ಸಾರಾಂಶ
ಯುವ ಕ್ರೀಡಾಪಟು ಸಂತೋಷ ಅಕಾಲಿಕವಾಗಿ ಸಾವನ್ನಪ್ಪಿರುವುದು ತುಂಬಾ ನೋವಿನ ಸಂಗತಿ. ಉತ್ತಮ ಪ್ರತಿಭೆ ಹೊಂದಿದ್ದ ಸಂತೋಷ್‌ನ ಪ್ರಾಮಾಣಿಕತೆ ಮೆಚ್ಚುವಂಥದು ಎಂದರು. ಇಂತಹ ಉತ್ತಮ ಆಟಗಾರ ಇಂದು ನಮ್ಮೊಂದಿಗೆ ಇಲ್ಲದಿರುವುದು ಊಹಿಸಿಕೊಳ್ಳಲು ಅಸಾಧ್ಯವಾಗಿದೆ. ಸಂತೋಷ್ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸಂತೋಷ್ ಅಕಾಲಿಕ ಮರಣದಿಂದ ಅವರ ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ನಿಟ್ಟಿನಲ್ಲಿ ಪ್ರತಿಷ್ಠಾನದ ವತಿಯಿಂದ ಧನಸಹಾಯ ಮಾಡಲಾಗುತ್ತಿದೆ ಎಂದರು.
ಸೊರಬ: ಅಪಘಾತದಲ್ಲಿ ಮೃತಪಟ್ಟ ತಾಲೂಕಿನ ಹುಲ್ತಿಕೊಪ್ಪ ಗ್ರಾಮದ ಯುವ ಕಬಡ್ಡಿ ಕ್ರೀಡಾಪಟು ಸಂತೋಷ ಕುಟುಂಬಕ್ಕೆ ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಪ್ರತಿಷ್ಠಾನ ವತಿಯಿಂದ ಸಾಂತ್ವನ ಹೇಳಿ, ₹15 ಸಾವಿರ ಧನಸಹಾಯ ವಿತರಿಸಲಾಯಿತು. ಈ ಸಂದರ್ಭ ಪ್ರತಿಷ್ಠಾನದ ಉಪಾಧ್ಯಕ್ಷ ರಾಜು ಹಿರಿಯಾವಲಿ ಮಾತನಾಡಿ, ಯುವ ಕ್ರೀಡಾಪಟು ಸಂತೋಷ ಅಕಾಲಿಕವಾಗಿ ಸಾವನ್ನಪ್ಪಿರುವುದು ತುಂಬಾ ನೋವಿನ ಸಂಗತಿ. ಉತ್ತಮ ಪ್ರತಿಭೆ ಹೊಂದಿದ್ದ ಸಂತೋಷ್‌ನ ಪ್ರಾಮಾಣಿಕತೆ ಮೆಚ್ಚುವಂಥದು ಎಂದರು.
ಇಂತಹ ಉತ್ತಮ ಆಟಗಾರ ಇಂದು ನಮ್ಮೊಂದಿಗೆ ಇಲ್ಲದಿರುವುದು ಊಹಿಸಿಕೊಳ್ಳಲು ಅಸಾಧ್ಯವಾಗಿದೆ. ಸಂತೋಷ್ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸಂತೋಷ್ ಅಕಾಲಿಕ ಮರಣದಿಂದ ಅವರ ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ನಿಟ್ಟಿನಲ್ಲಿ ಪ್ರತಿಷ್ಠಾನದ ವತಿಯಿಂದ ಧನಸಹಾಯ ಮಾಡಲಾಗುತ್ತಿದೆ ಎಂದರು.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಯು.ಎನ್. ಲಕ್ಷ್ಮೀಕಾಂತ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಪ್ರತಿಷ್ಠಾನ ಉತ್ತಮ ಕೆಲಸಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ. ಮೃತ ಸಂತೋಷ್ ಕುಟುಂಬದ ಬಿಬಿಎ ಪದವಿ ಪಡೆದ ಯುವತಿಗೆ ಪ್ರತಿಷ್ಠಾನದವರು ಉದ್ಯೋಗ ದೊರಕಿಸಿಕೊಟ್ಟು ಆ ಕುಟುಂಬಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.
ಪ್ರತಿಷ್ಠಾನದ ಕಾರ್ಯದರ್ಶಿ ಜಿ.ಯಶೋಧರ, ಸದಸ್ಯರಾದ ದಿನೇಶ ಹುಲ್ತಿಕೊಪ್ಪ, ಸಂತೋಷ ಕರಡಿಗೆರೆ, ಶಶಿ ರಾಯನ ಕೊಡಕಣಿ, ನಾಗರಾಜ ಕುಂದಗಸ್ವಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಮತ್ತಿತರರಿದ್ದರು.- - - -19ಕೆಪಿಸೊರಬ01:
ಸೊರಬ ತಾಲೂಕಿನ ಹುಲ್ತಿಕೊಪ್ಪದ ಕಬಡ್ಡಿ ಕ್ರೀಡಾಪಟು ಸಂತೋಷ್ ಕುಟುಂಬಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಪ್ರತಿಷ್ಠಾನದಿಂದ ಧನಸಹಾಯ ವಿತರಿಸಲಾಯಿತು.