ಸಾರಾಂಶ
ತ್ರಿಪದಿಗಳ ಮೂಲಕ ಸಮಾಜದ ಓರೆ ಕೋರೆ ಸರಳ ಭಾಷೆಯಲ್ಲಿ ತಿದ್ದಿದ ಮಹಾನ್ ಕವಿ ಸರ್ವಜ್ಞ ಎಂದು ಚಿತ್ರದುರ್ಗದ ಕುಂಬಾರ ಗುಂಡಯ್ಯ ಮಹಾ ಸಂಸ್ಥಾನದ ಬಸವ ಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಚಿತ್ರದುರ್ಗದ ಕುಂಬಾರ ಗುಂಡಯ್ಯ ಮಹಾ ಸಂಸ್ಥಾನದ ಬಸವ ಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಅಭಿಮತಕನ್ನಡಪ್ರಭ ವಾರ್ತೆ ಪರಶುರಾಂಪುರ
ತ್ರಿಪದಿಗಳ ಮೂಲಕ ಸಮಾಜದ ಓರೆ ಕೋರೆ ಸರಳ ಭಾಷೆಯಲ್ಲಿ ತಿದ್ದಿದ ಮಹಾನ್ ಕವಿ ಸರ್ವಜ್ಞ ಎಂದು ಚಿತ್ರದುರ್ಗದ ಕುಂಬಾರ ಗುಂಡಯ್ಯ ಮಹಾ ಸಂಸ್ಥಾನದ ಬಸವ ಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ಪರಶುರಾರಾಂಪುರದಲ್ಲಿ ದೇವಾಲಯದ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ಸರ್ವಜ್ಞ ಜಯಂತಿ ಉದ್ಘಾಟಿಸಿ, ತಳ ಸಮುದಾಯಗಳು ಮುಖ್ಯ ವಾಹಿನಿಗೆ ಬರಬೇಕಾದರೆ ಮೊದಲು ಮಕ್ಕಳಿಗೆ ಶಿಕ್ಷಣ ನೀಡಬೇಕು. ಆ ಮೂಲಕ ಇರುವಿಕೆಯನ್ನು ಖಚಿತಪಡಿಸಲು ಸಾಧ್ಯ. ಪಾಲಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಸರ್ವಜ್ಞ ಕವಿಯ ತ್ರಿಪದಿಗಳು ಸರ್ವಕಾಲಕ್ಕೂ ಜನಜನಿತ. ಅವುಗಳಲ್ಲಿನ ಅಂಶಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ತಿಳಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಜಗಳೂರು ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ರುದ್ರೇಶ ಸದಸ್ಯರಾದ ಕೃಷ್ಣಪ್ಪ, ಪ್ರಕಾಶ, ಬೊಮ್ಮಕ್ಕ, ರವಿ, ವಸಂತ, ಪ್ರಸನ್ನ ಕುಮಾರ್ ದೇವಾಲಯ ಸಮಿತಿಯ ಎಂ ಸಿದ್ದೇಶ್, ರವಿ, ಜಾಜೂರು ಅಂಜಿನಪ್ಪ ಹಾಜರಿದ್ದರು.--------OOOO--------ಪರಶುರಾರಾಂಪುರದಲ್ಲಿ ದೇವಾಲಯದ ಸಮಿತಿಯಿಂದ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತಿಯನ್ನು ಚಿತ್ರದುರ್ಗದ ಕುಂಬಾರ ಗುಂಡಯ್ಯ ಮಹಾ ಸಂಸ್ಥಾನದ ಬಸವ ಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಉದ್ಘಾಟಿಸಿದರು.