ಸಂವಿಧಾನ ಜಾಗೃತಿ ಜಾಥಾಗೆ ಅದ್ಧೂರಿ ಸ್ವಾಗತ

| Published : Feb 04 2024, 01:32 AM IST

ಸಾರಾಂಶ

ರಾಮನಗರ: ಚನ್ನಪಟ್ಟಣದಿಂದ ರಾಮನಗರ ತಾಲೂಕಿಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಗೆ ನಗರದ ಚನ್ನಮಾನಹಳ್ಳಿಯ ಗ್ರಾಮಸ್ಥರು, ಪೂರ್ಣ ಕುಂಭದ ಸ್ವಾಗತ ಕೋರಿ, ಜಾನಪದ ಕಲಾತಂಡದೊಂದಿಗೆ ಬರ ಮಾಡಿಕೊಂಡಿದರು.

ರಾಮನಗರ: ಚನ್ನಪಟ್ಟಣದಿಂದ ರಾಮನಗರ ತಾಲೂಕಿಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಗೆ ನಗರದ ಚನ್ನಮಾನಹಳ್ಳಿಯ ಗ್ರಾಮಸ್ಥರು, ಪೂರ್ಣ ಕುಂಭದ ಸ್ವಾಗತ ಕೋರಿ, ಜಾನಪದ ಕಲಾತಂಡದೊಂದಿಗೆ ಬರ ಮಾಡಿಕೊಂಡಿದರು.

ಈ ವೇಳೆ ರಾಮನಗರ ತಾಪಂ ಇಒ ಪ್ರದೀಪ್ ಮಾತನಾಡಿ, ಜನತೆಯಲ್ಲಿ ಸಂವಿಧಾನ ಜಾಗೃತಿ ಮೂಡಿಸುವ ಸಂಬಂಧ ರಾಜ್ಯ ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಆಯೋಜಿಸಿದೆ. ಈ ಸ್ತಬ್ಧಚಿತ್ರ ರಾಮನಗರ ತಾಲೂಕಿನ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿದೆ. ಸ್ತಬ್ಧಚಿತ್ರ ಸಂಚಾರದ ಜೊತೆಗೆ ಜನತೆ ಸರಕಾರಿ ಯೋಜನೆಗಳ ಮಾಹಿತಿ ನೀಡಲಿದೆ ಎಂದು ತಿಳಿಸಿದರು.

ವಿಭೂತಿಕೆರೆ ಗ್ರಾಪಂ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಸರ್ಕಾರ ಸ್ತಬ್ಧಚಿತ್ರದ ಮೂಲಕ ಸಂವಿಧಾನ ಜಾಗೃತಿ ಜಾಥಾವನ್ನು ಹಮ್ಮಿಕೊಂಡಿದೆ. ಆಮೂಲಕ ಜನತೆಯಲ್ಲಿಯು ಸಂವಿಧಾನದ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು.

ಸಂವಿಧಾನ ರಚನೆಯಲ್ಲಿ ಬಾಬಾ ಸಾಹೇಬರ ಕೊಡುಗೆ ಅಪಾರವಾಗಿದೆ. ಜಾಗೃತಿ ಜಾಥಾದಲ್ಲಿ ಸಂವಿಧಾನರಚನೆಯ ಚಿತ್ರವನ್ನು ಅಳವಡಿಸಿರುವುದು ಗಮನಾರ್ಹ ಎಂದರು.

ಸಮಾಜ ಕಲ್ಯಾಣಾಧಿಕಾರಿ ಕುಮಾರ್ ಅಕ್ಷರ ದಾಸೋಹ ಯೋಜನಾಧಿಕಾರಿ ಸಂತೋಷ್, ವಿಭೂತಿಕೆರೆ ಗ್ರಾಪಂ ಪಿಡಿಒ ಬಿ.ಕೆ. ಗೋಮತಿ, ಗ್ರಾಪಂ ಉಪಾಧ್ಯಕ್ಷೆ ಮಂಗಳ ಗೌರಮ್ಮ, ಚಿಕ್ಕೇನಹಳ್ಳಿ ಗ್ರಾ ಪಂ ಸದಸ್ಯರಾದ ಸುನಿತಾ, ಮಾದೇಶ ಸ್ವಾಮಿ, ಶ್ರೀನಿವಾಸ್ ವೆಂಕಟಪ್ಪ, ವಿಎಸ್‌ಎಸ್‌ಎನ್ ಅಧ್ಯಕ್ಷ ಪಾರ್ಥ, ಸದಸ್ಯರಾದ ವಾಸು, ಕಿರಣ್ ಹಾಜರಿದ್ದರು.

2ಕೆಆರ್ ಎಂಎನ್ 8.ಜೆಪಿಜಿ

ಸಂವಿಧಾನ ಜಾಥಾವನ್ನು ಅದ್ದೂರಿಯಾಗಿ ಬರ ಮಾಡಿಕೊಂಡ ಅಧಿಕಾರಿಗಳು ಹಾಗೂ ಸಾರ್ವಜನಿಕರು.