ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಮಹಾತ್ಮಗಾಂಧಿಜೀ ಅವರ ಆದರ್ಶಗಳು, ಸರಳತೆ, ಬೌದ್ಧಿಕತೆ, ಸಂಸ್ಕೃತಿ ಮೂಲವನ್ನು ಅನುಸರಿಸದರೆ ಭಾರತ ಜಗತ್ತಿನಲ್ಲಿಯೇ ಮುಂದುವರೆದ ರಾಷ್ಟ್ರವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.ಪಟ್ಟಣದ ವಿಜಯ ಕಾಲೇಜಿನಲ್ಲಿ ವಿದ್ಯಪ್ರಚಾರ ಸಂಘ, ವಿಜಯ ಪ್ರಥಮ ದರ್ಜೆ ಕಾಲೇಜು, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತಾಶ್ರಯದಲ್ಲಿ ದೆಹಲಿ ಕೇಂದ್ರ ಗಾಂಧಿ ಸ್ಮಾರಕ ನಿಧಿಯ 75ನೇ ವರ್ಷಾಚರಣೆ ಅಂಗವಾಗಿ ನಡೆದ ಗಾಂಧಿ ವಿಚಾರಗಳ ಪ್ರಸ್ತುತತೆ ಯಶೋಧರಮ್ಮ ದಾಸಪ್ಪ ಸಂಸ್ಮರಣೆ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಯಶೋಧರಮ್ಮ ದಾಸಪ್ಪನವರ ಮನೆಯಲ್ಲಿ ರಾಜಕೀಯದ ಅಧಿಕಾರಿಗಳ ಖುರ್ಚಿ ತುಂಬಿತುಳುಕತಾ ಇತ್ತು. ಅಧಿಕಾರ ಖುರ್ಚಿ ಇದ್ದರು ಸಹ ನೈತಿಕಗಾಗಿ ಗಾಂಧಿ ಪ್ರೇರಿತ ವಿಷಯಗಳನ್ನು ಅನುಭವಿಸಿ ಅನುಧಾರಣೆ ಮಾಡಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.ಯಶೋಧಮ್ಮ ದಾಸಪ್ಪ ಅವರು ಯಾವ ಕಾರಣಕ್ಕೆ ನೈತಿಕ ರಾಜಕಾರಣಕ್ಕೆ ಹೆಚ್ಚು ಹೊತ್ತುಕೊಟ್ಟಿದ್ದರೋ ಅದಕ್ಕೆ ಪ್ರಭಾವ ಬೀರಿದ ಮಹಾತ್ಮಗಾಂಧಿ, ಕಸ್ತೂರಬಾ ಅವರ ಹೆಸರಿನಲ್ಲಿ ದೊಡ್ಡ ಸಂಸ್ಥೆಯನ್ನು ಕಟ್ಟಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಕಸ್ತೂರ ಬಾ ಗಾಂಧಿ ಅವರ ಹೆಸರಿನಲ್ಲಿ ರಾಷ್ಟ್ರಮಟ್ಟದ ಸಂಸ್ಥೆಯನ್ನು ಕಟ್ಟಿ ಈ ಭಾಗದ ಜನರಿಗೆ ನೈತಿಕ, ಬದುಕಿನ ಪ್ರಜ್ಞೆಯನ್ನು ಮೌಲ್ಯಯುತ ಜೀವನ ನಡೆಸುವ ಪ್ರಯತ್ನ ಮಾಡಿದ್ದಾರೆ ಎಂದು ಬಣ್ಣಿಸಿದರು.
