ನರಸಿಂಹರಾಜಪುರ: ತಾಲೂಕಿನ ಮಡಬೂರು ಗ್ರಾಮದ ಯಕ್ಕಡಬೈಲು ಜಾನ್ ಪೌಲ್ ಎಂಬುವರ ಮನೆ ಸಮೀಪದಲ್ಲೇ 10 ಕಾಡಾನೆಗಳ ಹಿಂಡು ಮಂಗಳವಾರ ಬೆಳಿಗ್ಗೆ ಕಾಣಿಸಿಕೊಂಡಿದೆ.

ಬೆಳಿಗ್ಗೆ 9.30 ಗಂಟೆ ಸುಮಾರಿಗೆ ಜಾನ್ ಪೌಲ್ ಅವರ ಮನೆಯ ನಾಯಿ ಬೊಗಳಿದ್ದು ಮನೆಯವರು ನೋಡಿದಾಗ ಮನೆಯ ಪಕ್ಕದಿಂದ 100 ಅಡಿ ದೂರದ ಮನೆಯ ಪಕ್ಕದ ಆರಂಬಳ್ಳಿ ಅರಣ್ಯದಲ್ಲಿ ಮರಿಗಳು ಸೇರಿದಂತೆ 10 ಕಾಡಾನೆಗಳು ನಿಂತಿದ್ದವು. ಎಷ್ಟು ಹೊತ್ತಾದರೂ ಕಾಡಾನೆಗಳು ಜಾಗ ಬಿಟ್ಟು ಹೋಗದೆ ಇರುವುದರಿಂದ ನರಸಿಂಹರಾಜಪುರ ಅರಣ್ಯ ಇಲಾಖೆ ಹಾಗೂ ಆನೆ ನಿಗ್ರಹ ಪಡೆಗೆ ತಿಳಿಸಿದ್ದಾರೆ. ಸ್ವಲ್ಫ ಹೊತ್ತಿಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಹಾಗೂ ಆನೆ ನಿಗ್ರಹ ಪಡೆಯವರು ಕಾಡಾನೆಗಳ ಹಿಂಡನ್ನು ಸಾತ್ಕೋಳಿ, ಮುದುಕೂರು ಕಡೆಯ ಅರಣ್ಯಕ್ಕೆ ಅಟ್ಟಿದ್ದಾರೆ.

--ಬಾಕ್ಸ್--

ಆನೆ ಕಂದಕ ಮುಂದುವರಿಸಲು ಒತ್ತಾಯ

ಇದೇ ಮಡಬೂರು ಗ್ರಾಮದ ಎಕ್ಕಡಬೈಲಿನಲ್ಲಿ 2024 ರ ಡಿಸೆಂಬರ್ ನಲ್ಲಿ ಎಲಿಯಾಸ್ ಎಂಬುವರು ಆನೆ ದಾಳಿಯಿಂದ ಮೃತಪಟ್ಟಿದ್ದರು. ಆರಂಬಳ್ಳಿ ಮೀಸಲು ಅರಣ್ಯದಿಂದ ಕಾಡಾನೆಗಳು ಈಚೆಗೆ ಬಾರದಂತೆ ಆಗಾಗಲೇ ಅರ್ಧ ಕಿ.ಮೀ.ಆನೆ ಕಂದಕ ಮಾಡಲಾಗಿದೆ. ಇನ್ನೂ 4 ರಿಂದ 5 ಕಿ.ಮೀ. ಆನೆ ಕಂದಕ ಮಾಡಿದರೆ ಆರಂಬಳ್ಳಿ ಮೀಸಲು ಅರಣ್ಯದಿಂದ ಕಾಡಾನೆಗಳು ಎಕ್ಕಡಬೈಲು, ಮಡಬೂರು ಕಾಲೋನಿಗ ಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅರಣ್ಯ ಇಲಾಖೆಯವರು ಗಮನ ನೀಡಿ ಆನೆ ಕಂದಕ ಮುಂದುವರಿಸಬೇಕು ಎಂದು ಯಕ್ಕಡಬೈಲಿನ ಜಾನ್ ಪೌಲ್ ಹಾಗೂ ಗ್ರಾಮಸ್ಥರು ಸರ್ಕಾರವನ್ನು ಒತ್ತಾಯಿಸಿದ್ದಾರೆ.