ಬಾಳೆಹೊನ್ನೂರುವಿದ್ಯಾರ್ಥಿಗಳ ಮೆದುಳಿಗೆ ಜ್ಞಾನ ತುಂಬವ ವಿಶಿಷ್ಟ ಕಲಿಕಾ ಪದ್ಧತಿಯೇ ಶಿಕ್ಷಣ ಇಲಾಖೆಯ ಕಲಿಕಾ ಹಬ್ಬವಾಗಿದೆ ಎಂದು ಎನ್.ಆರ್.ಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್ ಹೇಳಿದರು.
ಸರ್ಕಾರಿ ಸುವರ್ಣ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬಾಳೆಹೊನ್ನೂರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುವಿದ್ಯಾರ್ಥಿಗಳ ಮೆದುಳಿಗೆ ಜ್ಞಾನ ತುಂಬವ ವಿಶಿಷ್ಟ ಕಲಿಕಾ ಪದ್ಧತಿಯೇ ಶಿಕ್ಷಣ ಇಲಾಖೆಯ ಕಲಿಕಾ ಹಬ್ಬವಾಗಿದೆ ಎಂದು ಎನ್.ಆರ್.ಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್ ಹೇಳಿದರು. ಪಟ್ಟಣದ ಸರ್ಕಾರಿ ಸುವರ್ಣ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಬಾಳೆಹೊನ್ನೂರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ನಾವಿನ್ಯತೆಯಿಂದ ಯೋಚನೆ ಮಾಡಿ ಉನ್ನತ ಹಂತದಲ್ಲಿ ತಮ್ಮ ಸಾಮರ್ಥ್ಯ ಭದ್ರಗೊಳಿಸುವುದೇ ಕಲಿಕಾ ಹಬ್ಬದ ಉದ್ದೇಶ. ಕಲಿಕಾ ಹಬ್ಬದಲ್ಲಿ ಸುಮಾರು 17 ವಿಷಯಗಳನ್ನು ಒಳಗೊಂಡಿದ್ದು, ಇವುಗಳನ್ನು ಶಾಲೆಗಳಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಕಲಿಕಾ ಹಬ್ಬದ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಅವರನ್ನು ಉತ್ತೇಜಿಸಲಾಗುತ್ತದೆ.
ವಿದ್ಯಾರ್ಥಿಗಳು ಕಲಿಕಾ ಹಬ್ಬದಲ್ಲಿ ಭಾಗವಹಿಸುವುದೇ ಮುಖ್ಯ. ಇಲ್ಲಿ ಸೋಲು ಗೆಲುವು ಮುಖ್ಯವಲ್ಲ. ಗೆಲ್ಲುವ ಛಲ ಹೊಂದಬೇಕು ಎಂಬುದನ್ನು ಇಲ್ಲಿ ಕಲಿಸಲಾಗುತ್ತದೆ. ಸರ್ಕಾರಿ ಶಾಲೆಗಳು ಉತ್ತಮವಾಗಿ ಸದೃಢವಾಗಿ ಬೆಳೆಯಬೇಕಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ ಮಕ್ಕಳಿಗಾಗಿ ಮಾತ್ರ ಕಲಿಕಾ ಹಬ್ಬವನ್ನು ಶಿಕ್ಷಣ ಇಲಾಖೆ ಆಯೋಜಿಸುತ್ತಿದೆ ಎಂದರು. ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಮಾತನಾಡಿ, ಹಿಂದಿನ ಕಾಲದಲ್ಲಿ ನಾವುಗಳು ಧಾರ್ಮಿಕ ಸಂಪ್ರದಾಯಗಳ ಹಬ್ಬಗಳನ್ನು ಮಾತ್ರ ಕಾಣುತ್ತಿದ್ದೆವು. ಆದರೆ ಇಂದು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ಕಲಿಕಾ ಹಬ್ಬವನ್ನು ಆಯೋಜಿಸಿರುವುದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾಗಿದೆ. ಸತತ ಪ್ರಯತ್ನದಿಂದ ಮಾತ್ರ ನಾವು ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯವಿದ್ದು, ವಿದ್ಯಾರ್ಥಿಗಳು ಪ್ರಯತ್ನದ ಮೂಲಕ ಸಾಧನೆ ಮಾಡಬೇಕಿದೆ ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಸೇವ್ಯಾನಾಯ್ಕ್ ಮಾತನಾಡಿ, ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುವುದೇ ಕಲಿಕಾ ಹಬ್ಬದ ಉದ್ದೇಶವಾಗಿದ್ದು, ಕಳೆದ 2 ವರ್ಷಗಳಿಂದ ಇದನ್ನು ಆಚರಿಸಲಾಗುತ್ತಿದೆ. ಗೋಡೆ ಮದ್ಯದಲ್ಲಿ ಶಿಕ್ಷಕರೊಂದಿಗೆ ಬೆರೆಯುವ ವಿದ್ಯಾರ್ಥಿಗಳು ಈ ಹಬ್ಬದ ಮೂಲಕ ವೇದಿಕೆ ಮೇಲೆ ಶಿಕ್ಷಕರು, ಪೋಷಕರ ನಡುವೆ ಕಲಿಕೆಯನ್ನು ಹೊರಹೊಮ್ಮಿಸುವುದೇ ಈ ಕಾರ್ಯಕ್ರಮವಾಗಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್, ಮುಖ್ಯಶಿಕ್ಷಕ ಸೋಮಶೇಖರ್, ಗ್ರಾಪಂ ಸದಸ್ಯರಾದ ಇಬ್ರಾಹಿಂ ಶಾಫಿ, ಸರಿತಾ, ಸಿಆರ್‌ಪಿ ರಾಮನಾಯ್ಕ, ಬಿಆರ್‌ಪಿ ಸಂದೀಪ್, ತಿಮ್ಮೇಶ್, ಕಟ್ಟೇಗೌಡ, ರಮೇಶ್, ದೇವರಾಜ್, ದೀಪಾ ಮತ್ತಿತರರು ಹಾಜರಿದ್ದರು.೧೨ಬಿಹೆಚ್‌ಆರ್ ೧:ಬಾಳೆಹೊನ್ನೂರಿನ ಸರ್ಕಾರಿ ಸುವರ್ಣ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಬಾಳೆಹೊನ್ನೂರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಬಿಇಓ ಶಬನಾ ಅಂಜುಮ್ ಉದ್ಘಾಟಿಸಿದರು. ರವಿಚಂದ್ರ, ಸೇವ್ಯಾನಾಯ್ಕ್, ಪ್ರಕಾಶ್, ಸೋಮಶೇಖರ್, ಇಬ್ರಾಹಿಂ ಶಾಫಿ, ಸರಿತಾ ಇದ್ದರು.