ಸಾರಾಂಶ
ಹುಬ್ಬಳ್ಳಿ ನಿವಾಸಿ ಮನೋಜ್ ಅರ್ಕಾಟ್ ಡಿ. 22ರಂದು ಸಿದ್ಧಾರೂಢರ ದರ್ಶನ ಪಡೆದು, ಪಾದಯಾತ್ರೆ ಮೂಲಕವೇ 1799ಕಿಮೀ ವರೆಗೆ ಸಾಗಿ ಶ್ರೀರಾಮ ಮಂದಿರ ತಲುಪಿದ್ದಾನೆ.
ಹುಬ್ಬಳ್ಳಿ: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯವಾದ ಶ್ರೀರಾಮ ಮಂದಿರ ಲೋಕಾರ್ಪಣೆಗೆ ಕೌಂಟ್‌ಡೌನ್ ಶುರುವಾಗಿದ್ದು. ಶ್ರೀರಾಮನ ದರ್ಶನಕ್ಕಾಗಿ ಕಳೆದ ಡಿ. 22 ಹುಬ್ಬಳ್ಳಿಯಿಂದ ಪಾದಯಾತ್ರೆ ಕೈಗೊಂಡಿದ್ದ ಮನೋಜ್ ಅರ್ಕಾಟ್ ಜ. 18ರಂದು ಅಯೋಧ್ಯೆಗೆ ತಲುಪಿದ್ದಾನೆ.
ಹುಬ್ಬಳ್ಳಿ ನಿವಾಸಿ ಮನೋಜ್ ಅರ್ಕಾಟ್ ಡಿ. 22ರಂದು ಸಿದ್ಧಾರೂಢರ ದರ್ಶನ ಪಡೆದು, ಪಾದಯಾತ್ರೆ ಮೂಲಕವೇ 1799ಕಿಮೀ ವರೆಗೆ ಸಾಗಿ ಶ್ರೀರಾಮ ಮಂದಿರ ತಲುಪಿದ್ದಾನೆ. ಸಧ್ಯ ಅಯ್ಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ವೀಕಿಸಿದ ಅವರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಸುಂದರವಾದ ಭವ್ಯ ದೇವಾಲಯ ಎಷ್ಟು ನೋಡಿದರೂ ನೋಡಲೇ ಬೇಕು ಎನ್ನುವಂತಾಗಿದೆ.ಪ್ರತಿಯೊಂದು ವಿಷಯ, ವಸ್ತುಗಳನ್ನಿಲ್ಲಿ ಕುತೂಹಲದಿಂದ ವೀಕ್ಷಿಸವಂತಾಗಿದೆ. ಅಲ್ಲಿನ ಪ್ರತಿಯೊಂದು ಕಣಕಣದಲ್ಲಿ ಶ್ರೀರಾಮ ಪ್ರಭುವಿನ ಕುರುಹುಗಳು ಕಾಣಿಸುತ್ತಿವೆ. ಇದು ಶ್ರೀರಾಮಚಂದ್ರನ ಲೀಲೆ. ಒಟ್ಟಾರೆ 28 ದಿನಗಳ ಈ ಪಾದಯಾತ್ರೆ ಪಯಣ ಅಷ್ಟು ಸುಲಭ ಇಲ್ಲದಿದ್ದರೂ ಕೂಡ ಕರ್ನಾಟಕ ಜನತೆ ನೀಡಿದ ಸಹಕಾರ, ಪ್ರೀತಿಯಿಂದ ನನಗೆ ಅಲ್ಲಿಯ ವರೆಗೂ ನಡೆಯುವಂತೆ ಪ್ರೇರಣೆ ನೀಡಿತು. ಕೆಲವು ವೇಳೆ ಆರೋಗ್ಯದಲ್ಲಿ ಏರುಪೇರು ಆದರೂ ಕೂಡ ಮನಃವಾಸಿ ರಾಮನಲ್ಲಿ ನಂಬಿಕೆ ಇಟ್ಟು ನಡೆದು ಗುರಿ ತಲುಪಿದೆ ಎಂದು ಮನೋಜ್ ಕನ್ನಡಪ್ರಭಕ್ಕೆ ತಿಳಿಸಿದರು.
ನಾಳೆ ಬಿಡನಾಳದಲ್ಲಿ ಧಾರ್ಮಿಕ ಕಾರ್ಯಕ್ರಮವಿಶ್ವ ಹಿಂದು ಪರಿಷತ್ ಮಹಾನಗರ ಘಟಕದ ವತಿಯಿಂದ ಜ. 22 ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಮಹೋತ್ಸವ ನಿಮಿತ್ತ ತಾಲೂಕಿನ ಬಿಡನಾಳ ಗ್ರಾಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಜರಂಗದಳ ಮಹಾನಗರ ಸಂಯೋಜಕ ರಘು ಯಲ್ಲಕ್ಕನವರ ಹೇಳಿದರು.ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಅಂದು ಬೆಳಗ್ಗೆ ಗ್ರಾಮದಲ್ಲಿ ಮನೆಗಳನ್ನು ತಳಿರು-ತೋರಣಗಳಿಂದ ಸಿಂಗರಿಸಿ, ಬೆಳಗ್ಗೆ 9.30ಕ್ಕೆ ಹನುಮಂತ ದೇವರ ದೇವಸ್ಥಾನದಲ್ಲಿ ರಾಮ ಭಜನೆ, ರಾಮನಾಮ ಜಪ ಹಮ್ಮಿಕೊಳ್ಳಲಾಗಿದೆ. 11.30ಕ್ಕೆ ಎಲ್‌ಇಡಿ ಪರದೆಯ ಮೂಲಕ ಅಯೋಧ್ಯೆಯಲ್ಲಿ ನಡೆಯುವ ರಾಮ ಪ್ರಾಣ ಪ್ರತಿಷ್ಠಾನದ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿದೆ. 12.30ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ಸೇವೆ ನಡೆಯಲಿದೆ ಎಂದರು.ಸಂಜೆ 5ಗಂಟೆಗೆ ಗ್ರಾಮಸ್ಥರು ತಮ್ಮ ಮನೆಗಳನ್ನು ಶುಚಿಗೊಳಿಸಿ, ರಂಗೋಲಿಗಳಿಂದ ಸಿಂಗರಿಸಿ ದೀಪಗಳನ್ನು ಹಚ್ಚುವ ಮೂಲಕ ದೀಪೋತ್ಸವ ಆಚರಿಸುತ್ತಾರೆ. ಅದೇ ರೀತಿ ಹನುಮಂತ ದೇವಸ್ಥಾನದ ಮುಂಭಾಗದಲ್ಲಿ ದೀಪೋತ್ಸವ, ರಾಮ ಆರತಿ ಮತ್ತು ಹನುಮ ಆರತಿ, ಗಂಗಾರತಿ ನೆರವೇರಿಸಲಾಗುವುದು. ಸಂಜೆ 7ಗಂಟೆಗೆ 100ಕ್ಕೂ ಅಧಿಕ ಆಕಾಶಬುಟ್ಟಿ ಹಾರಿಬಿಡುವ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.ಈ ವೇಳೆ ಶರಣಯ್ಯ ಹಿರೇಮಠ, ಬಸಯ್ಯ ಹಿರೇಮಠ, ರೋಹಿತ ಅಡವಿ, ಶಂಕರಗೌಡ ಪಾಟೀಲ, ವಾಮನ್ ಚೋಪಡೆ ಸೇರಿದಂತೆ ಹಲವರಿದ್ದರು