ಗೋಕರ್ಣದ ಹೋಟೆಲ್‌ನಲ್ಲಿ ಜಗಳ ಬಿಡಿಸಲು ಹೋದ ವ್ಯಕ್ತಿ ಮೇಲೆ ಹಲ್ಲೆ

| Published : Jan 16 2025, 12:47 AM IST

ಗೋಕರ್ಣದ ಹೋಟೆಲ್‌ನಲ್ಲಿ ಜಗಳ ಬಿಡಿಸಲು ಹೋದ ವ್ಯಕ್ತಿ ಮೇಲೆ ಹಲ್ಲೆ
Share this Article
  • FB
  • TW
  • Linkdin
  • Email

ಸಾರಾಂಶ

೨೦ ರುಪಾಯಿಗಾಗಿ ಏಕೆ ಜಗಳ ಮಾಡುತ್ತೀರಿ ಎಂದು ಆ ಮೂವರನ್ನು ಲೋಹಿತ್ ಕಟ್ಟಿ ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟಾದ ಆ ಮೂವರು ಲೋಹಿತ ಕಟ್ಟಿ ಅವರನ್ನು ಥಳಿಸಿದ್ದಾರೆ. ಲೋಹಿತ್ ಕಟ್ಟಿ ಅವರನ್ನು ಹೋಟೆಲ್ ಮೇಲ್ಮಹಡಿಯಿಂದ ದೂಡಿದ್ದಾರೆ.

ಗೋಕರ್ಣ: ಊಟದ ಬಿಲ್‌ ಕಟ್ಟುವ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ನಡೆದ ಹೊಡೆದಾಟದಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಹಳೆ ಸಿನಿಮಾ ಥಿಯೇಟರ್ ಎದುರು ಇರುವ ಹೋಟೆಲ್‌ನಲ್ಲಿ ನಡೆದಿದೆ.ಜ. ೧೪ರ ರಾತ್ರಿ ಗೋಕರ್ಣ ಮೇಲಿನಕೇರಿಯ ಅಶೋಕ ಹೋಟೆಲ್‌ಗೆ ಕಲಘಟಗಿಯ ಮಾಲತೇಶ ನಿಗದಿ, ಕಲ್ಮೇಶ ಗುಡಗುಡಿ ಹಾಗೂ ಕುಂದಗೋಳದ ಸಂತೋಷ ಸೂಲ್ವಿ ಹೋಗಿದ್ದರು. ಊಟ ಮಾಡುವಾಗ ಹೆಚ್ಚುವರಿಯಾಗಿ ಒಂದು ಬಟ್ಟಲು ಅನ್ನವನ್ನು ಕೇಳಿ ಪಡೆದಿದ್ದರು. ಹೆಚ್ಚುವರಿಯಾಗಿ ಪಡೆದ ಅನ್ನಕ್ಕೆ ₹೨೦ ಪಾವತಿಸಲು ನಿರಾಕರಿಸಿದ್ದರು.₹೨೦ ಪಾವತಿ ವಿಷಯವಾಗಿ ಹೋಟೆಲ್ ಸಿಬ್ಬಂದಿ ಹಾಗೂ ಆ ಮೂವರು ಗ್ರಾಹಕರ ನಡುವೆ ಗಲಾಟೆ ಶುರುವಾಗಿತ್ತು. ಮಾತಿಗೆ ಮಾತು ಬೆಳೆದಿತ್ತು. ಆಗ ಅದೇ ಹೋಟೆಲ್‌ಗೆ ಬ್ಯಾಡಗಿಯ ಲೋಹಿತ ಕಟ್ಟಿ ತಮ್ಮ ಸ್ನೇಹಿತರ ಜತೆ ಊಟಕ್ಕೆ ಬಂದಿದ್ದರು. ಜಗಳವನ್ನು ಬಗೆಹರಿಸಲು ಪ್ರಯತ್ನಿಸಿದರು. ೨೦ ರುಪಾಯಿಗಾಗಿ ಏಕೆ ಜಗಳ ಮಾಡುತ್ತೀರಿ ಎಂದು ಆ ಮೂವರನ್ನು ಲೋಹಿತ್ ಕಟ್ಟಿ ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟಾದ ಆ ಮೂವರು ಲೋಹಿತ ಕಟ್ಟಿ ಅವರನ್ನು ಥಳಿಸಿದ್ದಾರೆ. ಲೋಹಿತ್ ಕಟ್ಟಿ ಅವರನ್ನು ಹೋಟೆಲ್ ಮೇಲ್ಮಹಡಿಯಿಂದ ದೂಡಿದ್ದಾರೆ. ಪರಿಣಾಮ ಲೋಹಿತ ಕಟ್ಟಿ ಅವರು ೧೫ ಅಡಿ ಆಳಕ್ಕೆ ಬಿದ್ದು ತಲೆಗೆ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಹೊಡೆದಾಟ ತಪ್ಪಿಸಲು ಬಂದ ಲೋಹಿತ ಕಟ್ಟಿ ಅವರ ಸ್ನೇಹಿತರಾದ ಪ್ರದೀಪ ಜಾಧವ್, ದೊಡ್ಡಬಸಪ್ಪ ತೆರದಳ್ಳಿ ಹಾಗೂ ಶಿವಕುಮಾರ ಮೊಟ್ಟೆಬೆನ್ನೂರು ಅವರನ್ನೂ ಥಳಿಸಲಾಗಿದೆ. ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಪಿಎಸ್‌ಐ ಖಾದರ್ ಬಾಷಾ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.ಜೂಜಾಟ ನಡೆಸುತ್ತಿದ್ದ ಬುಕ್ಕಿ ಮೇಲೆ ಪ್ರಕರಣ

ಶಿರಸಿ: ಶಿರಸಿ- ಹಾವೇರಿ ರಸ್ತೆ ಕಾಳಂಗಿ ಕ್ರಾಸ್ ಬಳಿಯ ಒಸಿ ಜಾಜಾಟ ನಡೆಸುತ್ತಿದ್ದ ವ್ಯಕ್ತಿಯ ಮೇಲೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಾಲೂಕಿನ ಬದನಗೋಡ ಕಾನೇಶ್ವರಿ ದೇವಸ್ಥಾನದ ಸಮೀಪದ ಈಶ್ವರ ಮಾದೇವಪ್ಪ ಮೈಸೂರು(೩೭) ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ.ಈತ ಜ. ೧೫ರಂದು ಶಿರಸಿ- ಹಾವೇರಿ ರಸ್ತೆಯ ಕಾಳಂಗಿ ಕ್ರಾಸ್ ಬಳಿಯ ಸಾರ್ವಜನಿಕ ರಸ್ತೆಯ ಸ್ಥಳದಲ್ಲಿ ಜಾಜಾಟ ನಡೆಸುತ್ತಿದ್ದ ವೇಳೆ ಬನವಾಸಿ ಠಾಣೆಯ ಪಿಎಸ್ಐ ಚಂದ್ರಕಲಾ ಪತ್ತಾರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ, ಜೂಜಾಟದ ಚೀಟಿ, ₹೪೦೦ ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.