ಲಂಚ ಪಡೆಯುತ್ತಿದ್ದ ಆರೋಗ್ಯ ಅಧಿಕಾರಿ ಲೋಕಾ ಬಲೆಗೆ

| Published : Jun 06 2024, 12:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿಇಲ್ಲಿನ ನೆಹರು ನಗರದಲ್ಲಿನ ಖಾಸಗಿ ಆಸ್ಪತ್ರೆ ಮೇಲೆ ದಾಳಿ ನಡೆಸಿದ ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದ ತಂಡ, ಕ್ರಮ ಜರುಗಿಸದಿರಲು ₹30 ಸಾವಿರ ಲಂಚದ ಹಣ ಪಡೆಯುತ್ತಿದ್ದ ವೇಳೆ ಆರೋಗ್ಯ ನಿರೀಕ್ಷಕ ಲೋಕಾಯುಕ್ತ ಅಧಿಕಾರಿಗಳ ಬಲೆಗೆಬಿದ್ದಿದ್ದಾರೆ.

ಬೆಳಗಾವಿ ತಾಲೂಕು ವೈದ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ಅವರ ಸಹಾಯಕರಾದ ಆರೋಗ್ಯ ನಿರೀಕ್ಷಕ ಶಂಭು ರಾಚನ್ನವರ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿ.

ಮೇ 27 ರಂದು ಬೆಳಗಾವಿ ನೆಹರು ನಗರದಲ್ಲಿರುವ ಕರಡಿ ಆಯುಷ್ಯ ಥೆರಪಿ ಕ್ಲಿನಿಕ್‌ಗೆ ತಾಲೂಕು ವೈದ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ಹಾಗೂ ಆರೋಗ್ಯ ನಿರೀಕ್ಷಕ ಶಂಭು ರಾಚನ್ನವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ನ್ಯೂನ್ಯತೆಗಳಿರುವ ಬಗ್ಗೆ ಆಸ್ಪತ್ರೆಯ ಮೇಲೆ ಕ್ರಮ ಜರುಗಿಸುವುದಾಗಿ ಆಸ್ಪತ್ರೆಯ ಮಾಲೀಕ ಹಾಗೂ ವೈದ್ಯ ವಿನಾಯಕ ಕರಡಿ ಅವರಿಗೆ ತಿಳಿಸಿದ್ದರು. ಮೇ 28 ರಂದು ಆಸ್ಪತ್ರೆಯ ವೈದ್ಯ ಡಾ.ವಿನಾಯಕ ಕರಡಿ ಅವರ ಮೊಬೈಲ್‌ಗೆ ಕರೆ ಮಾಡಿ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಕರೆಯಿಸಿಕೊಂಡು ನೋಟಿಸ್‌ ನೀಡಿದ್ದಾರೆ. ಬಳಿಕ ಈ ನೋಟಿಸ್‌ ಮೇಲೆ ಕ್ರಮ ಜರುಗಿಸದೇ ಇರಲು ಆರೋಗ್ಯ ನಿರೀಕ್ಷಕ ಶಂಭು ರಾಚನ್ನವರ ₹30 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯ ಡಾ.ವಿನಾಯಕ ಕರಡಿ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಕಾರ್ಯ ಪ್ರವೃತ್ತರಾದ ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ನಿರಂಜನ ಪಾಟೀಲ ನೇತೃತ್ವದ ತಂಡ ಲಂಚದ ಹಣ ಪಡೆದುಕೊಳ್ಳುವ ಸಮಯದಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ.