ಕೊಪ್ಪ ಕನ್ನಡ ರಥ ಯಾತ್ರೆಗೆ ಅದ್ಧೂರಿಯ ಸ್ವಾಗತ

| Published : Sep 26 2024, 09:55 AM IST

ಸಾರಾಂಶ

ಕರ್ನಾಟಕ ಸಂಭ್ರಮ 50ರ ಅಂಗವಾಗಿ ಬುಧವಾರ ಕೊಪ್ಪಕ್ಕೆ ಆಗಮಿಸಿದ ಕನ್ನಡ ಜ್ಯೋತಿ ರಥ ಯಾತ್ರೆಯನ್ನು ಕೊಪ್ಪ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಕೊಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡಪರ ಸಂಘಟನೆಗಳು ಬಾಳಗಡಿಯ ಕನ್ನಡ ಭವನದ ಬಳಿ ಪೂರ್ಣ ಕುಂಭ ಸ್ವಾಗತ ನೀಡಿ ಸ್ವಾಗತಿಸಿದರು.

ಕನ್ನಡಪ್ರಭ ವಾರ್ತೆ ಕೊಪ್ಪ

ವಿವಿಧ ವಾದ್ಯ ಮೇಳಗಳೊಂದಿಗೆ ಆರಂಭಗೊಂಡ ಕನ್ನಡ ರಥಯಾತ್ರೆಯು ಬಿಂತ್ರವಳ್ಳಿ ಗ್ರಾ.ಪಂ ಕೊಪ್ಪ, ಗ್ರಾಮಾಂತರ ಪಂಚಾಯಿತಿ, ಕೊಪ್ಪ ಪ.ಪಂ. ಮುಖೇನ ಮುಖ್ಯರಸ್ತೆಯಲ್ಲಿ ಸಾಗಿ ಬಸ್ ನಿಲ್ದಾಣದಿಂದ ಹೊರಟು ಹರಿಹರಪುರ ಹೋಬಳಿ ಪ್ರವೇಶಿಸಿ, ನರಸೀಪುರ ಗ್ರಾ.ಪಂ. ತುಳುವಿನಕೊಪ್ಪ ಗ್ರಾ.ಪಂ. ಜಯಪುರ ಗ್ರಾ.ಪಂ. ಮತ್ತು ಕೊಪ್ಪ ಗಡಿಭಾಗದ ಹೇರೂರು ಗ್ರಾ.ಪಂ. ಮುಖೇನ ನ.ರಾ. ಪುರ ತಾಲೂಕಿನ ಬಾಳೆಹೊನ್ನೂರು ಪ್ರವೇಶಿಸಿತು. ತಹಶೀಲ್ದಾರ್ ಲಿಖಿತಾ ಮೋಹನ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಚ್.ಡಿ. ನವೀನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಎ.ಕೆ. ಪಾಟೀಲ್, ಬಿ.ಪಿ. ಧರ್ಮೇಶ್, ಬಿಸಿಎಂ ಇಲಾಖಾಧಿಕಾರಿ ಚಂದ್ರಶೇಖರ್, ಕೊಪ್ಪ ತಾಲೂಕು ಕ.ಸಾ.ಪ ಅಧ್ಯಕ್ಷ ಜೆ.ಎಂ. ಶ್ರೀಹರ್ಷ, ಕ.ಸಾ.ಪ.ದ ಚಂದ್ರಕಲಾ, ಕೆ.ಆರ್. ಗೋಪಾಲಗೌಡ ಕ.ರಾ.ವೇ. ಫ್ರಾನ್ಸಿಸ್ ಕರ್ಡೋಜ, ನಾರ್ವೆ ಅಶೋಕ್, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಗ್ರಾ.ಪಂ. ಮತ್ತು ಪ.ಪಂ.ಯ ಅಧ್ಯಕ್ಷರು, ಸದಸ್ಯರು, ಆಟೋ ಚಾಲಕರು, ಶಾಲಾ ವಿದ್ಯಾರ್ಥಿಗಳು, ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪೂರ್ಣ ಕುಂಭ ಸ್ವಾಗತ ನೀಡಿ ಕನ್ನಡ ರಥವನ್ನು ಬರಮಾಡಿಕೊಂಡರು.