ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ದೇವರಹಿಪ್ಪರಗಿ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಥ೯ಪೂಣ೯ವಾಗಿ ಆಚರಿಸೋಣ. ತಾಲೂಕಿನಲ್ಲಿ ಸಾಹಿತ್ಯದ ಸುಧೆಯನ್ನು ಎಲ್ಲೆಡೆ ಹರಡಿಸೋಣ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ನೂತನ ದೇವರಹಿಪ್ಪರಗಿ ತಾಲೂಕಿನಲ್ಲಿ ನಡೆಯುತ್ತಿರುವ ಪ್ರಥಮ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಉದ್ದೇಶದಿಂದ ದೇವರಹಿಪ್ಪರಗಿ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೆಲ-ಜಲ ನಾಡು-ನುಡಿ, ಸಂಸ್ಕೃತಿ ಹಾಗೂ ಪರಂಪರೆ ಕುರಿತು ಚಿಂತನ ಗೋಷ್ಠಿಗಳನ್ನು ಸಮ್ಮೇಳನದಲ್ಲಿ ಏರ್ಪಡಿಸುವುದಾಗಿ ತಿಳಿಸಿದರು.
ಈಗಾಗಲೇ ಶಾಸಕರಾದ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರನ್ನು ಭೇಟಿ ಮಾಡಿ ಸಮ್ಮೇಳನದ ಕುರಿತು ಚಚಿ೯ಸಲಾಗಿದೆ. ಕಾರ್ಯಕ್ರಮ ಯಶಸ್ವಿ ಮಾಡೋಣವೆಂದು ಶಾಸಕರು ವಚನ ನೀಡಿದ್ದಾರೆ. ತಾಲೂಕು ಆಡಳಿತ, ತಾಲೂಕ ಪಂಚಾಯತಿ ಹಾಗೂ ಪಟ್ಟಣ ಪಂಚಾಯತಿ ಹಾಗೂ ಸ್ಥಳೀಯ ಗಣ್ಯರನ್ನು, ರಾಜಕೀಯ ಮುಖಂಡರನ್ನು ಹಾಗೂ ಸಾಹಿತಿಗಳನ್ನು, ಶಿಕ್ಷಕರನ್ನು ಸಂಪರ್ಕಿಸಿ ಎಲ್ಲರೂ ಜೊತೆಗೂಡಿ ಸಮ್ಮೇಳನವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದರು.ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಪಿ.ಬಿರಾದಾರ ಮಾತನಾಡಿ, ದೇವರಹಿಪ್ಪರಗಿ ನೂತನ ತಾಲೂಕಿನಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲರ ಸಹಾಯ ಮತ್ತು ಸಹಕಾರದಿಂದ ಅಲ್ಲದೇ ವಿಶ್ವಾಸವನ್ನು ಪಡೆದುಕೊಂಡು ಪ್ರಥಮ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿ ಮಾಡುವ ಸಂಕಲ್ಪವನ್ನು ಮಾಡಿದ್ದೇವೆ. ಸಮ್ಮೇಳನದ ದಿನಾಂಕವನ್ನು ಎಲ್ಲರೊಂದಿಗೆ ಸಭೆ ಸೇರಿ ಚಚಿ೯ಸಿ ಪ್ರಕಟ ಮಾಡುವುದಾಗಿ ಅವರು ತಿಳಿಸಿದರು.ಮೆಹತಾಬ ಕಾಗವಾಡ ಪುರಂದರದಾಸರ ಕೀತ೯ನೆಯನ್ನು ಪಠಿಸಿದರು. ತಾಲ್ಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುಭಾಷ್ ಬಸವರೆಡ್ಡಿ, ಬಸವ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಂಗಣ್ಣ ತಡವಲ್, ರಾಜೇಸಾಬ ಶಿವನಗುತ್ತಿ, ಸಂಗನಗೌಡ ಬಿರಾದಾರ, ಪಿ. ಎಸ್.ಮಿಂಚನಾಳ, ಗುರುರಾಜ ಆಕಳವಾಡಿ, ಸೋಮು ದೇವೂರ, ಪಿ.ಸಿ.ತಳಕೇರಿ, ಸಿದ್ದು ಮೇಲಿನಮನಿ, ಎಸ್.ಜಿ.ತಾವರಖೇಡ, ಎಸ್.ಆರ್.ನಂದ್ಯಾಳ, ರವಿ ಕೊಟೀನ, ಶಿವಾನಂದ ಕೊಟೀನ, ಕೆ.ಎಂ.ನಂದಿ, ಗೊಲ್ಲಾಳ ಬಿರಾದಾರ, ಶ್ರೀಕಾಂತ ಭಜಂತ್ರಿ, ಅಣ್ಣು ಭಜಂತ್ರಿ, ಸುರೇಶ ಬೀರನಗಡ್ಡಿ, ಸದಾಶಿವ ಗುಡಿಮನಿ, ಜಿ.ಎ.ಪಾಟೀಲ ಸೇರಿದಂತೆ ಸಾಹಿತ್ಯ ಪರಿಷತ್ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.