ಮುಖ್ಯ ಸಚೇತಕರಾಗಿ ಆಯ್ಕೆಯಾದ ಕುಷ್ಟಗಿ ಶಾಸಕ ದೊಡ್ಡನಗೌಡರಿಗೆ ಅದ್ಧೂರಿ ಸ್ವಾಗತ

| Published : Dec 31 2023, 01:30 AM IST / Updated: Dec 31 2023, 10:06 PM IST

ಮುಖ್ಯ ಸಚೇತಕರಾಗಿ ಆಯ್ಕೆಯಾದ ಕುಷ್ಟಗಿ ಶಾಸಕ ದೊಡ್ಡನಗೌಡರಿಗೆ ಅದ್ಧೂರಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಸಚೇತಕರಾದ ಬಳಿಕ ಬೆಂಗಳೂರಿನಿಂದ ಇದೇ ಮೊದಲು ಕುಷ್ಟಗಿ ಪಟ್ಟಣಕ್ಕೆ ಆಗಮಸಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ದೂರಿಯಾಗಿ ಸನ್ಮಾನ ಮಾಡುವ ಮೂಲಕ ಸ್ವಾಗತವನ್ನು ಕೋರಿದರು.

ಕುಷ್ಟಗಿ: ವಿರೋಧ ಪಕ್ಷದ ವಿಧಾನಸಭೆಯ ಮುಖ್ಯ ಸಚೇತಕ ಶಾಸಕ ದೊಡ್ಡನಗೌಡ ಪಾಟೀಲ ಅವರನ್ನು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿಯಾಗಿ ಮೆರವಣಿಗೆಯ ಮೂಲಕ ಕುಷ್ಟಗಿ ಪಟ್ಟಣಕ್ಕೆ ಸ್ವಾಗತ ಕೋರಿದರು.ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಮೂರನೇಯ ಬಾರಿ ಶಾಸಕರಾಗಿ ಆಯ್ಕೆಯಾದ ದೊಡ್ಡನಗೌಡ ಪಾಟೀಲ ಅವರನ್ನು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರೋಧ ಪಕ್ಷದ ವಿಧಾನಸಭೆಯ ಮುಖ್ಯ ಸಚೇತಕರನ್ನಾಗಿ ಆಯ್ಕೆ ಮಾಡುವ ಮೂಲಕ ಆದೇಶ ಹೊರಡಿಸಿದ್ದರು.

ಸಚೇತಕರಾದ ಬಳಿಕ ಬೆಂಗಳೂರಿನಿಂದ ಇದೇ ಮೊದಲು ಕುಷ್ಟಗಿ ಪಟ್ಟಣಕ್ಕೆ ಆಗಮಸಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ದೂರಿಯಾಗಿ ಸನ್ಮಾನ ಮಾಡುವ ಮೂಲಕ ಸ್ವಾಗತವನ್ನು ಕೋರಿದರು.ಮುಖ್ಯಸಚೇತಕರಾದ ಶಾಸಕ ದೊಡ್ಡನಗೌಡ ಪಾಟೀಲ ಅವರನ್ನು ತೆರೆದ ವಾಹನದಲ್ಲಿ ಬೈಕರ್ಯಾಲಿ ಮೂಲಕವಾಗಿ ಅಂಬೇಡ್ಕರ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ, ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ರ್ಯಾಲಿಯಲ್ಲಿ ಪಾಲ್ಗೊಂಡು ಅಡವಿರಾಯ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ಅಂಜನಾದ್ರಿಯ ಕಛೇರಿಯವರೆಗೂ ರ್ಯಾಲಿಯನ್ನು ಅಂತಿಮಗೊಳೀಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಬಸವರಾಜ ಹಳ್ಳೂರು, ವಿಜಯಕುಮಾರ ಹಿರೇಮಠ, ನಾಗರಾಜ ಮೇಲಿನಮನಿ, ಶಶಿಧರ ಕವಲಿ, ಅಶೋಕ ಬಳೂಟಗಿ, ಉಮೇಶ ಯಾಧವ್, ಚಂದ್ರು ವಡಗೇರಿ, ಕಲ್ಲೇಶ ತಾಳದ ಸೇರಿದಂತೆ ಕಾರ್ಯಕರ್ತರು ಅಭಿಮಾನಿಗಳು ಇದ್ದರು.