ಶ್ರೀ ರಾಮಲೀಲಾ ಮೈದಾನಕ್ಕೆ ಹೈಟೆಕ್ ಸ್ಪರ್ಶ

| Published : Mar 04 2024, 01:16 AM IST

ಸಾರಾಂಶ

ಕುದೂರು: ಕುದೂರು ಗ್ರಾಮದ ಶ್ರೀರಾಮಲೀಲಾ ಮೈದಾನಕ್ಕೆ ಹೈಟೆಕ್ ಸ್ಪರ್ಶ ನೀಡಲು ಕ್ಷಣಗಣನೆ ಆರಂಭವಾಗಿದ್ದು, ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 6 ಕೋಟಿ ರು.ವೆಚ್ಚದಲ್ಲಿ ಮೈದಾನ ವಿಶೇಷ ಅನುಕೂಲಗಳನ್ನು ಪಡೆಯಲಿದೆ.

ಕುದೂರು: ಕುದೂರು ಗ್ರಾಮದ ಶ್ರೀರಾಮಲೀಲಾ ಮೈದಾನಕ್ಕೆ ಹೈಟೆಕ್ ಸ್ಪರ್ಶ ನೀಡಲು ಕ್ಷಣಗಣನೆ ಆರಂಭವಾಗಿದ್ದು, ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 6 ಕೋಟಿ ರು.ವೆಚ್ಚದಲ್ಲಿ ಮೈದಾನ ವಿಶೇಷ ಅನುಕೂಲಗಳನ್ನು ಪಡೆಯಲಿದೆ.

ಕುದೂರು ಹೋಬಳಿಯಲ್ಲಿಯೇ ದೊಡ್ಡ ಮೈದಾನ ಎನಿಸಿದೆ. ಈಗಾಗಲೇ ಅದರ ಸಮತಟ್ಟು ಮಾಡಲು ಮತ್ತು ವಾಕಿಂಗ್ ಪಾತ್ ಮಾಡಲು ಸಿದ್ಧತೆಗಳು ನಡೆದಿವೆ. ಈಗ 6 ಕೋಟಿ ರು. ವೆಚ್ಚದಲ್ಲಿ ವಿಶೇಷವಾಗಿ ಎಂಜಿನಿಯರ್ ಮೂಲಕ ವ್ಯವಸ್ಥಿತ ಪ್ಲಾನ್ ರಚಿಸಿ ಅದರಂತೆ ಮೈದಾನವನ್ನು ಜೀರ್ಣೋದ್ದಾರಗೊಳಿಸಲು ಸಿದ್ದತೆಯಾಗಿದೆ.

ಹೈಟೆಕ್ ಮೈದಾನದ ಕಾಮಗಾರಿಗೆ ಚಾಲನೆ ನೀಡಲು ಮಾರ್ಚ್ 5 ರಂದು ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಎಚ್.ಸಿ.ಬಾಲಕೃಷ್ಣ ಚಾಲನೆ ನೀಡಲಿದ್ದಾರೆ.

ಶ್ರೀರಾಮಲೀಲಾ ಮೈದಾನ ಎಂಬ ಸುಂದರ ಹೆಸರಿನಿಂದ ಕರೆಯಲಾಗುತ್ತದೆ. ಇದರ ವಿಸ್ತೀರ್ಣ ಸುಮಾರು ಎರಡೂವರೆ ಎಕರೆಯಷ್ಟು ವಿಸ್ತಾರವಾಗಿದೆ. 27 ವರ್ಷಗಳ ಹಿಂದೆ ಕಟ್ಟಿದಂತಹ ಬಯಲು ರಂಗಮಂದಿರವಿದೆ. ಅದರ ಪಕ್ಕದಲ್ಲೇ ಚಿಕ್ಕದೊಂದು ಮಕ್ಕಳ ಆಟಿಕೆಗಳ ವಿಭಾಗವನ್ನು ಮಾಡಲಾಗಿದೆ. ಇದಿಷ್ಟು ಬಿಟ್ಟರೆ, ಹೋಬಳಿ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟಗಳಿಗೆ ಬಳಕೆಯಾಗಿದ್ದು ಬಿಟ್ಟರೆ ಅತ್ಯಂತ ಹೆಚ್ಚು ಬಳಕೆಯಾಗಿದ್ದು ಧೂಮಪಾನ, ಮದ್ಯಪಾನ, ಹಾಗೂ ಗಾಂಜಾ ಸೇವನೆಗೆ.

