ಚಿನ್ನದ ಪದಕ ಗೆದ್ದ ಅಶೋಕನಿಗೆ ಅದ್ಧೂರಿ ಸ್ವಾಗತ

| Published : Jan 04 2025, 12:30 AM IST

ಸಾರಾಂಶ

ತಮಿಳುನಾಡಿನಲ್ಲಿ ನಡೆದ ದಕ್ಷಿಣ ಭಾರತ ಕುಸ್ತಿ ಚಾಂಪಿಯನ್‌ಷಿಪ್‌ನ ಹಿರಿಯರ (87ಕೆಜಿ) ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಧಾರವಾಡ ತಾಲೂಕಿನ ಯಾದವಾಡದ ಅಶೋಕ ಮಾಕಣ್ಣವರ ಅವರಿಗೆ ಅದ್ಧೂರಿ ಸ್ವಾಗತ ಕೋರಿ ಪೌರಸನ್ಮಾನ ಮಾಡಲಾಯಿತು.

ಧಾರವಾಡ:

ತಮಿಳುನಾಡಿನಲ್ಲಿ ನಡೆದ ದಕ್ಷಿಣ ಭಾರತ ಕುಸ್ತಿ ಚಾಂಪಿಯನ್‌ಷಿಪ್‌ನ ಹಿರಿಯರ (87ಕೆಜಿ) ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ತಾಲೂಕಿನ ಯಾದವಾಡದ ಅಶೋಕ ಮಾಕಣ್ಣವರ ಅವರಿಗೆ ಅದ್ಧೂರಿ ಸ್ವಾಗತ ಕೋರಿ ಪೌರಸನ್ಮಾನ ಮಾಡಲಾಯಿತು.ಪದಕದೊಂದಿಗೆ ಗ್ರಾಮಕ್ಕೆ ಬಂದ ಅಶೋಕನನ್ನು ವಾದ್ಯಮೇಳದೊಂದಿಗೆ ಸ್ವಾಗತಿಸಿದ ಗ್ರಾಮಸ್ಥರು, ಗ್ರಾಮದಲ್ಲಿ ಮೆರವಣಿಗೆ ಮಾಡಿದರು. ಗ್ರಾಪಂನಿಂದಲೂ ಅವರನ್ನು ಸನ್ಮಾನಿಸಲಾಯಿತು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅಶೋಕ ಮಾತನಾಡಿ, ಜನರು ತೋರುತ್ತಿರುವ ಪ್ರೀತಿ ನನಗೆ ಇನ್ನಷ್ಟು ಸಾಧಿಸುವ ಹುಮ್ಮಸ್ಸು ತಂದಿದೆ. ಒಲಂಪಿಕ್‌ನಲ್ಲಿ ಭಾಗವಹಿಸಲು ಅಗತ್ಯ ತಯಾರಿ ಮಾಡಿಕೊಳ್ಳುವೆ ಎಂದು ತಿಳಿಸಿದರು.

ಗ್ರಾಪಂ ಸದಸ್ಯ ಮಡಿವಾಳಪ್ಪ ದಿಂಡಲಕೊಪ್ಪ ಮಾತನಾಡಿ, ಅಶೋಕ ಅವರ ಸಾಧನೆ ಹಿಂದೆ ಪರಿಶ್ರಮ, ತಂದೆ-ತಾಯಿಯ ಪ್ರೋತ್ಸಾಹವಿದೆ ಎಂದರು.

ಕೃಷಿ ಸಹಕಾರಿ ಪತ್ತಿನ ಅಧ್ಯಕ್ಷ ಪರಮೇಶ್ವರ ಕೋಯಪ್ಪನವರ ಮಾತನಾಡಿ, ಕುಸ್ತಿಯಲ್ಲಿ ಸಾಧನೆ ತೋರುವುದು ಸುಲಭವಲ್ಲ. ಇವರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಿಸುವಂತಾಗಲಿ ಎಂದು ಶುಭ ಹಾರೈಸಿದರು.

ಈ ವೇಳೆ ಮುಖಂಡ ಶಶಿಮೌಳಿ ಕುಲಕರ್ಣಿ, ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ಗಳಗಿ, ಗ್ರಾಪಂ ಉಪಾಧ್ಯಕ್ಷೆ ಭೀಮವ್ವ ತೋಟಣ್ಣವರ, ಪಾರವ್ವ ಹಿರೇಮಠ, ಶಿವಾನಂದ ಬೆಂಡಿಗೇರಿ, ಮಂಜುನಾಥ ಬಂಡೆಪ್ಪನವರ, ಲಕ್ಷ್ಮಿ ಹುಲಮನಿ, ವಿಜಯಾ ವಾಲೀಕಾರ, ಗಂಗಾಧರ ಮುಮ್ಮಿಗಟ್ಟಿ, ಶೇಖಣ್ಣ ಕುಂಬಾರ, ಶಿವಾನಂದ ನಾಗಣ್ಣವರ, ಶ್ರೀಶೈಲ ಗೆದ್ದಿಕೇರಿ, ಯಲ್ಲಪ್ಪ ಬಾರಕೇರ, ಆನಂದ ಕೇಶಗೊಂಡ, ಮಹಾಂತೇಶ ಗಳಗಿ, ಮೃತ್ಯುಂಜಯ ಹಿರೇಮಠ, ಜಗದೀಶ ಕೇಶಗೊಂಡ, ಉಮೇಶ ಕೋಯಪ್ಪನವರ, ನಾಗೇಶ ಯಲಿಗಾರ, ಹನುಮಂತಪ್ಪ ಮಾಕಣ್ಣವರ, ಸುರೇಶ ಬೆಂಡಿಗೇರಿ, ಬಸವರಾಜ ಪಟ್ಟಣದವರ ಸೇರಿದಂತೆ ಇತರರು ಇದ್ದರು.