ಇದೇ ಮೊದಲ ಬಾರಿಗೆ ಸಚಿವರಾಗಿ ಸಣ್ಣ ನೀರಾವರಿ ಇಲಾಖೆ ಜವಾಬ್ದಾರಿ ಹೊತ್ತಿರುವ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಮುಂದೆ ಜಿಲ್ಲೆಯ ಸಣ್ಣ ನೀರಾವರಿ ರಂಗಕ್ಕೆ ಹೊಸ ರೂಪ ಕೊಡುವ ಸವಾಲು ಇದೆ. ಬರ ಪೀಡಿತ ಜಿಲ್ಲೆಗಳಲ್ಲಿ ಒಂದಾಗಿರುವ ಕಲ್ಯಾಣದ ಹೆಬ್ಬಾಗಿಲು ಕಲಬುರಗಿ ತೊಗರಿ ಕಣಜ. ಮಳೆ ದಿನಗಳ ಕೊರತೆಯ ನಡುವೆಯೇ ಇಲ್ಲಿನ ಬೇಳೆಕಾಳು, ಜೋಳದ ಬೇಸಾಯ ಅಂತಾರಾಷ್ಟ್ರೀಯ ಗಮನ ಸೆಳೆದಿರುವ ಈ ಸಂದರ್ಭದಲ್ಲಿ ನೀರಾವರಿ ರಂಗದಲ್ಲಿ ಬಹುದೊಡ್ಡ ಬದಲಾವಣೆ ತರುವಂತಹ, ರೈತರ ಮೊಗದಲ್ಲಿ ನಗೆ ಮೂಡಿಸುವಂತಹ ಸಣ್ಣ ನೀರಾವರಿ ಇಲಾಖೆ ನಿಭಾಯಿಸುವ ಬಹುದೊಡ್ಡ ಹೊಣೆಗಾರಿಕೆ ಡಾ. ಅಜಯ್ ಸಿಂಗ್ ಹೆಗಲೇರಿದೆ.
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿ.ಇದೇ ಮೊದಲ ಬಾರಿಗೆ ಸಚಿವರಾಗಿ ಸಣ್ಣ ನೀರಾವರಿ ಇಲಾಖೆ ಜವಾಬ್ದಾರಿ ಹೊತ್ತಿರುವ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಮುಂದೆ ಜಿಲ್ಲೆಯ ಸಣ್ಣ ನೀರಾವರಿ ರಂಗಕ್ಕೆ ಹೊಸ ರೂಪ ಕೊಡುವ ಸವಾಲು ಇದೆ.
ಬರ ಪೀಡಿತ ಜಿಲ್ಲೆಗಳಲ್ಲಿ ಒಂದಾಗಿರುವ ಕಲ್ಯಾಣದ ಹೆಬ್ಬಾಗಿಲು ಕಲಬುರಗಿ ತೊಗರಿ ಕಣಜ. ಮಳೆ ದಿನಗಳ ಕೊರತೆಯ ನಡುವೆಯೇ ಇಲ್ಲಿನ ಬೇಳೆಕಾಳು, ಜೋಳದ ಬೇಸಾಯ ಅಂತಾರಾಷ್ಟ್ರೀಯ ಗಮನ ಸೆಳೆದಿರುವ ಈ ಸಂದರ್ಭದಲ್ಲಿ ನೀರಾವರಿ ರಂಗದಲ್ಲಿ ಬಹುದೊಡ್ಡ ಬದಲಾವಣೆ ತರುವಂತಹ, ರೈತರ ಮೊಗದಲ್ಲಿ ನಗೆ ಮೂಡಿಸುವಂತಹ ಸಣ್ಣ ನೀರಾವರಿ ಇಲಾಖೆ ನಿಭಾಯಿಸುವ ಬಹುದೊಡ್ಡ ಹೊಣೆಗಾರಿಕೆ ಡಾ. ಅಜಯ್ ಸಿಂಗ್ ಹೆಗಲೇರಿದೆ.ಈಗಾಗಲೇ ಕೆಕೆಆರ್‌ಡಿಬಿ ಅಧ್ಯಕ್ಷರಾಗಿ ಶಿಕ್ಷಣ ರಂಗದಲ್ಲಿ ಶೇ. 25 ಅನುದಾನ ವಿನಿಯೋಗಿಸುವ ತಮ್ಮ ನಿರ್ಣಯದೊಂದಿಗೆ ಗಮನ ಸೆಳೆದಿರುವ ಡಾ. ಅಜಯ್ ಸಿಂಗ್ ಅದೇ ಮಾದರಿಯಲ್ಲೇ ದಿಟ್ಟ, ಜನ, ರೈತರ ಪರ ನಿಲುವುಗಳೊಂದಿಗೆ ಸಣ್ಣ ನರಾವರಿ ರಂಗಕ್ಕೂ ಹೊಸರೂಪ ನೀಡುವರೆ? ಎಂದು ಜಿಲ್ಲೆಯ ಜನತೆ, ರೈತರು, ನಿರೀಕ್ಷೆ ಹೊಂದಿದ್ದಾರೆ.
