ಬೋನ್‌ಗೆ ಬಿದ್ದ ಚಿರತೆ

| Published : Feb 05 2024, 01:53 AM IST

ಸಾರಾಂಶ

ಬೋನಿಗೆ ಬಿದ್ದ ಚಿರತೆ

ಕನ್ನಡಪ್ರಭ ವಾರ್ತೆ, ಬೀರೂರು

ಸಮೀಪದ ಅಮೃತ್ ಮಹಲ್ ಕಾವಲಿನ ಶ್ರೀ ಕಾವಲು ಚೌಡೇಶ್ವರಿ ದೇವಸ್ಥಾನದ ಬಳಿ ಎರಡು ವರ್ಷ ಪ್ರಾಯದ ಚಿರತೆ ಬೋನ್‌ನಲ್ಲಿ ಭಾನುವಾರ ಸೆರೆಯಾಗಿದೆ.

ಅಮೃತ್ ಮಹಲ್ ಕಾವಲಿನ ಸುತ್ತಮುತ್ತ ಚಿರತೆ ಸಂಚರಿಸುತ್ತಿರುವುದಾಗಿ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸಂಚಾರದ ಜಾಡು ಹಿಡಿದು 15 ದಿನಗಳ ಹಿಂದೆ ಬೋನ್ ಇರಿಸಿದ್ದರು.

ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಕೆ.ಎಸ್.ಮೋಹನ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಬಿ.ಸಿ.ಲೋಕೇಶ್ ಮತ್ತು ಉಪ ವಲಯ ಅರಣ್ಯಾಧಿಕಾರಿ ವಿ.ರವಿಕುಮಾರ್ ತಂಡ ಬೀರೂರಿನ ಅಮೃತ್ ಮಹಲ್ ಕಾವಲಿನ ದೇವಾಲಯದ ಸಮೀಪದಲ್ಲಿ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಿಕೊಂಡಿದ್ದರು. ಶನಿವಾರ ತಡರಾತ್ರಿ ಬೋನಿನಲ್ಲಿದ್ದ ನಾಯಿಯನ್ನು ಹಿಡಿಯಲು ಹೋದ ಚಿರತೆ ಸೆರೆಯಾಗಿದೆ.

ಚಿರತೆ ಬೋನ್‌ಗೆ ಬಿದ್ದ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಆಗಮಿಸಿ ಚಿರತೆಯನ್ನು ಸ್ಥಳಾಂತರಿಸಿದ ನಂತರ. ಚಿರತೆಯನ್ನು ಮುತ್ತೋಡಿ ಅಭಯಾರಣ್ಯದಲ್ಲಿ ಬಿಡುವುದಾಗಿ ಅಧಿಕಾರಿಗಳು ತಿಳಿಸಿದರು.

4ಬೀರೂರು1.ಬೋನಿನಲ್ಲಿ ಸೆರೆಯಾದ ಚಿರತೆ.