ಸಾರಾಂಶ
ಅಮೀನಗಡ: ಸೂಳೇಬಾವಿಯಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಭಾವಚಿತ್ರ ಹಾಗೂ ಮುತ್ತೈದೆಯರಿಂದ ಕುಂಭ ಮೆರವಣಿಗೆ, ಮಾಲಾಧಾರಿಗಳಿಂದ ಶರಣುಘೋಷದೊಂದಿಗೆ ಅದ್ಧೂರಿಯಾಗಿ ಜರುಗಿತು.
ಕನ್ನಡಪ್ರಭವಾರ್ತೆ ಅಮೀನಗಡ
ಸೂಳೇಬಾವಿಯಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಭಾವಚಿತ್ರ ಹಾಗೂ ಮುತ್ತೈದೆಯರಿಂದ ಕುಂಭ ಮೆರವಣಿಗೆ, ಮಾಲಾಧಾರಿಗಳಿಂದ ಶರಣುಘೋಷದೊಂದಿಗೆ ಅದ್ಧೂರಿಯಾಗಿ ಜರುಗಿತು.ಮೆರವಣಿಗೆಗೆ ಮುರನಾಳದ ಮೇಘರಾಜೇಂದ್ರ ಶ್ರೀಗಳು, ಕೆಲೂರಿನ ಬಸವರಾಜೇಂದ್ರ ಅಜ್ಜನವರು ಹಾಗೂ ಸೂಳೇಬಾವಿ ಗ್ರಾಮ ಪಂಚಾಯತಿ ಅಧ್ಯಕ್ಷ ಪಿಡ್ಡಪ್ಪ ಕುರಿ ರಿಬ್ಬನ್ ಕಟ್ ಮಾಡಿ ಚಾಲನೆ ನೀಡಿದರು. ಗ್ರಾಮದ ಶ್ರೀ ಶಾಖಾಂಭರಿ ಕಲ್ಯಾಣ ಮಂಟಪದಿಂದ ಪ್ರಾರಂಭಗೊಂಡ ಮೆರವಣಿಗೆ, ಭಾವೈಕ್ಯತಾ ಮಹಾದ್ವಾರ, ಶ್ರೀ ಗಣೇಶ ಗುಡಿ, ಶ್ರೀ ಶಾಖಾಂಭರಿ ದೇವಸ್ಥಾನ, ಗಾಂಧಿ ಸರ್ಕಲ್, ಗ್ರಾಮ ಪಂಚಾಯತಿ ಕಚೇರಿ, ಶ್ರೀ ಶಾಖಾಂಭರಿ ನೇಕಾರ ಸಂಘ, ಸರ್ಕಾರಿ ಮಾದರಿಯ ಶಾಲೆ, ಗೊರ್ಜನಾಳ ರಸ್ತೆ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಅಮೀನಗಡ-ಗುಡೂರ ರಸ್ತೆ, ಖಾದಿ ಕೇಂದ್ರದ ಮೂಲಕ ಸಂಚರಿಸಿತು. ಮೆರವಣಿಗೆಯಲ್ಲಿ ಗ್ರಾಪಂ ಸದಸ್ಯ ಹುಲಿಗೆಪ್ಪ ಕುರಿ, ಮಾಜಿ ಸದಸ್ಯ ನಾಗೇಶ ಗಂಜೀಹಾಳ, ಹಿರಿಯ ಗುರುಸ್ವಾಮಿ ನರಸಿಂಹಮೂರ್ತಿ, ಮಾಲಾಧಾರಿಗಳಾದ ಮಂಜುನಾಥ ಬದ್ರಣ್ಣವರ, ರವಿ ಬಳ್ಳಾ, ಶ್ರೀಶೈಲ ಹಿರೇಮಠ, ಪರಶುರಾಮ ಗಂಜೀಹಾಳ, ಸೋಮಣ್ಣ ರಡ್ಡೇರ ಹಾಗೂ ವಿವಿಧ ಗ್ರಾಮಗಳ ಮಾಲಾಧಾರಿಗಳು, ಮಹಿಳೆಯರು ಪಾಲ್ಗೊಂಡಿದ್ದರು.