ಸಾರಾಂಶ
ಸಿಂದಗಿ: ಗ್ರಂಥಾಲಯವು ಮಹಾವಿದ್ಯಾಲಯದ ಹೃದಯ ಇದ್ದಂತೆ. ಗ್ರಂಥಾಲಯದಲ್ಲಿನ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿಗಳು ಜ್ಞಾನವನ್ನು ವೃದ್ಧಿ ಮಾಡಿಕೊಳ್ಳಬೇಕು ಎಂದು ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.
ಕನ್ನಡಪ್ರಭ ವಾರ್ತೆ ಸಿಂದಗಿ
ಗ್ರಂಥಾಲಯವು ಮಹಾವಿದ್ಯಾಲಯದ ಹೃದಯ ಇದ್ದಂತೆ. ಗ್ರಂಥಾಲಯದಲ್ಲಿನ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿಗಳು ಜ್ಞಾನವನ್ನು ವೃದ್ಧಿ ಮಾಡಿಕೊಳ್ಳಬೇಕು ಎಂದು ತಹಸೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಜಿ.ಪಿ.ಪೋರವಾಲ ಪದವಿ ಕಾಲೇಜಿನಲ್ಲಿನ ನೂತನ ಗ್ರಂಥಾಲಯವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಮಹಾವಿದ್ಯಾಲಯದ ಗ್ರಂಥಾಲಯವು ಓದುಗರನ್ನು ಪ್ರೇರಣೆ ನೀಡುವಂತೆ ಇದ್ದು, ದಿನ ಪತ್ರಿಕೆ, ಮಾಸ ಪತ್ರಿಕೆ, ನಿಯತಕಾಲಿಕೆಗಳು, ಕಂಪ್ಯೂಟರ್‌ಗಳಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಡಿ.ಎಂ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಮಹಾವಿದ್ಯಾಲಯದ ಗ್ರಂಥಪಾಲಕಿ ಡಾ.ಶ್ರೀದೇವಿ ಸಿಂದಗಿ, ಐಕ್ಯುಎಸಿ ಸಂಯೋಜಕ ಲೆಫ್ಟಿನೆಂಟ್ ಡಾ.ರವಿ ಲಮಾಣಿ, ಪ್ರೊ.ಎಸ್.ಎಸ್.ಮುತ್ತಿನಪೆಂಡಿಮಠ, ದೈಹಿಕ ನಿರ್ದೇಶಕ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೋಶಾಧ್ಯಕ್ಷ ಪ್ರೊ. ರವಿ ಗೋಲಾ, ಜಿಲ್ಲಾಷೆನ್.ಎನ್.ಎಸ್.ಎಸ್ ನೋಡಲ್ ಅಧಿಕಾರಿ ಡಾ. ಪ್ರಕಾಶ್ ರಾಠೋಡ ಹಾಗೂ ಪ್ರಸಕ್ತ ಸಾಲಿನ ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಪ್ರೊ. ಬಸವರಾಜ ಮಹಾಜನಶೆಟ್ಟಿ, ಪ್ರೋ ಬಿ. ಆರ್. ಅರಳಗುಂಡಗಿ, ಮಹಾವಿದ್ಯಾಲಯದ ಕಾಮಗಾರಿ ಅಭಿಯಂತರ ಸಚಿನ್ ಕೊಪ್ಪಾ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಕು. ಸಚಿನ್ ಕುಳಕುಮಟಗಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.