ಕನ್ನಡ ಸಾಹಿತ್ಯ ಸಮ್ಮೇಳನ ಪ್ರಚಾರ ರಥಕ್ಕೆ ಭವ್ಯ ಸ್ವಾಗತ

| Published : Nov 27 2024, 01:00 AM IST

ಸಾರಾಂಶ

ಮಂಗಳವಾರ ಬೆಳಗ್ಗೆ 9 ಗಂಟೆಗೆ ಪಾಂಡವಪುರ ತಾಲೂಕಿನಿಂದ ಶ್ರೀರಂಗಪಟ್ಟಣ ಗಡಿ ಗ್ರಾಮವಾದ ದರಸಗುಪ್ಪೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಕಸಾಪ ತಾಲೂಕು ಅಧ್ಯಕ್ಷ ಸಿದ್ದಲಿಂಗು, ಗ್ರಾಮಸ್ಥರು ಸೇರಿದಂತೆ ನೂರಾರು ಮಂದಿ ರಥಕ್ಕೆ ಅದ್ಧೂರಿಯಾಗಿ ಸ್ವಾಗತ ಕೋರಿ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಹಮ್ಮಿಕೊಂಡಿರುವ ಜಿಲ್ಲಾ ಜ್ಯೋತಿ ಪ್ರಚಾರ ರಥ ತಾಲೂಕಿನ ಗಡಿಭಾಗ ದರಸಗುಪ್ಪೆ ಗ್ರಾಮಕ್ಕೆ ಆಗಮಿಸಿದ್ದ ವೇಳೆ ತಹಸೀಲ್ದಾರ್ ಸೇರಿದಂತೆ ಗ್ರಾಮಸ್ಥರು ಭವ್ಯ ಸ್ವಾಗತ ಕೋರಿದರು.

ಮಂಗಳವಾರ ಬೆಳಗ್ಗೆ 9 ಗಂಟೆಗೆ ಪಾಂಡವಪುರ ತಾಲೂಕಿನಿಂದ ಶ್ರೀರಂಗಪಟ್ಟಣ ಗಡಿ ಗ್ರಾಮವಾದ ದರಸಗುಪ್ಪೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಕಸಾಪ ತಾಲೂಕು ಅಧ್ಯಕ್ಷ ಸಿದ್ದಲಿಂಗು, ಗ್ರಾಮಸ್ಥರು ಸೇರಿದಂತೆ ನೂರಾರು ಮಂದಿ ರಥಕ್ಕೆ ಅದ್ಧೂರಿಯಾಗಿ ಸ್ವಾಗತ ಕೋರಿ ಪೂಜೆ ಸಲ್ಲಿಸಿದರು.

ನಂತರ ದರಸಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲಮನೆ, ಹನುಮಂತನಗರ, ಬಲ್ಲೇನಹಳ್ಳಿ, ಚಿಂದಗಿರಿಕೊಪ್ಪಲು, ಸಬ್ಬನಕುಪ್ಪೆ, ಟಿ.ಎಂ.ಹೊಸೂರು, ಕೆ.ಶೆಟ್ಟಹಳ್ಳಿ ಗ್ರಾಮಗಳಲ್ಲಿ ಪ್ರಚಾರ ರಥ ಸಂಚರಿಸಿತು. ಕಲಾತಂಡಗಳು ಪ್ರಚಾರ ರಥದೊಂದಿಗೆ ಸಾಗಿ, ಕವಿಗಳ ಪರಿಚಯ ಮಾಡಿಕೊಡುವ ಜೊತೆಗೆ ನೃತ್ಯದ ಮೂಲಕ ಪ್ರಚಾರ ಪಡಿಸಿದರು.

ಪ್ರತಿ ಗ್ರಾಮಗಳಲ್ಲೂ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಕೋರಿ ನಂತರ ತಮ್ಮ ಪ್ರಚಾರ ನಡೆಸಿ, ನಂತರ ಬೀಳ್ಕೊಡುಗೆ ನೀಡಿದರು. ಈ ವೇಳೆ ಕಲಾತಂಡಗಳು ಕಸಾಪ ಹೋಬಳಿ ಅಧ್ಯಕ್ಷ ಕೆ.ಜೆ ಲೋಕೇಶ್, ಬಸವರಾಜು, ಸುರೇಶ್, ಲಾಲಿಪಾಳ್ಯ ಮಹಾದೇವು ಸೇರಿದಂತೆ ನೂರಾರು ಮಂದಿ ಜೊತೆಯಲ್ಲಿದ್ದರು.

ಆಟೋ ಚಾಲಕರಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಆಟೋ ಚಾಲಕರಿಂದ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ವೇಳೆ ಆಟೋ ಚಾಲಕರಾದ ಶಿವರಾಮು ಹಾಗೂ ರಾಜು ಮಾತನಾಡಿ, ನಮ್ಮಂತ ಆಟೋ ಚಾಲಕರನ್ನು ಗುರುತಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕು. ನಮಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು ಎಂದು ಕೋರಿದರು.