ಕಡೂರು: ತಾಲೂಕಿನ ಎಮ್ಮೇದೊಡ್ಡಿ ಹಾಗೂ ಸುತ್ತಮುತ್ತ ದನಕರುಗಳನ್ನು ಭೇಟಿಯಾಡುತ್ತಾ ಜನರಿಗೆ ದುಃಸ್ವಪ್ನವಾಗಿದ್ದ ಚಿರತೆ ಭಾನುವಾರ ಸೆರೆ ಸಿಕ್ಕಿದೆ.

ಕಡೂರು: ತಾಲೂಕಿನ ಎಮ್ಮೇದೊಡ್ಡಿ ಹಾಗೂ ಸುತ್ತಮುತ್ತ ದನಕರುಗಳನ್ನು ಭೇಟಿಯಾಡುತ್ತಾ ಜನರಿಗೆ ದುಃಸ್ವಪ್ನವಾಗಿದ್ದ ಚಿರತೆ ಭಾನುವಾರ ಸೆರೆ ಸಿಕ್ಕಿದೆ.

ಎಮ್ಮೇದೊಡ್ಡಿಯ ರಂಗೇನಹಳ್ಳಿಯ ಹನುಮಂತಪ್ಪ ಎಂಬುವವರ ಜಮೀನಿನ ಬಳಿ ಇಡಲಾಗಿದ್ದ ಬೋನಿನಲ್ಲಿ ಚಿರತೆ ಸಿಕ್ಕಿ ಬಿದ್ದಿದೆ.ಅನೇಕ ದಿನಗಳಿಂದ ಎಮ್ಮೇದೊಡ್ಡಿಯ ರಂಗೇನಹಳ್ಳಿ, ಸಗುನೀಪುರ,.ಚನ್ನಾಪುರ ಹಾಗು ಸುತ್ತಮುತ್ತ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ದನಕರುಗಳು, ಕುರಿಗಳು ತಿನ್ನುತ್ತಾ ಜನರ ಮೇಲೂ ಚಿರತೆ ದಾಳಿ ಮಾಡುವ ಜೊತೆ ಜನ ಭಯದಿಂದ ಸಂಚರಿಸುವಂತೆ ಮಾಡಿತ್ತು. ಈ ಬಗ್ಗೆ ಎಮ್ಮೇದೊಡ್ಡಿ, ಸರಸ್ವತಿಪುರ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ರೈತರು ಹಾಗು ಸಾರ್ವಜನಿಕರು ಅರಣ್ಯ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದ್ದರು. ಎಸಿಎಫ್ ಮೋಹನ್ ಸ್ಳಳಕ್ಕೆ ಆಗಮಿಸಿ ಚಿರತೆ ಹಿಡಿಯಲು ಕ್ರಮ ವಹಿಸುವ ಭರವಸೆ ನೀಡಿದ್ದರು. ಅದರಂತೆ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ರಂಗೇನಹಳ್ಳಿಯ ಹನುಮಂತಪ್ಪ ಎಂಬುವರ ಜಮೀನಿನ ಸಮೀಪ ಬೋನು ಇಡಲಾಗಿತ್ತು. ಭಾನುವಾರ ಚಿರತೆ ಬೋನಿನಲ್ಲಿ ಬಂಧಿ ಆಗಿದೆ. ಇದರಿಂದ ಸುತ್ತಲಿನ ರೈತರು ನಿಟ್ಟುಸಿರು ಬಿಡುವಂತಾಗಿದೆ.

ಸ್ಥಳಕ್ಕೆ ಕಡೂರು ವಲಯ ಅರಣ್ಯಾಧಿಕಾರಿ ಹರೀಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಚಿಕ್ಕಮಗಳೂರಿನ ಅರಣ್ಯಕ್ಕೆ ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

29ಕೆಕೆಡಿಯು 4. ಬೋನಿನಲ್ಲಿ ಸೆರೆ ಸಿಕ್ಕಿರುವ ಚಿರತೆ.