ಸಾರಾಂಶ
ಯಲ್ಲಾಪುರ: ಪಟ್ಟಣದ ಹಿಂದೂ ರುದ್ರಭೂಮಿಯ ಎದುರಿನ ದೋಸೆ ಅಂಗಡಿಗೆ ಮಂಗಳವಾರ ಬೆಳಗ್ಗೆ ಲಾರಿಯೊಂದು ನುಗ್ಗಿದ್ದು, ಅಂಗಡಿ ಜಖಂಗೊಂಡಿದೆ. ಅಂಗಡಿಯೊಳಗೆ ದೋಸೆ ಸಿದ್ಧಪಡಿಸುತ್ತಿದ್ದ ಮಹಿಳೆಯರು ಅಪಾಯದಿಂದ ಪಾರಾಗಿದ್ದಾರೆ.ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆಗೆ ಈರುಳ್ಳಿ ತುಂಬಿಕೊಂಡು ಹೋಗುತ್ತಿದ್ದ ಲಾರಿಯ ಚಾಲಕ ವಾಹನ ನಿಲ್ಲಿಸಿ, ತಿಂಡಿ ತಿನ್ನಲು ಹೋಗಿದ್ದ. ಇಳಿಜಾರಿನಲ್ಲಿ ನಿಲ್ಲಿಸಿದ್ದ ಲಾರಿ ಏಕಾಏಕಿ ಮುಂದಕ್ಕೆ ಚಲಿಸಿ, ಅಂಗಡಿಯೊಳಗೆ ನುಗ್ಗಿದೆ. ದೋಸೆ ಸಿದ್ಧಪಡಿಸುತ್ತಿದ್ದ ಮಹಿಳೆಯರು ಅದೃಷ್ಟವಶಾತ್ ಪಾರಾಗಿದ್ದಾರೆ.ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಅಂಗಡಿಯಲ್ಲಿದ್ದ ಸಿಲಿಂಡರ್ ಜಖಂಗೊಂಡು ಗ್ಯಾಸ್ ಸೋರಿಕೆಯಾಗಿ ಕೆಲಕಾಲ ಆತಂಕದ ಸ್ಥಿತಿ ಉಂಟಾಗಿತ್ತು. ಕೂಡಲೇ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸಿಲಿಂಡರ್ ಹೊರತಂದು ಸೋರಿಕೆ ನಿಯಂತ್ರಿಸಿದರು. ಪೊಲೀಸರು ಲಾರಿ ತೆರವುಗೊಳಿಸಿ ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು.ಅಕ್ರಮ ಮರಳು ಸಾಗಾಟ: ಎರಡೂ ಲಾರಿ ವಶ
ಹಳಿಯಾಳ: ಹೊನ್ನಾವರದಿಂದ ಅಕ್ರಮವಾಗಿ ಸೂಕ್ತ ದಾಖಲೆಗಳಿಲ್ಲದೇ ಹಳಿಯಾಳಕ್ಕೆ ಮರಳು ಸಾಗಾಟ ಮಾಡುತ್ತಿದ್ದ ಎರಡೂ ಲಾರಿಗಳನ್ನು ಜಪ್ತಿ ಮಾಡಿ ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ಅವರು ₹1.80 ಲಕ್ಷ ದಂಡವನ್ನು ವಿಧಿಸಿದ್ದಾರೆ.ಜ. 26ರಂದು ಹೊನ್ನಾವರದಿಂದ ಅಕ್ರಮವಾಗಿ ಮರಳು ತುಂಬಿಸಿಕೊಂಡು ಬರುತ್ತಿದ್ದ ಎರಡೂ ಲಾರಿಗಳನ್ನು ತಾಲೂಕಿನ ಗಡಿಯಲ್ಲಿರುವ ತಾಟವಾಳ ಅರಣ್ಯ ತಪಾಸಣಾ ನಾಕೆಯಲ್ಲಿ ಹಿಡಿದ ಅರಣ್ಯಾಧಿಕಾರಿಗಳ ತಂಡ ಚಾಲಕರನ್ನು ವಿಚಾರಣೆ ನಡೆಸಿದ್ದಾಗ ಮರಳು ಸಾಗಾಣಿಕೆಗೆ ಯಾವುದೇ ಪರವಾನಗಿಯನ್ನು ಪಡೆಯದಿರುವುವುದು ಗೊತ್ತಾಗಿದೆ.ಪ್ರಕರಣದ ತನಿಖೆ ನಡೆಸಿದ ತಹಸೀಲ್ದಾರರು ₹1.80 ಲಕ್ಷ ದಂಡವನ್ನು ವಿಧಿಸಿದ್ದಾರೆ. ಈ ಕುರಿತು ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ಹೆಚ್ಚಾಗಿದ್ದು, ಇದನ್ನು ತಡೆಗಟ್ಟಲು ಇಲಾಖೆಯ ವತಿಯಿಂದ ಸೂಕ್ತ ಕ್ರಮ ಜರುಗಿಸಲಾಗುವುದು. ಇಂತಹ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಬಸ್ ಡಿಕ್ಕಿ: ಬೈಕ್ ಸವಾರನಿಗೆ ಗಾಯಹೊನ್ನಾವರ: ತಾಲೂಕಿನ ಬಾಳೆಗದ್ದೆ ಕ್ರಾಸ್‌ನಲ್ಲಿ ಕಾರವಾರದಿಂದ ದಾವಣಗೆರೆಗೆ ತರಳುತ್ತಿದ್ದ ಬಸ್ ಹಾಗೂ ಬೈಕ್ ಅಪಘಾತವಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಜಲವಳ್ಳಿಯ ದತ್ತಾತ್ರೇಯ ಮಾಸ್ತಿ ನಾಯ್ಕ(೪೭) ಎಂದು ಗುರುತಿಸಲಾಗಿದೆ. ಬೈಕ್ ಸವಾರನಿಗೆ ಕಾಲು ಮುರಿದಿದ್ದು, ಹೆಚ್ಚಿನ ಚಿಕಿತ್ಸೆಗೆ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಳೆಗದ್ದೆ ಕ್ರಾಸ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್ ವೇಗವಾಗಿ ಬಂದಿದ್ದು, ಬೈಕ್ ಸವಾರನಿಗೆ ಬಡಿದಿದೆ. ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.