ಜೇವರ್ಗಿ ಮತಕ್ಷೇತ್ರದಲ್ಲಿವೆ 9 ಕೆರೆಗಳು: ಕಲಬುರಗಿ ಜಿಲ್ಲೆಯಲ್ಲೀಗ 170 ಕರೆಗಳಿದ್ದು, ಇದರಿಂದ 29, 33 ಹೆಕ್ಟರ್ ನೀರಾವರಿಯಾಗುತ್ತಿದೆ. ಇಲ್ಲಿನ್ನೂ ಹೊಸ ಕರೆಗಳ ನಿರ್ಮಾಣದ ಜರೂರಿದ್ದು, ನೀರಾವರಿ ಕ್ಷೇತ್ರ ವಿಸ್ತರಣೆಯೂ ಆಗಬೇಕಿದೆ. ಜತೆಗೇ ಕಲಬುರಗಿಯಲ್ಲಿ ಅಂತರ್ಜಲ ಮಟ್ಟ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವ ಜರೂರತ್ತು ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಜಿಲ್ಲೆಯ ಕೆರೆಗಳ ಸಂಖ್ಯೆ ಗಮನಿಸಿದರೆ ಸಣ್ಣ ನೀವಾರಿ ಇಲಾಖೆ ಸಚಿವ ಡಾ. ಅಜಯ್ ಸಿಂಗ್ ಪ್ರತಿನಿಧಿಸುವ ಯಡ್ರಾಮಿ, ಜೇವರ್ಗಿ ಸೇರಿದಂತಿರುವ 2 ತಾಲೂಕುಗಳಲ್ಲಿ ಒಟ್ಟು 9 ಕೆರೆಗಳಿವೆ. ಜೇವರ್ಗಿಯಲ್ಲಿ 6 ಇದ್ದರೆ, ಈ ಸಂಖ್ಯೆ ಯಡ್ರಾಮಿಯಲ್ಲಿ 3 ಇವೆ.ಮಳೆ ಕೊರತೆ: 103 ಕೆರೆಗಳು ಖಾಲಿ: ಜಿಲ್ಲೆಯಲ್ಲಿರುವ 170 ಕೆರೆಗಳಲ್ಲಿ ತೀವ್ರ ಮಳೆಯ ಕೊರತೆಯಿಂದಾಗಿ 103 ಕೆರೆಗಳು ಶೇ. 10 ರಿಂದ ಶೇ. 30 ರಷ್ಟೂ ನೀರಿಲ್ಲದೆ ಖಾಲಿ ಇವೆ. ಇನ್ನು 20 ಕೆರೆಗಳಲ್ಲಿ ಶೇ. 30 ರಿಂದ ಶೇ. 50 ರಷ್ಟು ನೀರಿದೆ. ಉಳಿದಂತೆ 8 ಕೆರೆಗಳಲ್ಲಿ ಮಾತ್ರ ಶೇ. 50 ಕ್ಕಿಂತ ಅಧಿಕ ನೀರಿದೆ. ಹೀಗಾಗಿ ಕೆರೆಗಳ ಸ್ಥಿತಿಗತಿ ಶೋಚನೀಯವಾಗಿದ್ದು, ಇದು ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟದ ಕುಸಿತಕ್ಕೂ ಕಾರಣವಾಗಿದೆ.