ಹೈಟೆಕ್ ಮೈದಾನದಲ್ಲಿ ಏನೇನಿದೆ:

25 ವರ್ಷದ ಹಿಂದೆ ಗೂಡಿನಂತಹ ರಂಗಮಂದಿರವನ್ನು ತೆಗೆದು ಆಧುನಿಕ ರೀತಿಯಲ್ಲಿ ಕಟ್ಟಲಾಗುತ್ತದೆ. ರಂಗಮಂದಿರದ ಹಿಂಭಾಗಕ್ಕೆ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಅಲಂಕಾರ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅದರ ಮೇಲ್ಭಾಗದಲ್ಲಿ ಚೆಸ್, ಕೇರಂನಂತಹ ಆಟಗಳನ್ನು ಆಡಲು ಕೊಠಡಿ ನಿರ್ಮಾಣ ಮಾಡಲಾಗುತ್ತದೆ.

ರಂಗಮಂದಿರದ ಒಂದು ಪಕ್ಕದಲ್ಲಿ ಮಕ್ಕಳ ಸುಂದರ ಉದ್ಯಾನವನ ನಿರ್ಮಾಣ ಮಾಡಿ ಅದರಲ್ಲಿ ಮಕ್ಕಳು ಆಡಬಹುದಾದ ಆಟಿಕೆಗಳನ್ನು ಅಲ್ಲಿ ಅಳವಡಿಸುವಂತೆ ವಿನ್ಯಾಸ ಮಾಡಲಾಗಿದೆ.

ಈಗಿರುವ ಮೈದಾನದ ರಂಗಮಂದಿರದ ಎಡಭಾಗದಿಂದ ಸೊಸೈಟಿ ಕಟ್ಟಡದ ಹಿಂಭಾಗದವರೆಗೆ ಎಲ್ ಆಕಾರದಲ್ಲಿ ಜನರು ಕುಳಿತುಕೊಳ್ಳುವಂತಹ ಮೆಟ್ಟಿಲುಗಳನ್ನು ಮಾಡಿ ನೆರಳಿಗೆ ಟೆಂಜೈಲ್ ರೂಫಿಂಗ್ ಹಾಕಲಾಗುತ್ತದೆ. ಮೈದಾನದಲ್ಲಿ ಆಡುವ ಆಟಗಳು ಮತ್ತು ರಂಗಮಂದಿರದ ಚಟುವಟಿಕೆಗಳನ್ನು ಕುಳಿತು ನೋಡುವಂತಹ ವ್ಯವಸ್ಥೆ ಮಾಡಲಾಗುತ್ತದೆ. ಈಗಿರುವ ಕಾಂಪೋಂಡನ್ನು ಸಂಪೂರ್ಣವಾಗಿ ತೆರವುಗೊಳಿಸಿ ನೂತನವಾಗಿ ನಿರ್ಮಾಣ ಮಾಡಲಾಗುತ್ತದೆ. ಬಿದ್ದ ಮಳೆನೀರು ಹೊರಗೆ ಹೋಗಿ ಒಳಚರಂಡಿಗೆ ಸಂಪರ್ಕ ಕಲ್ಪಿಸುತ್ತದೆ. ಇದರ ಮೇಲೆಯೇ ಟೈಲ್ಸ್‌ಗಳನ್ನು ಹಾಕಿ ಅದನ್ನು ಜನರ ವಾಯುವಿಹಾರಕ್ಕೆ ಅನುವು ಮಾಡಿಕೊಡಲಾಗಿದೆ.

ಯಾವ ಯಾವ ಕ್ರೀಡೆಗಳಿಗೆ ಅನುಕೂಲ :

