ಶೌರ್ಯ ಜಾಗರಣ ರಥಯಾತ್ರೆ ಪ್ರಯುಕ್ತ ಬೃಹತ್ ಶೋಭಾಯಾತ್ರೆ

| Published : Oct 10 2023, 01:00 AM IST

ಶೌರ್ಯ ಜಾಗರಣ ರಥಯಾತ್ರೆ ಪ್ರಯುಕ್ತ ಬೃಹತ್ ಶೋಭಾಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ವಿಶ್ವಹಿಂದು ಪರಿಷತ್‌ ಬಜರಂಗದಳದ ವಿವಿಧ ಘಟಕಗಳ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.
ಕನ್ನಡಪ್ರಭ ವಾರ್ತೆ ಮಂಗಳೂರು ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ಶೌರ್ಯ ಜಾಗರಣ ರಥಯಾತ್ರೆ ಪ್ರಯುಕ್ತ ನಗರದ ಡಾ. ಅಂಬೇಡ್ಕರ್‌ ವೃತ್ತದಿಂದ ಕದ್ರಿ ಮೈದಾನದವರೆಗೆ ಬೃಹತ್‌ ಶೋಭಾಯಾತ್ರೆ ನಡೆಯಿತು. ಆರೆಸ್ಸೆಸ್‌ ಮುಖಂಡ ಡಾ. ಪ್ರಭಾಕರ ಭಟ್‌ ಕಲ್ಲಡ್ಕ ಅವರು ತೆಂಗಿನಕಾಯಿ ಒಡೆದು, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. ಶೌರ್ಯ ಮೆರೆದ ಸಮಾಜ: ಬಳಿಕ ಮಾತನಾಡಿದ ಪ್ರಭಾಕರ ಭಟ್‌, ಹಿಂದೂ ಸಮಾಜದ್ದು ಸೋಲಿನ ಇತಿಹಾಸವಲ್ಲ. ಹಿಂದು ಸಮಾಜ ಸಾವಿರಾರು ವರ್ಷಗಳಿಂದ ಪರಕೀಯರ ಆಕ್ರಮಣಗಳನ್ನು ಎದುರಿಸಿ ಶೌರ್ಯ ಮೆರೆದಿದೆ. ಹಿಂದು ಸಮಾಜ ಧೈರ್ಯ, ಪರಾಕ್ರಮ ಇರುವ ಸಮಾಜ ಎಂದು ಹೇಳಿದರು. ಹಿಂದುಗಳ ಸ್ವಾಭಿಮಾನದ ಪ್ರತೀಕವಾಗಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಮುಂದಿನ ಜನವರಿಯಲ್ಲಿ ಉದ್ಘಾಟನೆ ಆಗಲಿದೆ. ಹಿಂದು ಸಮಾಜ ಜಾತಿ, ಪಂಥಗಳ ಭೇದ ಮರೆತು ಒಗ್ಗಟ್ಟಾಗಬೇಕು. ಹಿಂದು ಸಮಾಜದ ಶೌರ್ಯ, ಪರಾಕ್ರಮಗಳನ್ನು ನೆನಪಿಸುವ ಪ್ರಯತ್ನವಾಗಿ ಶೌರ್ಯ ಜಾಗರಣ ರಥಯಾತ್ರೆ ನಡೆಯುತ್ತಿದೆ ಎಂದರು. ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ವಿಶ್ವಹಿಂದು ಪರಿಷತ್‌ ಬಜರಂಗದಳದ ವಿವಿಧ ಘಟಕಗಳ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಬಿಗಿ ಬಂದೋಬಸ್ತ್‌ ಸಮಾವೇಶ ಹಾಗೂ ಮೆರವಣಿಗೆ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಶೋಭಾಯಾತ್ರೆ ವೇಳೆ ಪಿವಿಎಸ್‌, ಬಂಟ್ಸ್‌ ಹಾಸ್ಟೆಲ್‌, ಅಂಬೇಡ್ಕರ್‌ ವೃತ್ತ ಮಾರ್ಗದಲ್ಲಿ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳ ಸಂಚಾರ ನಿಷೇಧಿಸಿ ಬದಲಿ ಮಾರ್ಗದಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಯಿತು. ಸಮಾವೇಶ ನಡೆಯುವ ಕದ್ರಿ ಮೈದಾನ ಪರಿಸರದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.