ಕನ್ನಡ ಜ್ಯೋತಿ ರಥಯಾತ್ರೆಗೆ ಕೊತ್ತತ್ತಿಯಲ್ಲಿ ಅದ್ಧೂರಿ ಸ್ವಾಗತ

| Published : Aug 25 2024, 01:49 AM IST

ಕನ್ನಡ ಜ್ಯೋತಿ ರಥಯಾತ್ರೆಗೆ ಕೊತ್ತತ್ತಿಯಲ್ಲಿ ಅದ್ಧೂರಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾ ಗಣಪತಿ ವಿದ್ಯಾಸಂಸ್ಥೆ ಆವರಣದಲ್ಲಿ ಜಾನಪದ ಕಲಾವಿದರ ಕಲಾ ಪ್ರದರ್ಶನ, ಪೂರ್ಣಕುಂಭ ಸ್ವಾಗತ, ಕನ್ನಡದ ಅಭಿಮಾನ ಮೂಡಿಸುವ ಗೀತೆಗಳು. ಎಲ್ಲೆಲ್ಲೂ ಕನ್ನಡ ಪರ ಜೈಕಾರ, ಶಾಲಾ ಮಕ್ಕಳ ಕಲರವದೊಂದಿಗೆ ಶ್ರೀರಂಗಪಟ್ಟಣ ತಹಸೀಲ್ದಾರ್ ಪರುಶರಾಂ ಸತ್ತಿಗೇರಿ, ಮಂಡ್ಯ ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಸಂಭ್ರಮ-50 ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಾಲೂಕಿನ ಕೊತ್ತತ್ತಿ ಗ್ರಾಮಕ್ಕೆ ಆಗಮಿಸಿದಾಗ ಅದ್ದೂರಿ ಸ್ವಾಗತಿಸಲಾಯಿತು.

ಗ್ರಾಮದ ವಿದ್ಯಾ ಗಣಪತಿ ವಿದ್ಯಾಸಂಸ್ಥೆ ಆವರಣದಲ್ಲಿ ಜಾನಪದ ಕಲಾವಿದರ ಕಲಾ ಪ್ರದರ್ಶನ, ಪೂರ್ಣಕುಂಭ ಸ್ವಾಗತ, ಕನ್ನಡದ ಅಭಿಮಾನ ಮೂಡಿಸುವ ಗೀತೆಗಳು. ಎಲ್ಲೆಲ್ಲೂ ಕನ್ನಡ ಪರ ಜೈಕಾರ, ಶಾಲಾ ಮಕ್ಕಳ ಕಲರವದೊಂದಿಗೆ ಶ್ರೀರಂಗಪಟ್ಟಣ ತಹಸೀಲ್ದಾರ್ ಪರುಶರಾಂ ಸತ್ತಿಗೇರಿ, ಮಂಡ್ಯ ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.ನಂತರ ಬೇವಿನಹಳ್ಳಿಯಲ್ಲಿ ರಥಕ್ಕೆ ಪೂಜೆ ಸಲ್ಲಿಸಿ ಕ್ಯಾತುಂಗೆರೆ ಬಳಿ ಸಾಂಥೊಂ ಶಾಲೆ ಮಕ್ಕಳು ಸ್ವಾಗತಿಸಿದರು. ಈ ವೇಳೆ ಕಸಾಪ ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ ತಾಲೂಕು ಕಸಾಪ ಅಧ್ಯಕ್ಷ ಚಂದ್ರಲಿಂಗು, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಬಿ.ಎಂ.ಅಪ್ಪಾಜಪ್ಪ, ಧನಂಜಯ ದರಸಗುಪ್ಪೆ, ಹೊಳಲು ಶ್ರೀಧರ್, ಸುಜಾತ ಕೃಷ್ಣ, ಮಂಗಲ ಯೋಗೀಶ್, ಎಸ್.ನಾರಾಯಣ, ಕಾರಸವಾಡಿ ಮಹದೇವು, ಅರುಣಕುಮಾರಿ, ಕೊತ್ತತ್ತಿ ರಾಜು, ಎಲ್.ಕೃಷ್ಣ, ಮಂಜುನಾಥ್ ಬಲ್ಲೇನಹಳ್ಳಿ, ಚಿಕ್ಕತಿಮ್ಮಯ್ಯ ಹಾಗೂ ತಾಲೂಕು ಆಡಳಿತ,ಶಾಲಾ ಆಡಳಿತ ಮಂಡಳಿ, ಮಕ್ಕಳು ಶಿಕ್ಷಕರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಹಾಜರಿದ್ದರು.

ರಥಯಾತ್ರೆ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ತಲುಪಿದಾಗ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಲವು ಗಣ್ಯರು ಸ್ವಾಗತ ಕೋರಿದರು. ನಂತರ ರಥಯಾತ್ರೆ ಜಯಚಾಮರಾಜ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಹೊಸಹಳ್ಳಿ, ಮಹಾವೀರ ವೃತ್ತ, ಮೈಷುಗರ್ ವೃತ್ತದ ಮೂಲಕ ಮಾಂಡವ್ಯ ಜ್ಞಾನಸಾಗರ ಕ್ಯಾಂಪಸ್ ತಲುಪಿತು.

ತಾಲೂಕಿನ ಉಮ್ಮಡಹಳ್ಳಿ, ಕೀಲಾರ,ಈಚಗೆರೆ ,ಹೊಡಾಘಟ್ಟ, ಕೆರಗೋಡು, ಹುಲಿವಾನ, ಸಾತನೂರು, ಚಿಕ್ಕಮಂಡ್ಯ ಮೂಲಕ ನಗರದ ರೈತ ಸಭಾಂಗಣವನ್ನು ತಲುಪಿತು. ರಥಯಾತ್ರೆ ವೇಳೆ ನಗರದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕೆಂಪು-ಹಳದಿ ಬಣ್ಣದ ಶಾಲು ಧರಿಸಿಕೊಂಡು ಕೈಯಲ್ಲಿ ನಾಡ ಧ್ವಜ ಹಿಡಿದು ರಥದೊಂದಿಗೆ ಹೆಜ್ಜೆ ಹಾಕಿದರು.