ಸಚಿವರಾಗಿದ್ದ ಯಶೋಧರಮ್ಮ ದಾಸಪ್ಪನವರು ಸಮಾಜದಲ್ಲಿ ಮದ್ಯ ಪಾನ ಕುಟುಂಬಗಳನ್ನು ಅಧೋಗತಿಗೆ ತಳ್ಳುತ್ತವೆ. ಹಾಗಾಗಿ ಮದ್ಯಪಾನವನ್ನು ಸ್ಥಗಿತಗೊಳಿಸಿದರೆ ಮಾತ್ರ ನಾನು ಸಚಿವ ಸ್ಥಾನದಲ್ಲಿ ಮುಂದುವರೆಯುತ್ತೇನೆ. ಇಲ್ಲವಾದರೆ ನನಗೆ ಸಚಿವ ಸ್ಥಾನ ಬೇಡ ಎಂದಾಗ ಸರಕಾರ ಅವರ ಆಶಯಗಳಿಗೆ ಸ್ಪಂದಿಸದಿದ್ದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಬಂದ ದಿಟ್ಟಮಹಿಳೆ ಎಂದು ಹೇಳಿದರು.ಕಸ್ತೂರಿಬಾ ಗಾಂಧಿ ರಾಷ್ಟ್ರೀಯ ಸ್ಮಾರಕದ ಟ್ರಸ್ಟಿ ಪ್ರೊ.ಜಿ.ಬಿ.ಶಿವರಾಜು ಮಾತನಾಡಿ, ಮಹಾತ್ಮಾಗಾಂಧಿಜೀ ಅವರ ವಿಚಾರಗಳನ್ನು ಪ್ರಾಮಾಣಿಕವಾಗಿ ಸಮಾಜಕ್ಕೆ ಸರಿಯಾಗಿ ತಲುಪಿಸದೆ ಇರುವುದರಿಂದಾಗಿ ಸಮಾಜ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಧೋಗತಿಗೆ ತಲುಪಲು ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮಲ್ಲಿ ಶಿಕ್ಷಣ, ಸಾಂಸ್ಕೃತಿಕ, ಸಂಸ್ಕಾರ ಸೇರಿದಂತೆ ಸಮಾಜಕ್ಕೆ ಬೇಕಾದ ಎಲ್ಲವು ಇದೆ. ಆದರೆ, ನಾವು ಏನು ಇಲ್ಲದಂತೆ ಬದುಕು ನಡೆಸುತ್ತಿದ್ದೇವೆ. ಮನುಷ್ಯನಲ್ಲಿ ಮೌಲ್ಯವನ್ನು ಹೆಚ್ಚಿಸುವಂತಿರಬೇಕು. ಅಂತಹ ಕೆಲಸಗಳನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು ಎಂದು ಸಲಹೆ ನೀಡಿದರು.ಇದೇ ವೇಳೆ ಯುವ ಬರಹಗಾರ್ತಿ ಸುಜಾತಕೃಷ್ಣ ಅವರ ಕವನ ಸಂಕಲವನ್ನು ಗಣ್ಯರು ಬಿಡುಗಡೆ ಮಾಡಲಾಯಿತು. ಎಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ ಕಾರ್‍ಯದರ್ಶಿ ಸರೋಜಮ್ಮತುಳಿಸಿದಾಸ್, ಸಾಹಿತಿ ಸತೀಶ್ ಜವರೇಗೌಡ, ಎಂ.ಸಿ.ನರೇಂದ್ರ, ಸಂಸ್ಥೆ ಗೌರವ ಕಾರ್‍ಯದರ್ಶಿ ಕೆ.ವಿ. ಬಸವರಾಜು ವಿಚಾರಗೋಷ್ಠಿ ನಡೆದರು. ಸಮಾರಂಭದಲ್ಲಿ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣಮೂರ್ತಿ, ಆಡಳಿತ ಮಂಡಳಿ ನಿರ್ದೇಶಕರಾದ ಎನ್.ರಾಮೇಗೌಡ, ಗೋಪಾಲಸ್ವಾಮಿ, ಸೋಮೇಗೌಡ, ಡಾ.ಲೋಕನಾಥ್, ಪ್ರಾಂಶುಪಾಲ ಕೆ.ಸೋಮಶೇಖರ್, ಡಾ.ಸಾವಿತ್ರಮ್ಮ ಹೊಸಮುನಿ, ನೇತ್ರಾವತಿ, ಸುಜಾತಕೃಷ್ಣ,ಉಪನ್ಯಾಸಕ ಡಾ.ಎನ್.ಕೆ.ವೆಂಕಟೇಗೌಡ, ಉಪಪ್ರಾಂಶುಪಾಲ ಎಂ.ರಮೇಶ್ ಸೇರಿದಂತೆ ಉನ್ಯಾಸಕರು, ಸಿಬ್ಬಂದಿ ಭಾಗವಹಿಸಿದ್ದರು.