ಕಿತ್ರೆಯಲ್ಲಿ ತೋಟಕ್ಕೆ ಉರುಳಿ ಬಿದ್ದ ಬೃಹತ್ ಬಂಡೆ

| Published : Sep 03 2024, 01:37 AM IST

ಸಾರಾಂಶ

ರಾತ್ರಿ ಹೊತ್ತಿನಲ್ಲಿ ಬಂಡೆ ಉರುಳಿ ಬಿದ್ದಿದ್ದರಿಂದ ಏನೂ ಆಗಿಲ್ಲ. ಹಗಲು ಹೊತ್ತಿನಲ್ಲಿ ರಸ್ತೆ ಮೇಲೆ ಜನರು ತಿರುಗಾಡುತ್ತಿದ್ದು, ಈ ಸಂದರ್ಭದಲ್ಲಿ ಬಂಡೆ ಎಲ್ಲಾದರೂ ಉರುಳಿ ಬಿದ್ದಿದ್ದರೆ ಅಪಾಯ ಉಂಟಾಗುವ ಸಾಧ್ಯತೆ ಇತ್ತು.

ಭಟ್ಕಳ: ತಾಲೂಕಿನ ಕಿತ್ರೆಯ ರಾಮಬಾಳದಲ್ಲಿ ಬೃಹತ್ ಗಾತ್ರದ ಬಂಡೆಯೊಂದು ಉರುಳಿ ತೋಟಕ್ಕೆ ಬಿದ್ದಿದ್ದು, ಅದೃಷ್ಟವಶಾತ್ ಯಾರಿಗೂ ಏನೂ ಅಪಾಯ ಸಂಭವಿಸಿಲ್ಲ.

ಕಿತ್ರೆಯ ರಾಮಬಾಳದಲ್ಲಿ ರಸ್ತೆ ಸನಿಹದ ಧರೆ ಮೇಲಿದ್ದ ಬಂಡೆ ಭಾರೀ ಮಳೆ ಗಾಳಿಗೆ ಉರುಳಿ ಬಂದು ತೋಟಕ್ಕೆ ಬಿದ್ದಿದೆ. ಬಂಡೆ ಬಿದ್ದು ಅಡಕೆ ಮರಕ್ಕೂ ಹಾನಿಯಾಗಿದೆ.

ರಾತ್ರಿ ಹೊತ್ತಿನಲ್ಲಿ ಬಂಡೆ ಉರಳಿ ಬಿದ್ದಿದ್ದರಿಂದ ಏನೂ ಆಗಿಲ್ಲ. ಹಗಲು ಹೊತ್ತಿನಲ್ಲಿ ರಸ್ತೆ ಮೇಲೆ ಜನರು ತಿರುಗಾಡುತ್ತಿದ್ದು, ಈ ಸಂದರ್ಭದಲ್ಲಿ ಬಂಡೆ ಎಲ್ಲಾದರೂ ಉರುಳಿ ಬಿದ್ದಿದ್ದರೆ ಅಪಾಯ ಉಂಟಾಗುವ ಸಾಧ್ಯತೆ ಇತ್ತು.

ಸುದ್ದಿ ತಿಳಿದ ಮಾರುಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗವೇಣಿ ಗೊಂಡ, ಉಪಾಧ್ಯಕ್ಷ ಎಂ.ಡಿ. ನಾಯ್ಕ, ಕಾರ್ಯದರ್ಶಿ ಲಿಂಗಪ್ಪ ನಾಯ್ಕ ಮತ್ತಿತರರು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬಂಡೆ ಬಿದ್ದು ತೋಟ ಹಾನಿಯಾದ ಬಗ್ಗೆ ಮತ್ತು ಬಂಡೆ ಒಡೆಯುವ ಬಗ್ಗೆ ಗ್ರಾಮ ಪಂಚಾಯಿಯಿಂದ ತಹಸೀಲ್ದಾರರಿಗೂ ವರದಿ ಸಲ್ಲಿಸಲಾಗಿದೆ. ಬೃಹತ್ ಗಾತ್ರದ ಬಂಡೆ ಸುಮಾರು 40 ಟನ್ ತೂಕವಿರಬಹುದು ಎಂದು ಅಂದಾಜಿಸಲಾಗಿದೆ. ತೆಂಗಿನ ಮರದ ಉರುಳಿ ಮನೆಗೆ ಹಾನಿ

ಯಲ್ಲಾಪುರ: ಪಟ್ಟಣದ ಗೋಪಾಲಕೃಷ್ಣ ಗಲ್ಲಿಯಲ್ಲಿ ಸೆ. ೨ರಂದು ಸಂಜೆ ೫ ಗಂಟೆಯ ಸುಮಾರಿಗೆ ಸುರಿದ ಭಾರೀ ಮಳೆಯಿಂದಾಗಿ ತೆಂಗಿನ ಮರವೊಂದು ಬುಡದಲ್ಲಿ ಕತ್ತರಿಸಿ ಮನೆಯ ಮೇಲೆ ಬಿದ್ದು, ಅಪಾರ ಹಾನಿಯಾಗಿದೆ.ಗೋಪಾಲಕೃಷ್ಣಗಲ್ಲಿ ನಿವಾಸಿ ಉಲ್ಲಾಸ ಬಾಂದೇಕರ ಅವರ ಮನೆಯ ಮೇಲೆ ಮರ ಬಿದ್ದಿದೆ. ಘಟನೆಯಲ್ಲಿ ಮನೆಯ ಒಂದು ಭಾಗದ ಸಂಪೂರ್ಣ ಹೆಂಚುಗಳು, ಪಕಾಶಿ ರೀಪು ಕಿತ್ತು ಬಿದ್ದಿವೆ. ಮನೆಯ ಬೆಲೆಬಾಳುವ ಸಾಮಗ್ರಿಗಳಿಗೂ ಹಾನಿಯಾಗಿದೆ. ಘಟನೆ ತಿಳಿದ ತಕ್ಷಣ ಪಪಂ ಸದಸ್ಯ ಆದಿತ್ಯ ಗುಡಿಗಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ಫೋಟೋ ಸೆ.೨ ವೈ.ಎಲ್.ಪಿ. ೦೬

ಯಲ್ಲಾಪುರದಲ್ಲಿ ತೆಂಗಿನ ಮರದ ಉರುಳಿ ಮನೆಗೆ ಹಾನಿಯಾಗಿರುವುದು.