ, ಬಾಗಿನ ಸಮರ್ಪಣೆ ಪ್ರತಿದಿನವೂ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಕೊನೆಯ ದಿನದ ಮೆರವಣಿಗೆಗೆ ಆನೆ ಮೆರಗು:

ಉತ್ಸವದ ಕೊನೆಯ ದಿನ ಗಜಗೌರಿ ಅಲಂಕೃತ ಗಜವಾಹಿನಿ ಗೌರಿ ಮಾತೆಯ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆನೆಯ ಮೇಲೆ ಅಲಂಕೃತ ದೇವಿಯನ್ನು ಕೂರಿಸಿ ಪಟ್ಟಣದಲ್ಲಿ ಮೆರವಣಿಗೆ ಮಾಡಿದ್ದು ಉತ್ಸವಕ್ಕೆ ಮತ್ತಷ್ಟು ಮೆರಗನ್ನು ನೀಡಿತು. ಆನೆ ಸಾಗುತ್ತಿದ್ದಂತೆ ಆರ್ಯವೈಶ್ಯ ಸಮಾಜದ ಯುವಕರು ದೇವಿಗೆ ಹೂ ಮಳೆಸುರಿಸುವ ಮೂಲಕ ಭವ್ಯ ಸ್ವಾಗತ ಕೋರಿದರು. ಬಳಿಕ ದೇವಿಯನ್ನು ಪಟ್ಟಣದ ಗುಂಡಯ್ಯನ ಕಲ್ಯಾಣಿಯಲ್ಲಿ ತೆಪ್ಪೋತ್ಸವ ಮಾಡುವ ಮೂಲಕ ಮೂರು ದಿನಗಳ ಕಾಲ ನಡೆದ ಗಜಗೌರಿ ಉತ್ಸವಕ್ಕೆ ಅದ್ದೂರಿಯಾಗಿ ತೆರೆಕಂಡಿತು.

ಗಜ ಗೌರಿ ಉತ್ಸವದ ಅಂಗವಾಗಿ ದೇವಾಲಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮೂರು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳ ಮೂಲಕ ಲೋಕಕಲ್ಯಾಣಾರ್ಥ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಆರ್ಯವೈಶ್ಯ ಮಹಿಳಾ ಮಂಡಳಿಯ ಅಧ್ಯಕ್ಷರಾದ ಮೀರಾ ಶಿವಕುಮಾರ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಿ ಉಪಾಧ್ಯಕ್ಷರಾದ ಜ್ಯೋತಿ ನಂಜುಂಡಸ್ವಾಮಿ, ಕಾರ್ಯದರ್ಶಿ, ರೂಪರಾಜ್, ಖಜಾಂಚಿ ಆರತಿ ಮದನ್, ನಿರ್ದೇಶಕರಾದ ಉಷಾ ನಾಗರಾಜ್, ವೈಭವಿ ನವೀನ್, ರಾಜಲಕ್ಷ್ಮಿ, ಲಕ್ಷ್ಮೀನಾರಾಯಣ, ಲಕ್ಷ್ಮಿ ಗುಪ್ತ, ಪುರಸಭಾ ಸದಸ್ಯ ಕೆ.ವಿ.ಬಾಲು, ಆರ್ಯವೈಶ್ಯ ಸಮಾಜದ ಮುಖಂಡರು ಭಾಗವಹಿಸಿದ್ದರು.

ಪೋಟೋ 19ಮಾಗಡಿ1:

ಮಾಗಡಿಯ ಪ್ರಮುಖ ಬೀದಿಯಲ್ಲಿ ಗಜಗೌರಿ ಉತ್ಸವದ ಅಂಗವಾಗಿ ಆನೆ ಮೇಲೆ ಅಲಂಕೃತ ಗಜಗೌರಿ ಅಮ್ಮನವರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.