ಕೆರೆ ತುಂಬುವ ಯೋಜನೆ-ವೇಗ ನೀಡುವ ಸವಾಲು: ಜಿಲ್ಲೆಯಲ್ಲಿರುವ 3 ಕೆರೆ ತುಂಬುವ ಯೋನೆಗಳು ಸದ್ಯ ಚಾಲ್ತಿಯಲ್ಲಿದ್ದು, ಇವುಗಳಿಂದ 20 ಕೆರೆಗಳನ್ನು ತುಂಬುವ ಕೆಲಸವಾಗಲಿದೆ. ಆದರೆ ಈ ಕಾಮಗಾರಿಗಳು ನಿಧಾನಗತಿಯಲ್ಲಿರುವುದು ಆತಂಕಕ್ಕೆ ಕಾರಣವಾಗಿದೆ. ಹರವಾಳ ಬಳಿ ಭೀಮಾ ನದಿಗೆ ಅಡ್ಡಲಾಗಿ 130 ಕೋಟಿ ರು. ವೆಚ್ಚದಲ್ಲಿ ಬಾಂದಾರು, ಸೇಡಂ ಬಳಿಯ ಕಾಚೂರು ಲಿಫ್ಟ್ ಇರೇಗೇಷನ್ ಸದ್ಯ ಪ್ರಗತಿಯಲ್ಲಿರುವ ಯೋಜನೆಗಳು. ಜಿಲ್ಲೆಯಲ್ಲಿರುವ ನಾಲಾ, ಹಳ್ಳಕೊಳ್ಳಗಳಲ್ಲಿ ಮಳೆಗಾಲದಲ್ಲಿ ತುಂಬಿ ಹರಿಯುವ ನೀರು ನಿಲ್ಲಿಸಿ ಅಲ್ಲೆಲ್ಲಾ ಚೆಕ್ ಡ್ಯಾಂ ಕಟ್ಟುವ ಕೆಲಸವಾಗಬೇಕು.----ಟೇಬಲ್---
ತಾಲೂಕುವಾರು ನೋಟ-ಕೆರೆಗಳು-ಅಚ್ಚುಕಟ್ಟು- ಅಫಜಲ್ಪೂರ- 12 ಕೆರೆ,2, 478 ಹೆಕ್ಟರ್ ಅಚ್ಚುಕಟ್ಟುಆಳಂ- 36 ಕೆರೆ-4, 282 ಹೆಕ್ಟರ್ ಅಚ್ಚುಕಟ್ಟುಚಿಂಚೋಳ- 21 ಕೆರೆ,7, 221 ಹೆಕ್ಟರ್ ಅಚ್ಚುಕಟ್ಟುಚಿತ್ತಾಪುರ- 12 ಕೆರೆ,2, 412 ಹೆಕ್ಟರ್ ಅಚ್ಚುಕಟ್ಟುಜೇವರ್ಗಿ- 6 ಕೆರೆ,1, 143 ಅಚ್ಚುಕಟ್ಟುಕಾಳಗಿ- 4 ಕೆರೆ,883 ಹೆಕ್ಟರ್ ಅಚ್ಚುಕಟ್ಟುಕಲಬುರಗಿ- 12 ಕೆರೆ,3, 338 ಹೆಕ್ಟರ್ ಅಚ್ಚುಕಟ್ಟುಕಮಲಾಪುರ- 29 ಕೆರೆ,3, 315 ಹೆಕಟರ್ ಅಚ್ಚುಕಟ್ಟು- ಸೇಡಂ- 34 ಕೆರೆ,3, 946 ಹೆಕ್ಟರ್ ಅಚ್ಚುಕಟ್ಟು- ಶಹಾಬಾದ್- 1 ಕೆರೆ, 30 ಹೆಕ್ಟರ್ ಅಚ್ಚುಕಟ್ಟುಯಡ್ರಾಮಿ- 3 ಕೆರೆ,192 ಹೆಕ್ಟರ್ ಅಚ್ಚುಕಟ್ಟು