ಸರ್ಕಾರದ ಹಲವಾರು ಯೋಜನೆಗಳಿಂದ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಲಾಗಿದೆ. ಮಕ್ಕಳ ಕಲಿಕೆಗೆ ಹೊಸ ಬಗೆಯ ಉತ್ಸಾಹ ತುಂಬಲು ಕಲಿಕಾ ಹಬ್ಬ ನೆರವಾಗಲಿದೆ ಎಂದು ತಡಸ ಕೇಂದ್ರ ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ ಗಂಗಾಧರ ಹಸಬಿ ಹೇಳಿದರು.

ಶಿಗ್ಗಾಂವಿ: ಸರ್ಕಾರದ ಹಲವಾರು ಯೋಜನೆಗಳಿಂದ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಲಾಗಿದೆ. ಮಕ್ಕಳ ಕಲಿಕೆಗೆ ಹೊಸ ಬಗೆಯ ಉತ್ಸಾಹ ತುಂಬಲು ಕಲಿಕಾ ಹಬ್ಬ ನೆರವಾಗಲಿದೆ ಎಂದು ತಡಸ ಕೇಂದ್ರ ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ ಗಂಗಾಧರ ಹಸಬಿ ಹೇಳಿದರು.ತಾಲೂಕಿನ ಕುನ್ನೂರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾವೇರಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಮೂಹ ಸಂಪನ್ಮೂಲ ಕೇಂದ್ರ ತಡಸ ಕ್ಲಸ್ಟರ್ ಮಟ್ಟದಲ್ಲಿ ಆಯೋಜಿಸಲಾದ ಕಲಿಕಾ ಹಬ್ಬದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ವಿವಿಧ ರೀತಿಯ ಶೈಕ್ಷಣಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಕ್ಲಸ್ಟರ್ ಮಟ್ಟದ ಪ್ರಶಸ್ತಿ ನೀಡಿ ಭವಿಷ್ಯದಲ್ಲಿ ಸಾಧಕರಾಗಿ ಹೊರ ಹೊಮ್ಮಲು ಉತ್ಸಾಹ ತುಂಬಲಾಗುವುದು ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಬಿ.ವೈ. ಉಪ್ಪಾರ ಮಾತನಾಡಿ, ಕಲಿಕಾ ಹಬ್ಬ ಇದೊಂದು ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮ ವಿಶೇಷವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರಿ ಆಗುವ ರೀತಿಯಲ್ಲಿ ಏನಾದರೂ ಸಹಾಯ ಸಹಕಾರ ಬೇಕಾದರೆ ನಮ್ಮ ಸಂಘದಿಂದ ಮಾಡಲು ನಾವು ಸದಾ ಸಿದ್ಧ ಎಂದರು.ಗ್ರಾಮ ಪಂಚಾಯತ್ ಸದಸ್ಯರಾದ ಬಸನಗೌಡ ಬ್ಯಾಹಟ್ಟಿ, ಗಂಗಾಮತ ಸಮಾಜದ ಅಧ್ಯಕ್ಷ ನಾಗರಾಜ ನಡಗೇರಿ ಮಾತನಾಡಿದರು. ವೇದ ಮೂರ್ತಿ ಶ್ರೀ ಸೋಮಯ್ಯ ಹಿರೇಮಠ ಅವರು ಸಾನಿಧ್ಯ ವಹಿಸಿದ್ದರು.ಕುನ್ನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮೌಲಾಲಿ ನಾಗನೂರ ಕಾರ್ಯಕ್ರಮ ನಿರೂಪಿಸಿದರು. ಸರಕಾರಿ ಕಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾದ ಮಮತಾಜಬೇಗಂ ಒಂಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ಸೃಷ್ಟಿ ಗೊರವರ ತಂಡ ಪ್ರಾರ್ಥಿಸಿದರು. ಶಿಕ್ಷಕಿ ನಾಗರತ್ನಾ ರೆಡ್ಡೇರ ವಂದಿಸಿದರು.ಸರಕಾರಿ ಕಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ಅಧ್ಯಕ್ಷ ಮೌನೇಶ ಕಮ್ಮಾರ, ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಅಧ್ಯಕ್ಷ ಪಕ್ಕೀರಾಗೌಡ ಜೇಕಿನಕಟ್ಟಿ, ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಕಾಂತವ್ವ ಮೊರಬದ, ಸದಸ್ಯರಾದ ಮೈಲಾರಪ್ಪ ಇಂದೂರ, ಹಸೀನಾಬಿ ಬಂಕಾಪುರ, ಮರೆವ್ವ ಬಸರಿಕಟ್ಟಿ, ಕಾರ್ಯದರ್ಶಿ ಮುಸ್ತಾಕ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಬಸವರಾಜ ಬೂದಿಹಾಳ, ಅಜಿತ್ ಕೋಳೂರ,ಹಿರಿಯರಾದ ರಾಯಪ್ಪ ಸಾವಂತಣ್ಣವರ, ಸಂತೋಷ ಮೂಳೆ, ರಬ್ಬಾನಿ ಕುರಟ್ಟಿ, ಮುಖ್ಯ ಶಿಕ್ಷಕಿ ಬದ್ಮಾವತಿ ಸಾಬೋಜಿ, ಮುಖ್ಯ ಶಿಕ್ಷಕ ಮಂಜುನಾಥ ಕಮ್ಮಾರ, ಮುಖ್ಯಶಿಕ್ಷಕ ಸಂತೋಷಕುಮಾರ್, ಮುಖ್ಯ ಶಿಕ್ಷಕ ಪಿ ಐ.ನದಾಫ, ತಡಸ ಮುಖ್ಯ ಶಿಕ್ಷಕಿ ಮಂಜುಳಾ ಹಳ್ಳಿ, ಶಿಕ್ಷಕರಾದ ಅಕ್ಕಮ್ಮಾ ಚವ್ಹಾಣ, ಮಮದಾಪುರ ಸರಕಾರಿ ಶಾಲೆ ಮುಖ್ಯ ಶಿಕ್ಷಕ ಗಣೇಶ ಪೂಜಾರ ಸೇರಿದಂತೆ ಎಲ್ಲಾ ಶಾಲೆಯ ಶಿಕ್ಷಕ ವೃಂದ, ಶಿಕ್ಷಣ ಪ್ರೇಮಿಗಳು ಪಾಲ್ಗೊಂಡಿದ್ದರು.