ಸಾರಾಂಶ
ತೆರೆದ ಬಾವಿಗೆ ಬಿದ್ದು ಚಿರತೆ ಸಾವು
ತುರುವೇಕೆರೆ: ತೆರೆದ ಬಾವಿಗೆ ಚಿರತೆಯೊಂದು ಬಿದ್ದು ಮೃತಪಟ್ಟಿರುವ ಘಟನೆ ಸಮೀಪದ ಪುಟ್ಟಮಾದಿಹಳ್ಳಿ ಬಳಿ ನಡೆದಿದೆ.
ತಾಳಕೆರೆ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷ ಪುಟ್ಟಮಾದಿಹಳ್ಳಿಯ ವಿನೋದ್ ಎಂಬುವವರಿಗೆ ಸೇರಿದ ಕೋಳಿ ಫಾರಂ ಬಳಿ ಇರುವ ಕೆಂಪಮ್ಮ ಎಂಬುವವರಿಗೆ ಸೇರಿದ ತೆರೆದ ಬಾವಿಗೆ ಆಹಾರ ಅರಸಿ ಬಂದಿರುವ ಸುಮಾರು ಒಂದು ವರ್ಷದ ಚಿರತೆ ಕಳೆದ 2-3 ದಿನಗಳ ಹಿಂದೆಯೇ ಬಿದ್ದಿದ್ದು ಮೇಲೇರೆಲು ಸಾಧ್ಯವಾಗದೇ ಮೃತಪಟ್ಟಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ತೋಟದ ಮಾಲೀಕರು ತೋಟಕ್ಕೆ ಬಂದು ಬಾವಿಯನ್ನು ನೋಡಿದ ವೇಳೆ ಚಿರತೆ ಮೃತಪಟ್ಟಿರುವ ಕಂಡುಬಂದಿದೆ. ಚಿರತೆಯ ಕಳೇಬರ ಕೊಳೆತು ವಾಸನೆ ಬರುತ್ತಿತ್ತು ಎನ್ನಲಾಗಿದ್ದು, ಸ್ಥಳಕ್ಕೆ ಬಂದ ಅರಣ್ಯ ವಲಯಾಧಿಕಾರಿಗಳಾದ ಸಿ.ಆರ್.ಅರುಣ್, ಉಪ ವಲಯಾಧಿಕಾರಿಗಳಾದ ಟಿ.ಬಿ.ಮಂಜುನಾಥ್, ಗಸ್ತು ಅರಣ್ಯಪಾಲಕರಾದ ರೂಪೇಶ್ ಮತ್ತು ಸಿಬ್ಬಂದಿ ಬುಧವಾರ ಚಿರತೆ ಮೃತದೇಹವನ್ನು ಬಾವಿಯಿಂದ ಮೇಲಕ್ಕೆ ಎತ್ತಿ ಪಶುವೈದ್ಯರ ಸಹಾಯದಿಂದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ವನ್ಯಜೀವಿ ಕಾಯ್ದೆಯನ್ವಯ ಪ್ರಕರಣದ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.