ಕರ್ನಾಟಕ ಸುವರ್ಣ ಸಂಭ್ರಮ ರಥಕ್ಕೆ ಅದ್ಧೂರಿ ಸ್ವಾಗತ

| Published : Mar 02 2024, 01:48 AM IST

ಸಾರಾಂಶ

ಸುವರ್ಣ ಕರ್ನಾಟಕ ಸಂಭ್ರಮ 50 ಆಚರಣೆ ನಿಮಿತ್ತ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಧ್ಯೇಯದಡಿ ಕರ್ನಾಟಕ ಸುವರ್ಣ ಸಂಭ್ರಮ ರಥಯಾತ್ರೆ ಪ್ರತಿ ಗ್ರಾಮ ಸಂಚರಿಸುತ್ತಿದ್ದು, ಗುರುವಾರ ಮಹಾಲಿಂಗಪುರಕ್ಕೆ ಆಗಮಿಸಿದ ರಥಕ್ಕೆ ಅದ್ಧೂರಿ ಸ್ವಾಗತ ಕೋರಲಾಯಿತು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಸುವರ್ಣ ಕರ್ನಾಟಕ ಸಂಭ್ರಮ 50 ಆಚರಣೆ ನಿಮಿತ್ತ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಧ್ಯೇಯದಡಿ ಕರ್ನಾಟಕ ಸುವರ್ಣ ಸಂಭ್ರಮ ರಥಯಾತ್ರೆ ಪ್ರತಿ ಗ್ರಾಮ ಸಂಚರಿಸುತ್ತಿದ್ದು, ಗುರುವಾರ ಮಹಾಲಿಂಗಪುರಕ್ಕೆ ಆಗಮಿಸಿದ ರಥಕ್ಕೆ ಅದ್ಧೂರಿ ಸ್ವಾಗತ ಕೋರಲಾಯಿತು.

ಉತ್ತರ ದಿಕ್ಕಿನಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಜೆ 4ಕ್ಕೆ ಆಗಮಿಸಿದ ರಥಕ್ಕೆ ಅದ್ಧೂರಿ ಸ್ವಾಗತ ಕೋರಿ ಬಸ್ ನಿಲ್ದಾಣ ಹತ್ತಿರವಿರುವ ಕೆಇಬಿ ಗಣೇಶ ಮಂದಿರದಲ್ಲಿ ಪೂಜೆ ಸಲ್ಲಿಸಿ ಸಕಲ ಮಂಗಲ ವಾದ್ಯಗಳೊಂದಿಗೆ ನಗರದಲ್ಲಿ ರಥಯಾತ್ರೆ ಮೆರವಣಿಗೆ ನಡೆಯಿತು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕನ್ನಡಪ್ರೇಮಿಗಳು, ಅಧಿಕಾರಿಗಳು, ಶಾಲಾ ಮಕ್ಕಳು ಭಾಗವಹಿಸಿದ್ದರು. ಶಾಲಾ ಮಕ್ಕಳ ವೇಷ ಭೂಷಣ ಗಮನ ಸೆಳೆಯಿತು. ನಂತರ ರಥವನ್ನು ಮುಂದಿನ ಗ್ರಾಮಕ್ಕೆ ಬೀಳ್ಕೊಡಲಾಯಿತು.

ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಸಿಆರ್ಪಿ ಎಸ್. ಎನ್. ಬ್ಯಾಳಿ, ಕಸಾಪ ವಲಯ ಘಟಕದ ಅಧ್ಯಕ್ಷ ಬಸವರಾಜ ಮೇಟಿ, ಎಸ್.ಎನ್. ಪಾಟೀಲ, ಶಿವಾನಂದ ಮೇಳವಂಕಿ, ಎಂ.ಎಸ್. ಮುಗಳಖೊಡ, ವಿ.ಜಿ. ಕುಲಕರ್ಣಿ, ವೀರೇಶ ಆಸಂಗಿ, ಸಿದ್ದು ಆಳ್ಳಿಮಟ್ಟಿ, ಜಿ.ಎಸ್. ಗೊಂಬಿ, ಚಿದಾನಂದ ಮಠಪತಿ, ಎಂ.ಎಂ. ಮುಗಳಖೊಡ, ರಾಜು ಹೂಗಾರ, ಸುವರ್ಣ ಆಸಂಗಿ, ರವಿ ಹಲಸಪ್ಪಗೋಳ ಸೇರಿ ಹಲವರು ಇದ್ದರು.