ನಿರಂತರವಾದ ಚಟುವಟಿಕೆಗಳನ್ನು ನಡೆಸುವಲ್ಲಿ ಸುಸಜ್ಜಿತ ಸಭಾಭವನಗಳು ಮಹತ್ವದ ಪಾತ್ರವಹಿಸುತ್ತವೆ. ಸಾಹಿತ್ಯಿಕ, ಸಾಂಸ್ಕೃತಿಕ, ಪ್ರಗತಿಪರ ಚರ್ಚೆ, ಸಂವಾದ, ನಾಟಕಗಳು, ವಿಚಾರಗೋಷ್ಠಿಗಳು ನಿರಂತರವಾಗಿ ನಡೆಯುವ ಸಾಂಸ್ಕೃತಿಕ ನಗರಿ ಧಾರವಾಡ.
ಧಾರವಾಡ:
ಡಾ. ಲಿಂಗರಾಜ ಅಂಗಡಿ ಕಳೆದ ಹದಿನೈದು ವರ್ಷಗಳ ಅಧ್ಯಕ್ಷಾವಧಿಯಲ್ಲಿ ಸಾಹಿತ್ಯ ಪರಿಷತ್ತಿನ ಘನತೆ ಎತ್ತಿಹಿಡಿದಿದ್ದಾರೆ ಎಂದು ಹಿರಿಯ ಸಾಹಿತಿ ಡಾ. ವೀರಣ್ಣ ರಾಜೂರ ಶ್ಲಾಘನೆ ವ್ಯಕ್ತಪಡಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಸಾಹಿತ್ಯ ಭವನದ ಮೊದಲ ಮಹಡಿಯಲ್ಲಿ ನೂತನವಾಗಿ ನಿರ್ಮಾಣವಾದ ಸಭಾಭವನವನ್ನು ಸೋಮವಾರ ಉದ್ಘಾಟಿಸಿದ ಅವರು, ಸತತವಾಗಿ ಮೂರು ಅವಧಿ ಅಂಗಡಿ ಅವರು ಸಾಹಿತ್ಯಿಕ ಚಟುವಟಿಕೆ ಮಾತ್ರವಲ್ಲದೇ ಉತ್ತಮ ಆಡಳಿತ ನಿರ್ವಹಣೆ ಮಾಡಿದ್ದಾರೆ ಎಂದರು.
ಹಾಗೆಯೇ, ನಿರಂತರವಾದ ಚಟುವಟಿಕೆಗಳನ್ನು ನಡೆಸುವಲ್ಲಿ ಸುಸಜ್ಜಿತ ಸಭಾಭವನಗಳು ಮಹತ್ವದ ಪಾತ್ರವಹಿಸುತ್ತವೆ. ಸಾಹಿತ್ಯಿಕ, ಸಾಂಸ್ಕೃತಿಕ, ಪ್ರಗತಿಪರ ಚರ್ಚೆ, ಸಂವಾದ, ನಾಟಕಗಳು, ವಿಚಾರಗೋಷ್ಠಿಗಳು ನಿರಂತರವಾಗಿ ನಡೆಯುವ ಸಾಂಸ್ಕೃತಿಕ ನಗರಿ ಧಾರವಾಡ. ಈ ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾದ ಚಟುವಟಿಕೆಗಳು ನಡೆಯುವ ಕೇಂದ್ರವಾಗಿದೆ. ಇದೀಗ ಪರಿಷತ್ತಿನಲ್ಲಿ ಮತ್ತೊಂದು ಸುಸಜ್ಜಿತ ಸಭಾಭವನ ನಿರ್ಮಾಣ ಮಾಡಿರುವುದು ಪ್ರಶಶಂಸನೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಸಂಸದರು, ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಹು-ಧಾ ಮಹಾನಗರ ಪಾಲಿಕೆ ಸಹಾಯದೊಂದಿಗೆ ಈ ಸಭಾಭವನಗಳನ್ನು ನಿರ್ಮಿಸಲು ಸಾಧ್ಯವಾಗಿದೆ. ನನ್ನ ಕಾಲಾವಧಿಯಲ್ಲಿ ಅತೀ ಹೆಚ್ಚು ದತ್ತಿಗಳು, ದತ್ತಿ ಕಾರ್ಯಕ್ರಮ, ತಾಲೂಕು ಜಿಲ್ಲಾ ಸಾಹಿತ್ಯ ಸಮ್ಮೇಳನಗಳನ್ನು ಹಾಗೂ ಕಸಾಪ ಶತಮಾನೋತ್ಸವ, 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಿದ ತೃಪ್ತಿ ಇದೆ. ಇದೇ ನ. 23ಕ್ಕೆ ನನ್ನ ಅಧಿಕಾರದ ಅವಧಿ ಮುಗಿದಿದ್ದು, ಇಲ್ಲಿಯವರೆಗೆ ಸಹಾಯ ಸಹಕಾರ ಮಾರ್ಗದರ್ಶನ ಮಾಡಿದ ಎಲ್ಲರಿಗೂ ಆಭಾರಿ ಎಂದರು.
ಪ್ರೊ. ಕೆ.ಎಸ್. ಕೌಜಲಗಿ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಡಾ. ಎಸ್.ಎಸ್. ದೊಡಮನಿ ವಂದಿಸಿದರು. ಪ್ರಮಿಳಾ ಜಕ್ಕಣ್ಣವರ ಪ್ರಾರ್ಥಿಸಿದರು. ಎಸ್.ಎಚ್. ಪ್ರತಾಪ್, ಮಹೇಶ ಪತ್ತಾರ, ಎಂ.ಜಿ. ಸುಭೇದಾರ, ಡಾ. ರೇಖಾ ಜೋಗೂಳ, ಪ್ರೊ. ಶರಣಪ್ಪ ಅಡಕರ, ನಿಂಗಪ್ಪ ಬಂಡಿ ಇದ್ದರು.