ಹಾಲುಮತ ಸಮಾಜ ವಿಶ್ವಾಸವುಳ್ಳ ಜನಾಂಗ

| Published : Mar 09 2024, 01:32 AM IST

ಸಾರಾಂಶ

ವೀರ ಸಂಗೊಳ್ಳಿ ರಾಯಣ್ಣನ ದೇಶಾಭಿಮಾನವನ್ನು ನಾವು ಸ್ಮರಿಸುವ ಮೂಲಕ ಆತನ ಧೈರ್ಯ, ಸಾಹಸವನ್ನು ಎಂದೂ ಮರೆಯಲೂ ಸಾಧ್ಯವಿಲ್ಲ. ಅಂಥವರ ತತ್ವಾದರ್ಶಗಳನ್ನು ಇಂದಿನ ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಯಲಬುರ್ಗಾ: ಹಾಲಿನಂತಿರುವ ಹಾಲುಮತ ಸಮಾಜ ಅತ್ಯಂತ ಪ್ರಾಮಾಣಿಕ, ವಿಶ್ವಾಸವುಳ್ಳ ಜನಾಂಗವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರ್ ಹೇಳಿದರು.ಪಟ್ಟಣದಲ್ಲಿ ಶಿವರಾತ್ರಿ ನಿಮಿತ್ತ ಶುಕ್ರವಾರ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ನಾಡಿಗೆ ಹಾಲುಮತ ಸಮಾಜದವರ ನೀಡಿದ ಕೊಡುಗೆ ಅಪಾರವಾಗಿದೆ ಎಂದರು.ವೀರ ಸಂಗೊಳ್ಳಿ ರಾಯಣ್ಣನ ದೇಶಾಭಿಮಾನವನ್ನು ನಾವು ಸ್ಮರಿಸುವ ಮೂಲಕ ಆತನ ಧೈರ್ಯ, ಸಾಹಸವನ್ನು ಎಂದೂ ಮರೆಯಲೂ ಸಾಧ್ಯವಿಲ್ಲ. ಅಂಥವರ ತತ್ವಾದರ್ಶಗಳನ್ನು ಇಂದಿನ ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೊತೆಗೆ ಪ್ರತಿಯೊಬ್ಬರು ಹಾಲುಮತ ಸಮಾಜದವರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಕಾರ್ಯ ಮಾಡಿದಾಗ ಸಮಾಜ ಇನ್ನಷ್ಟು ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಸಂಸ್ಥಾನ ಹಿರೇಮಠ ಪೀಠಾಧಿಪತಿ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಶ್ರೀಧರ ಮುರುಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಹಾಲುಮತ ಸಮಾಜದವರು ನಿರ್ಸಗದ ಆರಾಧಕರು ಆಗಿದ್ದಾರೆ. ವಿಶ್ವಾಸ, ಪ್ರಾಮಾಣಿಕತೆ, ನಂಬಿಕೆಯೇ ವಿಶ್ವಾಸದ ಸಂಕೇತ ಹಾಲುಮತ ಸಮಾಜವಾಗಿದೆ. ಕನಕದಾಸರು ತಮ್ಮ ಕೃತಿಗಳಲ್ಲಿ ಹುಟ್ಟಿನಿಂದ ಬಂದ ಜಾತಿಗೆ ಮಹತ್ವಕೊಡದೆ ಮನುಷ್ಯರ ಆಚಾರ-ವಿಚಾರ ಮತ್ತು ನಡೆ-ನುಡಿಗಳಿಗೆ ಪ್ರಾಶಸ್ಯ ಕೊಡುವ ಮೂಲಕ ಎಲ್ಲರೂ ಒಂದೇ ಮನುಷ್ಯ ಜಾತಿ ಸಾರಿಹೇಳಿದ ದಾಸರಲ್ಲಿ ಕನಕದಾಸರು ಶ್ರೇಷ್ಠರಾಗಿದ್ದಾರೆ ಎಂದರು.

ಆರ್‌ಡಿಸಿಸಿ ಬ್ಯಾಂಕ್ ನಾಮನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ ಮಾತನಾಡಿ ಈ ಸಮಾಜ ಭಾಂಧವರು ಎಲ್ಲ ರಂಗದಲ್ಲೂ ತಮ್ಮದೇ ಆದ ಛಾಪುನ್ನು ಮೂಡಿಸುವ ಮೂಲಕ ಇತರ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ಹಾಲುಮತ ಸಮಾಜದ ತಾಲೂಕಾಧ್ಯಕ್ಷ ವೀರನಗೌಡ ಪೋಲಿಸ್ ಪಾಟೀಲ ಸಭೇ ಅಧ್ಯಕ್ಷತೆ ವಹಿಸಿ ಮಾತನಾಡಿದರು.ದ್ಯಾಮಯ್ಯ ಗುರುವಿನ ಸಾನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಜಿಪಂ ಮಾಜಿ ಸದಸ್ಯ ರಾಮಣ್ಣ ಸಾಲಭಾವಿ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಪಪಂ ಮಾಜಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಅಂದಾನಗೌಡ ಪೋಲಿಸ್ ಪಾಟೀಲ, ರೇವಣೆಪ್ಪ ಹಿರೇಕುರಬರ, ಈಶ್ವರ ಅಟಮಾಳಗಿ, ಮಹೇಶ ಭೂತೆ, ಕಳಕಪ್ಪ ತಳವಾರ, ಶಿವು ರಾಜೂರ ಮತ್ತಿತರರು ಇದ್ದರು.