ಜ್ಯೋತಿ ರಥಯಾತ್ರೆಗೆ ಮುಂಡರಗಿಯಲ್ಲಿ ಅದ್ದೂರಿ ಸ್ವಾಗತ

| Published : Jun 26 2024, 12:33 AM IST

ಜ್ಯೋತಿ ರಥಯಾತ್ರೆಗೆ ಮುಂಡರಗಿಯಲ್ಲಿ ಅದ್ದೂರಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೊರಡಿಸಿರುವ ಕರ್ನಾಟಕ ಸಂಭ್ರಮ-50ರ ''ಜ್ಯೋತಿ ರಥಯಾತ್ರೆ'' ಮಂಗಳವಾರ ಮುಂಡರಗಿ ಪಟ್ಟಣಕ್ಕೆ ಆಗಮಿಸಿದ್ದು, ತಾಲೂಕು ಆಡಳಿತ ಸ್ವಾಗತಿಸಿತು.

ಕನ್ನಡಪ್ರಭ ವಾರ್ತೆ ಮುಂಡರಗಿ

ಕರ್ನಾಟಕಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರೈಸಿ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೊರಡಿಸಿರುವ ಕರ್ನಾಟಕ ಸಂಭ್ರಮ-50ರ ''''ಜ್ಯೋತಿ ರಥಯಾತ್ರೆ'''' ಮಂಗಳವಾರ ಮುಂಡರಗಿ ಪಟ್ಟಣಕ್ಕೆ ಆಗಮಿಸಿದ್ದು, ತಾಲೂಕು ಆಡಳಿತ ಸ್ವಾಗತಿಸಿತು.

ತಹಸೀಲ್ದಾರ್ ಧನಂಜಯ ಮಾಲಗತ್ತಿ ಭುವನೇಶ್ವರಿ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಜ್ಯೋತಿ ರಥ ಸ್ವಾಗತಿ ಮಾತನಾಡಿ, ಕರ್ನಾಟಕ ಸಂಭ್ರಮ 50ರ ಅಂಗವಾಗಿ ಈ ಜ್ಯೋತಿ ರಥಯಾತ್ರೆ ರಾಜ್ಯದೆಲ್ಲೆಡೆ ಸಂಚರಿಸಿ ಕರ್ನಾಟಕದ ಶ್ರೀಮಂತ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ಸಂಪ್ರದಾಯದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಈ ಜ್ಯೋತಿ ರಥಯಾತ್ರೆಯು ವರ್ಷಪೂರ್ತಿ ಆಚರಣೆಯ ಭಾಗವಾಗಿದೆ ಎಂದರು.ಸಾಹಿತಿ ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ ಮಾತನಾಡಿ, ರಾಜ್ಯವನ್ನು ಮೈಸೂರಿನಿಂದ ಕರ್ನಾಟಕಕ್ಕೆ ಮರು ನಾಮಕರಣ ಮಾಡುವ ಸುವರ್ಣ ಮಹೋತ್ಸವವನ್ನು ಗುರುತಿಸಲು ರಾಜ್ಯ ಸರ್ಕಾರ ನವೆಂಬರ್ ತಿಂಗಳಿನಿಂದ ಕರ್ನಾಟಕ ಸಂಭ್ರಮ 50ನ್ನು ಆಚರಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಪಡ್ನೇಶಿ, ಎಸ್.ಎಸ್. ಬಿಚ್ಚಾಲಿ, ಸಿ.ಕೆ. ಬಳೂಟಗಿ, ಮುತ್ತು ಪಾಟೀಲ, ಗಂಗಾಧರ ಅಣ್ಣಿಗೇರಿ, ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ಆರ್.ಬಿ. ಹಕ್ಕಂಡಿ, ಎಸ್.ಬಿ. ಹಿರೇಮಠ, ಎಂ.ಎಸ್. ಹೊಟ್ಟಿನ, ಲಿಂಗರಾಜ ದಾವಣಗೇರಿ, ಸಿ.ಕೆ. ಗಣಪ್ಪನವರ, ಸುರೇಶ ಭಾವಿಹಳ್ಳಿ, ಮಂಜುನಾಥ ಇಟಗಿ, ರಮೇಶಗೌಡ ಪಾಟೀಲ, ಕಾಶೀನಾಥ ಶಿರಬಡಗಿ, ಅಡಿವೆಪ್ಪ ಚಲವಾದಿ, ಬಸವಂತಪ್ಪ ಮುದ್ದಿ, ಎನ್.ಎನ್. ಕಲಕೇರಿ, ಮಂಜು ಮುಧೋಳ, ಶ್ರಿನಿವಾಸ ಅಬ್ಬಿಗೇರಿ, ಲಕ್ಷ್ಮಣ ತಗಡಿನಮನಿ, ಚಂದ್ರಶೇಖರ ಪೂಜಾರ, ಗವಿಸಿದ್ದಯ್ಯ ಹಳ್ಳೀಕೇರಿಮಠ ಸೇರಿದಂತೆ ಅನೇಕ ಕನ್ನಡಾಭಿಮಾನಿಗಳು, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.