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುವಂತಹ ನೆಟ್ ವ್ಯವಸ್ಥೆಯಲ್ಲಿ ಕ್ರಿಕೆಟ್ ಅಭ್ಯಾಸ ಮಾಡುವಂತೆ ಯೋಜನೆ ಮಾಡಲಾಗಿದೆ. ಮೈದಾನದ ಸುತ್ತಲೂ ಅಥ್ಲೆಟಿಕ್ ಕ್ರೀಡೆಗಳಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಿ, ರಾತ್ರಿ ವೇಳೆಯೂ ಆಟವಾಡಲು ಮತ್ತು ಪಂದ್ಯಾವಳಿಗಳನ್ನು ಏರ್ಪಡಿಸಲು ಅನುಕೂಲವಾಗಲು ನಾಲ್ಕು ಹೈಮಾಸ್ ದೀಪಗಳನ್ನು ಅಳವಡಿಸುವ ವ್ಯವಸ್ಥೆ ಮಾಡಲಾಗಿದೆ. ಮೈದಾನದ ಪಕ್ಕದಲ್ಲಿರುವ ರೇಷ್ಮೆ ಇಲಾಖೆ ಕಟ್ಟಡ ತೆರವುಗೊಂಡ ನಂತರ ಆ ಜಾಗದಲ್ಲಿ ಇಂಡೋರ್ ಸ್ಟೇಡಿಯಂ ನಿರ್ಮಾಣ ಮಾಡಿ ಅಲ್ಲಿ ಶಟಲ್ ಬ್ಯಾಂಡ್ಮಿಂಟನ್, ವಾಲಿಬಾಲ್, ಟೆನ್ನಿಸ್ ಆಟಗಳಿಗೆ ಅನುಕೂಲ ಮಾಡಿಕೊಡಲಾಗುತ್ತದೆ. ಈ ಮೈದಾನಕ್ಕೆ ಮೂರು ಗೇಟ್‌ಗಳನ್ನು ನೀಡಲಾಗಿದ್ದು ಉತ್ತರ ದಕ್ಷಿಣ ಹಾಗೂ ಪೂರ್ವ ಭಾಗದಲ್ಲಿ ಗೇಟ್‌ಗಳನ್ನು ನಿರ್ಮಿಸಲಾಗುವಂತೆ ಪ್ಲಾನ್ ಮಾಡಲಾಗಿದೆ.

ಜನರ ಆಕ್ರೋಶ ಏಕೆ? :

ಶ್ರೀರಾಮಲೀಲಾ ಮೈದಾನದ 2 ಎಕರೆ 27 ಗುಂಟೆ ವಿಸ್ತೀರ್ಣದಲ್ಲಿದೆ. ಮೈದಾನದ ಸುತ್ತಲೂ ಅರಳಿ, ಆಲ, ಹತ್ತಿಯಂತಹ ಮರಗಳು ಸೊಗಸಾಗಿ ಬೆಳೆದು ನಿಂತಿವೆ. ಹೈಟೆಕ್ ಮೈದಾವನ್ನಾಗಿ ರೂಪಿಸುವ ಉದ್ದೇಶದಿಂದ ಆ ಮರಗಗಳು ಧರೆಗುರುಳಿಸಲು ತೀರ್ಮಾನಿಸಲಾಗಿದೆ. ಈ ಕುರಿತಂತೆ ಇತ್ತೀಚೆಗೆ ನಡೆದ ಗ್ರಾಮಪಂಚಾಯ್ತಿ ಸಭೆಯಲ್ಲೂ ಚರ್ಚೆಗಳಾಗಿವೆ. ಮರ ಕಡಿಯಲು ಶಾಸಕರ ಒತ್ತಾಯವಿದೆ. ಆದ್ದರಿಂದ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೈಚಲ್ಲಿ ಕುಳಿತಿದ್ದಾರೆ. ಇದರಿಂದ ಗ್ರಾಮದ ಜನರು ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿಯಬಾರದು. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈದಾನದ ಸುತ್ತಲೂ ಇರುವ ಆಲ ಅರಳಿ ಹತ್ತಿ ಮರಗಳಲ್ಲಿ ನೂರಾರು ಪಕ್ಷಿಗಳು ವಾಸ ಮಾಡುತ್ತಿವೆ. ಒಳ್ಳೆಯ ನೆರಳು ನೀಡುತ್ತಿವೆ. ಶಾಲಾ ಮಕ್ಕಳೊಂದಿಗೆ ಹಾಕಿದ ಗಿಡಗಳನ್ನು ಡಾ.ಸುರೇಂದ್ರಶೆಟ್ಟಿ ಎಂಬ ವೈದ್ಯರು ನಿತ್ಯವೂ ಓಡಾಡುವಾಗ ಗಿಡ ಬಾಗಿದ್ದರೆ ಹಳ್ಳಿಗಳಿಗೆ ಹೋಗಿ ರೈತರಿಂದ ನೀಲಗಿರಿ ಮರದ ಗಳಗಳನ್ನು ತಂದು ನಿಲ್ಲಿಸಿ ಆಸ್ಪತ್ರೆಯಲ್ಲಿ ಡ್ರಿಪ್ ಹಾಕುವ ಪೈಪುಗಳಿಂದಲೇ ಅವುಗಳನ್ನು ಕಟ್ಟಿ ನೀರು ಹಾಕಿಸಿ ಬೆಳೆಸಿದ್ದರೆ ಫಲ ಮೈದಾನದ ಸುತ್ತಲೂ ನೂರಾರು ಮರಗಳು ಬೆಳೆದು ನಿಂತಿವೆ. ಈಗ ಅವುಗಳನ್ನು ಕಡಿದು ಹಾಕಿದರೆ ಮೈದಾನದ ಪ್ರಾಕೃತಿಕ ಅಂದ ಮರೆಯಾಗುತ್ತದೆ. ಎಂಬುದು ಜನರ ಬೇಸರಕ್ಕೆ ಕಾರಣವಾಗಿದೆ. ಮತ್ತು ಈಗ ಸಿದ್ದಗೊಂಡಿರುವ ಯೋಜನೆಯಂತೆ ಮೈದಾನ ಅಭಿವೃದ್ಧಿಯಾದರೆ ಖೋಖೋ, ಕಬ್ಬಡಿ ಮತ್ತು ಅಥ್ಲೆಟಿಕ್ ಆಟಗಳಿಗೆ ಜಾಗ ಇಲ್ಲದಂತಾಗುತ್ತದೆ ಎಂಬ ಅನುಮಾನವನ್ನು ಕ್ರೀಡಾಪಟುಗಳು ವ್ಯಕ್ತಪಡಿಸಿದ್ದಾರೆ.

