ವಕೀಲರು ವೃತ್ತಿ ಪ್ರಾವಿಣ್ಯತೆ ಬೆಳಸಿಕೊಳ್ಳಬೇಕು

| Published : Dec 04 2024, 12:31 AM IST

ಸಾರಾಂಶ

ವಕೀಲರು ವೃತ್ತಿ ಪ್ರಾವಿಣ್ಯತೆ ಬೆಳೆಸಿಕೊಂಡರೆ ಗೌರವ ಅವರನ್ನು ಅರಸಿ ಬರುತ್ತದೆ, ಸಮಾಜದ ಯಾವುದೇ ತರದ ಸಮಸ್ಯೆಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗುವುದರಿಂದ ವಕೀಲರಿಗೆ ಹೆಚ್ಚಿನ ಜವಾಬ್ದಾರಿಗಳಿವೆ. ಸಮಾಜದ ಏಳಿಗೆಗಾಗಿ ಶ್ರಮಿಸುವವರಲ್ಲಿ ವಕೀಲರ ಪಾತ್ರ ದೊಡ್ಡದ್ದು, ಎಲ್ಲ ರೀತಿಯ ವಿಷಯಗಳನ್ನು ವಕೀಲ ವೃತ್ತಿಯಲ್ಲಿ ಮಾತ್ರ ತಿಳಿದುಕೊಳ್ಳುವುದಕ್ಕೆ ಸಾಧ್ಯ.

ಕನ್ನಡಪ್ರಭ ವಾರ್ತೆ ಕೆಜಿಎಫ್ನ್ಯಾಯಾಲಯ ಕಲಾಪ ಸುಸೂತ್ರವಾಗಿ ನಡೆಯಬೇಕಿದ್ದರೆ ಇಡೀ ನ್ಯಾಯಾಲಯ ಒಂದು ತಂಡವಾಗಿ ಕೆಲಸ ಮಾಡಬೇಕಿದೆ ಎಂದು ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ತಿಳಿಸಿದರು.ಕೆಜಿಎಫ್‌ನ ಜೆಎಂಎಫ್‌ಸಿ ನ್ಯಾಯಾಲಯದ ವಕೀಲರ ಭವನದಲ್ಲಿ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಕೀಲರು ವೃತ್ತಿ ಪ್ರಾವಿಣ್ಯತೆ ಬೆಳೆಸಿಕೊಂಡರೆ ಗೌರವ ಅವರನ್ನು ಅರಸಿ ಬರುತ್ತದೆ, ಸಮಾಜದ ಯಾವುದೇ ತರದ ಸಮಸ್ಯೆಗಳು ನ್ಯಾಯಾಲಯದಲ್ಲಿ ಇತ್ಯರ್ಥವಾಗುವುದರಿಂದ ವಕೀಲರಿಗೆ ಹೆಚ್ಚಿನ ಜವಾಬ್ದಾರಿಗಳಿವೆ ಎಂದರು.

ರಾಜೇಂದ್ರ ಪ್ರಸಾದ್‌ ಸ್ಮರಣೆ

ಹಿರಿಯ ನ್ಯಾಯಾಧೀಶರಾದ ಮುಜಫರ್ ಎ.ಮಾಂಜರಿ ಮಾತನಾಡಿ, ವಕೀಲರ ದಿನಾಚರಣೆಯನ್ನು ಡಾ.ರಾಜೇಂದ್ರ ಪ್ರಸಾದ್ ನೆನಪಿಗಾಗಿ ಆಚರಿಸಲಾಗುತ್ತಿದ್ದು, ಹೀಗೆ ದೇಶದಲ್ಲಿ ನಾನಾ ಮಹಾನ್ ಚೇತನಗಳ ಜನ್ಮದಿನ ಆಚರಿಸಲಾಗುತ್ತದೆ, ಇದು ಎಂದಿಗೂ ಮಾಸುವುದಿಲ್ಲ ಎಂದರುಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿನೋದ್‌ಕುಮಾರ್ ಮಾತನಾಡಿ, ಸಮಾಜದ ಏಳಿಗೆಗಾಗಿ ಶ್ರಮಿಸುವವರಲ್ಲಿ ವಕೀಲರ ಪಾತ್ರ ದೊಡ್ಡದ್ದು, ಎಲ್ಲ ರೀತಿಯ ವಿಷಯಗಳನ್ನು ವಕೀಲ ವೃತ್ತಿಯಲ್ಲಿ ಮಾತ್ರ ತಿಳಿದುಕೊಳ್ಳುವುದಕ್ಕೆ ಸಾಧ್ಯ ಎಂದರು.ಸಾಮಾಜಿಕ ಕಳಕಳಿ

ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ ಪ್ರಮುಖವಾಗಿದ್ದು, ಬಹಳಷ್ಟು ಮಂದಿ ಸಾಮಾಜಿಕ ಕಳಕಳಿ ಹೊಂದಿದ್ದರು, ಮಾಜಿ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ಅವರ ನೆನಪಿನಲ್ಲಿ ಆಚರಿಸುವ ವಕೀಲರ ದಿನಾಚರಣೆ ತನ್ನದೇಯಾದ ಮಹತ್ವ ಹೊಂದಿದೆ, ವಕೀಲರು ಸಮಾಜದ ಶಕ್ತಿಯಾಗಿದ್ದಾರೆ ಎಂದರು.ನ್ಯಾಯಾಧೀಶರಾದ ಮಂಜು ಎಂ. ಶಮಿದಾ ಮಾತನಾಡಿ, ವಕೀಲರಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಉತ್ಸುಕತನ ಇರಬೇಕು, ವಕೀಲರು ಸಂವಿಧಾನ ಕಾಯುವ ರಕ್ಷಕರು ಎಂದರು.ಹಿರಿಯ ವಕೀಲರಾದ ಪ್ರಕಾಶ್‌ಕುಮಾರ್, ವೆಂಕಟರಮಣಪ್ಪ, ಕಲೈಸೆಲ್ವಿ, ನೂರ್‌ಜಾನ್, ಜ್ಯೋತಿಬಸ್ಸು, ಶಿವಪ್ಪ, ವಕೀಲರ ಸಂಘದ ಉಪಾಧ್ಯಕ್ಷ ಮಣಿವಣ್ಣನ್, ಕಾರ್‍ಯದರ್ಶಿ ಕೆ.ಸಿ.ನಾಗರಾಜ್, ಮನೋಹರ್, ವಕೀಲರಾದ ದಿನೇಶ್ ಇದ್ದರು.