ಸಾರಾಂಶ
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ15 ದಿನದೊಳಗಾಗಿ ವರ್ತಕರ ಸಭೆ ಕರೆದು ರೈತರ ತಂಬಾಕಿಗೆ ಉತ್ತಮ ಬೆಲೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ನೀಡಿ ರೈತರ ಹಾಗೂ ವರ್ತಕರನ್ನು ಉದ್ದೇಶಿಸಿ ಅವರು ಮಾತನಾಡಿದರು.ಬೆಳೆದ ರೈತರಿಗೆ ಉತ್ತಮ ಬೆಂಬಲ ಕಲ್ಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಅದರಂತೆ ಹೊಗೆಸೊಪ್ಪುಗೆ ಸರಾಸರಿ 300 ರು. ಬೆಲೆಯನ್ನು ನೀಡಬೇಕೆಂದು ಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈತರು ಅತಿವೃಷ್ಟಿಯಿಂದ ಗುಣಮಟ್ಟದ ತಂಬಾಕಿಗೆ ಹೊಡೆತ ಬಿದ್ದು ಸಂಕಷ್ಟಕ್ಕೆ ಒಳಗಾಗಿ, ಕೂಲಿ, ಗೊಬ್ಬರ, ಕಟ್ಟಿಗೆದರ, ಹೆಚ್ಚಿದ್ದರೂ ಧೃತಿಗೆಡದೆ ತಂಬಾಕು ಬೆಳೆದಿರುವ ರೈತರಿಗೆ ಉತ್ತಮ ಸರಾಸರಿ ದರ ನೀಡಬೇಕು ರೈತರು ಬೆಳದ ತಂಬಾಕಿಗೆ ಉತ್ತಮ ಬೆಲೆ ದೊರಕಿಸಲು ಕೇಂದ್ರದಲ್ಲಿ ಚರ್ಚಿಸಿ ಹಂತ ಹಂತವಾಗಿ ದರ ಹೆಚ್ಚಳ ಮಾಡಲು ಪ್ರಯತ್ನಿಸುತ್ತೇನೆ ಹಾಗೂ ರೈತರ ಬೇಡಿಕೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸಿ ಸದಾ ಜತೆಗಿದ್ದು, ಉತ್ತಮ ಸೌಲಭ್ಯ ಕಲ್ಪಿಸಿ ನಿಮ್ಮ ಬೆಂಬಲವಾಗಿರುತ್ತೇನೆ, ಈ ವಾರ ಮನೆಯಿಂದ ಹೊರ ಕಳಿಸಿದ ಏಳೆಂಟು ವರ್ಷಗಳಿಂದ ನವೀಕರಣವಾಗದೆ ಉಳಿದಿರುವ ತಂಬಾಕು ಲೈಸೆನ್ಸ್ ಅನ್ನು ನವೀಕರಣ ಮಾಡಲು ಕ್ರಮ ಕೈಗೊಳ್ಳುವುದು ತಂಬಾಕು ರೈತರಿಗೆ ಯಾವುದೇ ಕಷ್ಟಗಳಿದ್ದರೂ ನನ್ನ ಹತ್ತಿರ ಸಂಕೋಚವಿಲ್ಲದೆ ಹೇಳಿಕೊಳ್ಳಿ ನಾನು ರೈತರ ಕಷ್ಟ ಪರಿಹರಿಸುತ್ತೇನೆ ಎಂದು ಭರವಸೆ ನೀಡಿದರು.ಆಯುಧ ಪೂಜಾ ಹಬ್ಬಕ್ಕೆ ಮೊದಲು ಗುಣಮಟ್ಟದ ಹೊಗೆಸೊಪ್ಪಿಗೆ ಹಾಗೂ ಮಧ್ಯಮ ವರ್ಗದ ಸೊಪ್ಪಿಗೂ ಉತ್ತಮ ದರ ನೀಡಿದ ಖರೀದಿದಾರರು ದಸರಾ ಹಬ್ಬ ಕಳೆದ ನಂತರ ನೋಬಿಡ್ ಮಾಡುತ್ತಿದ್ದಾರೆ ಇದು ಎಷ್ಟು ಸರಿ ಎಂದು ತಮ್ಮ ಅಹವಾಲು ತೋಡಿಕೊಂಡರು .ಸರಾಸರಿ ಬೆಲೆ ಕೊಡಿಸಿ ಎಂದು ರೈತರಿಗೂ ಮತ್ತು ಬಿಜೆಪಿ ಮುಖಂಡರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆದು ನಂತರ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದರ ನೀಡಲು ನಿಮ್ಮ ಪರವಾಗಿ ಕೈ ಜೋಡಿಸಲು ನಾನಿದ್ದೇನೆ, ತಾಳ್ಮೆಯಿಂದ ರೈತರೆಲ್ಲ ಸಹಕರಿಸಬೇಕು ಎಂದು ಕೋರಿದರು.
ಕಳೆದ ಬಾರಿಗಿಂತ ಅಗತ್ಯ ವಸ್ತುಗಳಿಗೆ ಈ ವರ್ಷ ಮೂರು ಪಟ್ಟು ಅಧಿಕ ಬೆಲೆ ಹೆಚ್ಚಾಗಿದ್ದು, ತಾಲೂಕಿನ ರೈತರು ಬಡ್ಡಿ ಸಾಲ, ಬ್ಯಾಂಕ್ ನಲ್ಲಿ ಬೆಳೆಸಾಲ ಪಡೆದು ಬೇಸಾಯ ಮಾಡಿದ್ದು, ಸಾಲದು ಅಂತ ಅತೀಯಾದ ಮಳೆಗೆ ಸಂಕಷ್ಟ ಎದುರಿಸಿ ತಂಬಾಕು ಬೆಳೆದಿರುವ ರೈತನಗೆ ಸರಾಸರಿ 300 ರಿಂದ 350 ರು. ಬೆಲೆ ನಿಗದಿ ಮಾಡಿಸಿ ಎಂದು ಸಂಸದ ಮುಂದೆ ರೈತರ ಪರ ಮನವಿ ಮಾಡಿದರು.ತಂಬಾಕು ಮಂಡಳಿ ವಿಭಾಗಿಯ ವ್ಯವಸ್ಥಾಪಕ ಲಕ್ಷ್ಮಣ್ ಹರಾಜು ಮಾರುಕಟ್ಟೆ ಅಧ್ಯಕ್ಷ ಪ್ರಭಾಕರನ್. ರಾಜ್ ಮೋಹನ್ ಸೂರಿ. ಐಸಾಕ್ ಸ್ವರ್ಣದತ್ತ, ಮುಖಂಡರಾದ ಅರುಣ, ಮಾಗಳಿ ರವಿ, ಚನ್ನಬಸವರಾಜು, ರವಿ, ಸ್ವಾಮಿ, ಆನಂದ, ದಿನೇಶ್, ಲೋಕಪಾಲ್. ಹಬ್ಬನ ಕುಪ್ಪೆ ದಿನೇಶ್, ರಮೇಶ್, ಮೀನಾಕ್ಷಿ, ಗೌರೀಶ್, ರೈತ ಸಂಘದ ಸದಸ್ಯರು, ರೈತರು ತಂಬಾಕು ಮಂಡಳಿ ಅಧಿಕಾರಿಗಳು, ಖರೀದಿಗಾರರು ಇದ್ದರು.