ಮಾರಕಾಸ್ತ್ರಗಳಿಂದ ಹೆದರಿಸುತ್ತಿದ್ದ ವ್ಯಕ್ತಿ ಬಂಧನ
KannadaprabhaNewsNetwork | Published : Oct 10 2023, 01:00 AM IST
ಮಾರಕಾಸ್ತ್ರಗಳಿಂದ ಹೆದರಿಸುತ್ತಿದ್ದ ವ್ಯಕ್ತಿ ಬಂಧನ
ಸಾರಾಂಶ
ಮಾರಕಾಸ್ತ್ರಗಳಿಂದ ಹೆದರಿಸುತ್ತಿದ್ದ ವ್ಯಕ್ತಿ ಬಂಧನ
ಕಡೂರು: ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಜನರನ್ನು ಹೆದರಿಸುತ್ತಿದ್ದ ವ್ಯಕ್ತಿಯನ್ನು ಕಡೂರು ಪೊಲೀಸರು ಬಂಧಿಸಿದ್ಧಾರೆ. ಬೀರೂರು ಮೂಲದ ಸಮೀರ್ ಎಂಬಾತ ಬಂಧಿತ ಆರೋಪಿ. ಈತನ ಬಳಿ ಇದ್ದ ಒಂದು ಲೋಡೆಡ್ ಗನ್, 10 ಸಜೀವ ಗುಂಡುಗಳು, ಎರಡು ಚಾಕು, ಒಂದು ಡ್ರಾಗರ್ ಹಾಗೂ 40 ಗ್ರಾಂ ಗಾಂಜಾ ಸೊಪ್ಪನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತರಿಕೆರೆ ಡಿವೈಎಸ್ಪಿ ಹಾಲಮೂರ್ತಿ ರಾವ್ ಮಾಹಿತಿ ನೀಡಿದರು. ಗಾಂಜಾ ಮತ್ತಿನಲ್ಲಿ ಗನ್ ತೋರಿಸಿ ಜನರನ್ನು ಹೆದರಿಸುತ್ತಾ ಪಟ್ಟಣದ ಎಪಿಎಂಸಿ ಆವರಣದಲ್ಲಿ ತಿರುಗಾಡುತ್ತಿದ್ದ ಸಮೀರ್ ನನ್ನು ಸಾರ್ವಜನಿಕರ ಸಹಾಯದಿಂದ ಕಡೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತನಿಂದ ಒಂದು ಬೈಕ್, ಒಂದು ಸ್ಕಾರ್ಪಿಯೊ ಮತ್ತು ಒಂದು ಆಲ್ಟೋ ಕಾರು ವಶಪಡಿಸಿಕೊಳ್ಳಲಾಗಿದೆ. ಈತ ಒಬ್ಬ ಅಂತರ್ ರಾಜ್ಯ ಗಾಂಜಾ ವ್ಯಾಪಾರಿಯಾಗಿದ್ದು, ಅಕ್ಕಪಕ್ಕದ ರಾಜ್ಯಗಳಲ್ಲಿ ಈತನ ಸಹಚರರು ಇದ್ದು, ಅವರ ಮೇಲೆ ಇಲಾಖೆ ಕಣ್ಣಿಟ್ಟಿದೆ. ಶೀಘ್ರದಲ್ಲೇ ಎಲ್ಲರನ್ನು ಬಂಧಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು, ಈತನನ್ನು ನ್ಯಾಯಾಂಗ ವಶಕ್ಕ ಒಪ್ಪಿಸಲಾಗಿದೆ ಎಂದರು. 9ಕೆಕೆಡಿಯು2. ಆರೋಪಿ ಸಮೀರ್ 9ಕೆಕೆಡಿಯು2ಎ. ವಶಪಡಿಸಿಕೊಂಡ ಮಾರಕಾಸ್ತ್ರಗಳು.