ಕೋಟ್ ............

ಪ್ರಾಜೆಕ್ಟ್ ಮುಗಿಯುವುದರ ಒಳಗೆ 13 ಕೋಟಿ ಬೇಕಾಗುತ್ತದೆ. ಈಗ ಮೊದಲ ಹಂತದಲ್ಲಿ 6 ಕೋಟಿ ಬಿಡುಗಡೆಯಾಗಿದೆ. ಉಳಿದ ಹಣವನ್ನು ಎರಡು ಹಂತದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಶಾಸಕರು ತಿಳಿಸಿದ್ದಾರೆ. ಈ ಯೋಜನೆ 6 ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ.

-ಮಂಜುನಾಥ್. ಎಂ.ಜಿ.ವಿನ್ಯಾಸ್ ಎಂಜಿನಿಯರ್ಕೋಟ್ ........

ಕುದೂರು ಗ್ರಾಮ ಮಾಗಡಿ ಕ್ಷೇತ್ರದ ಹೃದಯ ಎಂದೇ ಭಾವಿಸಿದ್ದೇನೆ. ಬಹುದಿನಗಳ ಯುವಕರ ಕನಸಾಗಿದ್ದ ಶ್ರೀರಾಮಲೀಲಾ ಮೈದಾನ ಉನ್ನತೀಕರಣಗೊಳಿಸುತ್ತಿದ್ದೇವೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ಮೊದಲ ಹಂತದಲ್ಲಿ 6 ಕೋಟಿ ಬಿಡುಗಡೆ ಮಾಡಿಸಲಾಗಿದೆ. ಉಳಿದದ್ದು ಎರಡು ಹಂತದಲ್ಲಿ ಬಿಡುಗಡೆ ಮಾಡಲಾಗುವುದು.

-ಎಚ್.ಸಿ.ಬಾಲಕೃಷ್ಣ, ಶಾಸಕರು, ಮಾಗಡಿ

(ಆಗತ್ಯಕ್ಕೆ ತಕ್ಕಷ್ಟು ಫೋಟೋ ಬಳಸಿ ಜಾಸ್ತೀನೂ ಬೇಡ)

3ಕೆಆರ್ ಎಂಎನ್ 3,4,5,6,7.ಜೆಪಿಜಿ

3. ಕುದೂರು ಶ್ರೀರಾಮಲೀಲಾ ಮೈದಾನದ ಹೈಟೆಕ್ ಸ್ಪರ್ಶ

4. ಕ್ರೀಡಾಂಗಣದ ಗ್ಯಾಲರಿ

5.6. ಮಕ್ಕಳ ಆಟದ ಉದ್ಯಾನವನ

7.ಹೈಟೆಕ್ ಮೈದಾನದ ವಿಹಂಗಮ ನೋಟ