ತಾಲೂಕಿನ ನಂದಗುಡಿ ಹೋಬಳಿ ನೆಲವಾಗಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಾರ್ಥಮಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮತ್ತು ಸಹ ಶಿಕ್ಷಕ ಎಂ.ಮುನಿಸ್ವಾಮಯ್ಯ ಅವರ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರಿ ವೃತ್ತಿ ಪಯಣದಲ್ಲಿ ನಿವೃತ್ತಿ ಸಹಜ. 30 ವರ್ಷ ಶಿಕ್ಷಕರಾಗಿ ಸೇವಾ ಅವಧಿಯಲ್ಲಿ ಸುಮಾರು ಶಾಲೆಗಳಲ್ಲಿ ಮಾದರಿ ಕೆಲಸಗಳನ್ನು ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಹೊಸಕೋಟೆ
ನಿಮ್ಮ ಕೈಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡಿ ಸಮಾಜದಲ್ಲಿ ಉತ್ತಮ ಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಅವರೆಷ್ಟೇ ಎತ್ತರಕ್ಕೆ ಬೆಳೆದರೂ ಪ್ರಾಥಮಿಕ ಶಾಲೆಯಲ್ಲಿ ನೀವು ಕಲಿಸಿದ ಮೌಲ್ಯ, ಪಾಠವನ್ನು ಜೀವನ ಪರ್ಯಂತ ಮರೆಯುವುದಿಲ್ಲ ಎಂದು ಹೊಸಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಹೇಳಿದರು.ತಾಲೂಕಿನ ನಂದಗುಡಿ ಹೋಬಳಿ ನೆಲವಾಗಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಾರ್ಥಮಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮತ್ತು ಸಹ ಶಿಕ್ಷಕ ಎಂ.ಮುನಿಸ್ವಾಮಯ್ಯ ಅವರ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರಿ ವೃತ್ತಿ ಪಯಣದಲ್ಲಿ ನಿವೃತ್ತಿ ಸಹಜ. 30 ವರ್ಷ ಶಿಕ್ಷಕರಾಗಿ ಸೇವಾ ಅವಧಿಯಲ್ಲಿ ಸುಮಾರು ಶಾಲೆಗಳಲ್ಲಿ ಮಾದರಿ ಕೆಲಸಗಳನ್ನು ಮಾಡಿದ್ದಾರೆ. ಜನರು ಮತ್ತು ವಿದ್ಯಾರ್ಥಿಗಳು ನೆನೆಸುತ್ತಾರೆ. ಅಂತಹವರ ಸಾಲಿನಲ್ಲಿ ಮುನಿಸ್ವಾಮಯ್ಯ ನಿಲ್ಲುತ್ತಾರೆ. ಸರ್ಕಾರದ ಕೆಲಸ, ದೇವರ ಕೆಲಸ ಎಂದು ಭಾವಿಸಿ ಕರ್ತವ್ಯದಲ್ಲಿ ನಿಷ್ಠೆ, ಪ್ರಾಮಾಣಿಕತೆಯೊಂದಿಗೆ ಶಿಕ್ಷಣ ಇಲಾಖೆ ಜೊತೆಗೆ ಹೊಂದಾಣಿಕೆ, ಪ್ರೀತಿ, ವಿಶ್ವಾಸದಿಂದ ನಡೆದುಕೊಂಡಿದ್ದಾರೆ. ಪ್ರಾಥಮಿಕ ಶಿಕ್ಷಕರ ತಾಲೂಕು ಅಧ್ಯಕ್ಷರಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಉತ್ತಮ ಸೇವೆ ಸಲ್ಲಿಸಿ ಇತರರಿಗೆ ಮಾದರಿಯಾಗಿದ್ದಾರೆ. ಪರಿಪೂರ್ಣ ಕರ್ತವ್ಯ ನಿರ್ವಹಿಸಿದ ಅವರ ಸತತ ಪರಿಶ್ರಮದ ಸೇವೆ ಶ್ಲಾಘನೀಯ. ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಸಮನ್ವಯ ಅಧಿಕಾರಿ ಸತೀಶಕುಮಾರ್, ಸರ್ಕಾರಿ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಸೊಣ್ಣಪ್ಪ, ಜಿಲ್ಲಾ ಖಜಾಂಚಿ ಬಿ.ಎಂ.ಗಂಗಾಧರಯ್ಯ, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ರಾಜಣ್ಣ, ನಿಕಟಪೂರ್ವ ಗೌರವಾಧ್ಯಕ್ಷ ಸುಬ್ಬರಾಯಪ್ಪ, ಉಪಾಧ್ಯಕ್ಷ.ಕೆ.ವಿ.ಶಂಕರಪ್ಪ, ಲಲಿತಮ್ಮ, ಪ್ರಧಾನ ಕಾರ್ಯದರ್ಶಿ ಜಿ.ಪಿ.ನಾಗರಾಜ, ನಂದಗುಡಿ ಹೋಬಳಿಯ ಸಹ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಜರಿದ್ದರು.