ಸಾರಾಂಶ
ನಾಪೋಕ್ಲು: ಸಾಲ ಬಾಧೆಯಿಂದ ಸಮೀಪದ ನೆಲಜಿ ಗ್ರಾಮದಲ್ಲಿ ಗುಂಡು ಹೊಡೆದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ನೆಲಜಿ ಗ್ರಾಮದ ನಿವಾಸಿ ಸಿ.ಎಂ ತಿಮ್ಮಯ್ಯ (ರಂಜು 55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.ರೈತರಾಗಿರುವ ಸಿ.ಎಂ ತಿಮ್ಮಯ್ಯ ಕೃಷಿ ಪರಿಕರಗಳಿಗೆ ಬ್ಯಾಂಕುಗಳಲ್ಲಿ ಸಾಲ ಮಾಡಿಕೊಂಡಿದ್ದು ಸಾಲಬಾಧೆಯಿಂದ ಮಾನಸಿಕವಾಗಿ ಕುಗ್ಗಿದ್ದು ಮಂಗಳವಾರ ಬೆಳಗ್ಗೆ ನೆಲಜಿ ಗ್ರಾಮದ ತಮ್ಮ ಮನೆ ಸಮೀಪದಲ್ಲಿ ಎದೆಗೆ ಗುಂಡು ಹೊಡೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯಲ್ಲಿ ಪತ್ನಿ ಚಿತ್ರ (ತಾರಾಮಣಿ) ಹಾಗೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಎರಡನೇ ಮಗ ಮನೆಯಲ್ಲಿದ್ದು ಒಂದನೇ ಮಗ ತಮ್ಮ ಟಿಪ್ಪರ್ ಲಾರಿಯಲ್ಲಿ ಹೊರಗಡೆ ತೆರಳಿದ್ದರು ಎನ್ನಲಾಗಿದೆ. ಬೆಳಗ್ಗೆ ಮನೆ ಸಮೀಪದಲ್ಲಿ ಗುಂಡಿನ ಶಬ್ಧ ಕೇಳಿ ಪತ್ನಿ ಚಿತ್ರ ಹಾಗೂ ಪುತ್ರ ಮತ್ತು ಕೆಲಸದವರು ತೆರಳಿ ನೋಡಿದಾಗ ಸಿಂಗಲ್ ಬೆರಲ್ ಕೋವಿಯಿಂದ ಎದೆಗೆ ಗುಂಡು ಹೊಡೆದು ತಿಮ್ಮಯ್ಯನವರು ಸ್ಥಳದಲ್ಲಿ ಮೃತಪಟ್ಟಿದ್ದರು.ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಿಮ್ಮಯ್ಯ ಅವರ ಪತ್ನಿ ಚಿತ್ರ ನೀಡಿದ ದೂರಿನ ಅನ್ವಯ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಾನೂನಿನ ಕ್ರಮ ಕೈಗೊಂಡಿದ್ದಾರೆ.--------------------------------ಆಂಗ್ಲಭಾಷಾ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಮಡಿಕೇರಿ : ಕರ್ನಾಟಕ ಪೀಪಲ್ ಎಜುಕೇಷನ್ ಸೊಸೈಟಿ ಕಲಬುರಗಿ ಈ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಮಿಲಿಂದ ಪದವಿ ಪೂರ್ವ ಕಾಲೇಜು, ಕಲಬುರಗಿ ಈ ಕಾಲೇಜಿನಲ್ಲಿ ಖಾಲಿ ಇರುವ ಆಂಗ್ಲಭಾಷಾ ಉಪನ್ಯಾಸಕರ ಹುದ್ದೆಗೆ ಆಡಳಿತ ಮಂಡಳಿ ನಿಗದಿಪಡಿಸಿದ ರಿಕ್ತಸ್ಥಾನ-8ರ ಸಾಮಾನ್ಯ ಅಂಗವಿಕಲ (ದೃಷ್ಟಿಮಾಂದ್ಯ) ಅಭ್ಯರ್ಥಿಯನ್ನು ಭರ್ತಿ ಮಾಡಿಕೊಳ್ಳಲು ಅವಕಾಶವಿದೆ. ಜಿಲ್ಲೆಯಲ್ಲಿ ಇರುವ ಈ ಹುದ್ದೆಗೆ ಅರ್ಹ ಅಂಗವಿಕಲ ದೃಷ್ಟಿದೋಷವಿರುವ ಅಭ್ಯರ್ಥಿಗಳು ನೇರವಾಗಿ ಅಧ್ಯಕ್ಷರು/ ಕಾರ್ಯದರ್ಶಿಗಳು ಕರ್ನಾಟಕ ಪೀಪಲ್ ಎಜುಕೇಷನ್ ಸೊಸೈಟಿ ಕಲಬುರಗಿ ಈ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಮಿಲಿಂದ ಪದವಿ ಪೂರ್ವ ಕಾಲೇಜು, ಕಲಬುರಗಿ ಅಥವಾ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ಮಡಿಕೇರಿ, ಕೊಡಗು ಜಿಲ್ಲೆ ಇವರ ದೂರವಾಣಿ ಸಂಖ್ಯೆ. 08272-295829ನ್ನು ಸಂಪರ್ಕಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.