ಮೂಢ ನಂಬಿಕೆ ಬಗ್ಗೆ ಜಾಗೃತಿ ಮೂಡಿಸಿದ ನಾಯಕ

| Published : Feb 21 2025, 12:46 AM IST

ಸಾರಾಂಶ

ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಮೂಢ ನಂಬಿಕೆ ಮತ್ತು ಗೊಡ್ಡು ಸಂಪ್ರದಾಯಗಳ ಬಗ್ಗೆ ಜಾಗೃತಿ ಮೂಡಿಸಲು ತ್ರಿಪದಿಕವಿ ಸರ್ವಜ್ಞ ತನ್ನ ವಚನಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ಸರ್ವಜ್ಞರ ವಚನಗಳಲ್ಲಿ ಸಂಪ್ರದಾಯ ಬದುಕಿನ ನೈಜ ಚಿತ್ರಣವನ್ನು ಕಾಣಬಹುದು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಮೂಢ ನಂಬಿಕೆ ಮತ್ತು ಗೊಡ್ಡು ಸಂಪ್ರದಾಯಗಳ ಬಗ್ಗೆ ಜಾಗೃತಿ ಮೂಡಿಸಲು ತ್ರಿಪದಿಕವಿ ಸರ್ವಜ್ಞ ತನ್ನ ವಚನಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ಸರ್ವಜ್ಞರ ವಚನಗಳಲ್ಲಿ ಸಂಪ್ರದಾಯ ಬದುಕಿನ ನೈಜ ಚಿತ್ರಣವನ್ನು ಕಾಣಬಹುದು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಂಬಾರ ಸಮುದಾಯದ ಕಳೆದ ಹಲವಾರು ದಶಕಗಳಿಂದ ತನ್ನದೇ ಆದ ಉತ್ತಮ ಬದುಕು ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮಣ್ಣಿನ ಮಡಿಕೆ, ಕುಡಿಕೆಗಳನ್ನು ತಯಾರಿಸಿ ಅದನ್ನು ಜನರಿಗೆ ವಿತರಿಸುವ ಮೂಲಕ ತನ್ನ ವೃತ್ತಿಯ ಘನತೆಯನ್ನು ಕಾಪಾಡಿಕೊಂಡಿದೆ. ಕುಂಬಾರ ಸಮುದಾಯದ ಬಗ್ಗೆ ಎಲ್ಲರಲ್ಲೂ ಹೆಚ್ಚು ವಿಶ್ವಾಸವಿದೆ ಎಂದರು.

ತಹಸೀಲ್ದಾರ್ ರೇಹಾನ್‌ಪಾಷ ಮಾತನಾಡಿ, ತ್ರಿಪದಿಕವಿ ಸರ್ವಜ್ಞ ಸಮಾಜದಲ್ಲಿ ಜಾಗೃತಿ ಮೂಡಿಸಲು ತನ್ನ ವಚನಗಳ ಮೂಲಕವೇ ಜನರಲ್ಲಿನ ಲೋಪದೋಷಗಳ ಬಗ್ಗೆ ಸ್ವಷ್ಟ ಚಿತ್ರಣ ನೀಡಿದ್ಧಾರೆ. ಸರ್ವಜ್ಞರ ವಚನಗಳಲ್ಲಿ ಮೌಲ್ಯಯುತ ಬದುಕಿನ ಚಿತ್ರಣವಿದೆ ಎಂದರು.

ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಮ, ಸದಸ್ಯರಾದ ಕವಿತಾಬೋರಯ್ಯ, ರಮೇಶ್‌ಗೌಡ, ಕೆಡಿಪಿ ಸದಸ್ಯ ಸುರೇಶ್‌ಕುಮಾರ್, ಅಂಗಡಿರಮೇಶ್, ತಾಲ್ಲೂಕು ಕುಂಬಾರ ಸಂಘದ ಗೌರವಾಧ್ಯಕ್ಷ ತಿಪ್ಪೇಸ್ವಾಮಿ, ಕುಂಬಾರ ಸಂಘದ ಅಧ್ಯಕ್ಷ ಮುಸ್ಟೂರಪ್ಪ, ಗೋವಿಂದರಾಜು, ರಾಜಶೇಖರಪ್ಪ, ತಿಪ್ಪೇರುದ್ರಪ್ಪ, ಕೆ.ಟಿ.ಶ್ರೀನಿವಾಸ್‌ಮೂರ್ತಿ, ಎಚ್.ತಿಪ್ಪೇಸ್ವಾಮಿ, ಮಂಜುನಾಥ, ಕೆ.ಜಿ.ಸಣ್ಣಪ್ಪ ಉಪಸ್ಥಿತರಿದ್ದರು.