ಪಟ್ಟಣದ ತಹಸೀಲ್ದಾರ್ ಕಚೇರಿಯ ಮುಂದಿನ ರಸ್ತೆಯಿಂದ ಮೇಳಗಳೊಂದಿಗೆ ಮೆರವಣಿಗೆ ಹೊರಟಿತು. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು, ತಾಲೂಕು ಸಾಹಿತ್ಯ ಪರಿಷತ್ತಿನ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗದಗದಲ್ಲಿ ರಥಯಾತ್ರೆಗೆ ವಿಶೇಷ ಪೂಜೆ

ಕನ್ನಡಪ್ರಭ ವಾರ್ತೆ ಗದಗಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡ ನಿಮಿತ್ತ ಕರ್ನಾಟಕ ಸರ್ಕಾರ ಹಮ್ಮಿಕೊಂಡ ಕರ್ನಾಟಕ ಸಂಭ್ರಮ -50ರ ಕಾರ್ಯಕ್ರಮದ ಅಂಗವಾಗಿ ಜ್ಯೋತಿ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದ್ದು, ರಥಯಾತ್ರೆ ಜಿಲ್ಲೆಯ ಗಜೇಂದ್ರಗಡದಿಂದ ಬೆಟಗೇರಿಯ ಮೂಲಕ ಗದಗ ನಗರಕ್ಕೆ ಸೋಮವಾರ ಆಗಮಿಸಿತು. ರಥಯಾತ್ರೆಯನ್ನು ಭವ್ಯವಾಗಿ ಸ್ವಾಗತಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ ಶ್ರೀ ನಿವಾಸಮೂರ್ತಿ ಕುಲಕರ್ಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ., ಪ್ರೊ. ಕೆ.ಎಚ್. ಬೇಲೂರ ಸೇರಿದಂತೆ ಗಣ್ಯರು, ಹಿರಿಯರು, ಶಾಲಾ ಮಕ್ಕಳು ಇದ್ದರು.ಭೂಮರೆಡ್ಡಿ ವೃತ್ತದಿಂದ ಸಾಗಿದ ರಥಯಾತ್ರೆಯು ನಗರದ ಹಳೆ ಡಿಸಿ ಆಫೀಸ್, ಭೀಷ್ಮ ಕೆರೆ, ಚೆನ್ನಮ್ಮ ವೃತ್ತ, ಮುಳಗುಂದ ನಾಕಾ ಮಾರ್ಗವಾಗಿ ನಗರದ ಜಿಲ್ಲಾಡಳಿತ ಭವನಕ್ಕೆ ಬಂದು ತಲುಪಿತು. ಮಂಗಳವಾರ ರಥಯಾತ್ರೆಯನ್ನು ಮುಂಡರಗಿ ತಾಲೂಕಿಗೆ ಬೀಳ್ಕೊಡಲಾಯಿತು.