ಸಾರಾಂಶ
ತಮ್ಮ ಹೆಸರಿಗೆ ಅನ್ವರ್ಥವಾಗುವಂತೆ ಜೀವನ ನಡೆಸಿ ವರ್ತನೆಯಲ್ಲಿಯೂ ದೊಡ್ಡತನ ಬೆಳೆಸಿಕೊಂಡಿರುವ ಗೌಡರು ಕ್ಷೇತ್ರದ ಆಸ್ತಿಯಾಗಿದ್ದಾರೆ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಕಳೆದ ನಾಲ್ಕು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿರುವ ದೊಡ್ಡಸ್ವಾಮೇಗೌಡರು ಚುನಾಯಿತ ಜನಪ್ರತಿನಿಧಿಗಳು ಮತ್ತು ಸಮಾಜ ಮುಖಿ ಕೆಲಸ ಮಾಡುವವರಿಗೆ ಮಾದರಿಯಾದ ಮನುಷ್ಯ ಎಂದು ಗಾವಡಗೆರೆ ಗುರುಲಿಂಗ ಜಂಗಮ ಮಠದ ಶ್ರೀ ನಟರಾಜ ಸ್ವಾಮೀಜಿ ಹೇಳಿದರು.ಪಟ್ಟಣದ ಪುರಸಭೆ ಬಯಲು ರಂಗ ಮಂದಿರದ ಆವರಣದಲ್ಲಿ ನಡೆದ ಅವರ 75ನೇ ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ತಮ್ಮ ಹೆಸರಿಗೆ ಅನ್ವರ್ಥವಾಗುವಂತೆ ಜೀವನ ನಡೆಸಿ ವರ್ತನೆಯಲ್ಲಿಯೂ ದೊಡ್ಡತನ ಬೆಳೆಸಿಕೊಂಡಿರುವ ಗೌಡರು ಕ್ಷೇತ್ರದ ಆಸ್ತಿಯಾಗಿದ್ದಾರೆ ಎಂದರು.
ತಮ್ಮ ಜನ್ಮ ದಿನದಂದು ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕಿನ ಜನರ ಆರೋಗ್ಯ ತಪಾಸಣೆ ಮಾಡಿಸಿ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವ ಜತೆಗೆ ಜೀವಾಧಾರವಾಗಿರುವ ರಕ್ತದಾನ ಮಾಡಿಸಿ ಈ ದಿನವನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.ಕಿರಿಯರು ಮತ್ತು ಹಿರಿಯರು ಎನ್ನದೆ ಸರ್ವರನ್ನು ಸಮಾನರಾಗಿ ಕಂಡು ತಮ್ಮ ವ್ಯಕ್ತಿತ್ವವನ್ನು ಎತ್ತರದ ಸ್ಥಾನಕ್ಕೆ ಏರಿಸಿಕೊಂಡಿರುವ ಗೌಡರು ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿದ್ದು ತಮ್ನ ಜನ್ಮವನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಭವಿಷ್ಯದಲ್ಲಿ ದೊಡ್ಡಸ್ವಾಮೇಗೌಡರು ರಾಜ್ಯ ಮಟ್ಟದ ನಾಯಕರಾಗಿ ಬೆಳೆಯುವ ಎಲ್ಲಾ ಲಕ್ಷಣ ಹೊಂದಿದ್ದು ಅಂತಹ ನಿರಂತರ ಅವಕಾಶಗಳು ದೊರೆತು ಶ್ರೀಯುತರು ಶತಾಯುಷಿಯಾಗಿ ಬದುಕಲ್ಲಿ ಎಂದು ಆಶೀರ್ವದಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರಗಳ ಶಾಸಕರು ಮತ್ತು ಚುನಾಯಿತಜನ ಪ್ರತಿನಿಧಿಗಳು ಆಗಮಿಸಿ ದೊಡ್ಡಸ್ವಾಮೇಗೌಡರಿಗೆ ಜನ್ಮ ದಿನದ ಶುಭಾಶಯ ತಿಳಿಸಿದರು.
ರಾಜ್ಯ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳದ ಅಧ್ಯಕ್ಷ ಎಂ. ರಮೇಶ್, ದೊಡ್ಡಸ್ವಾಮೇಗೌಡರ ಪತ್ನಿ ವನಜಾಕ್ಷಮ್ಮ, ಶಾಸಕ ಡಿ. ರವಿಶಂಕರ್ ಪತ್ನಿ ಸುನೀತಾ, ಪುತ್ರರಾದ ಡಾ.ಡಿ. ರಾಜೀವ್, ಡಿ. ಪ್ರಶಾಂತ್, ಕಾಗಿನೆಲೆ ಕೆ.ಆರ್. ನಗರ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಲಾಲನಹಳ್ಳಿ ಮಠದ ಜಯದೇವಿತಾಯಿ, ಅರಕೆರೆ ವಿರಕ್ತ ಮಠದ ಸಿದ್ದೇಶ್ವರ ಶ್ರೀಗಳು, ಹಾಡ್ಯ ಈಶಾನ್ನೆಶ್ವರ ಮಠದ ಬಸವರಾಜ ಶ್ರೀಗಳು, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ವೀರಶೈವ ಮುಖಂಡ ಸಿ.ಪಿ. ರಮೇಶ್, ಜಿಲ್ಲಾ ಕಾಂಗ್ರೆಸ್ ಹಿರಿಯ ಪ್ರಧಾನ ಕಾರ್ಯದರ್ಶಿ ಸಿ.ಜೆ. ಪಾಲಾಕ್ಷಗೌಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ಪುರಸಭೆ ಅಧ್ಯಕ್ಷ ಡಿ. ಶಿವುನಾಯಕ್, ಸದಸ್ಯರಾದ ಕೋಳಿ ಪ್ರಕಾಶ್, ನಟರಾಜು, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಎಚ್.ಪಿ. ಪ್ರಶಾಂತ್, ಎಸ್. ಸಿದ್ದೇಗೌಡ, ಜಿ.ಎಸ್. ತೋಟಪ್ಪನಾಯಕ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ, ಉಪಾಧ್ಯಕ್ಷ ಸಾಕರಾಜು, ನಿರ್ದೇಶಕರಾದ ಕೆ.ಎಚ್. ಬುಡೀಗೌಡ, ಅರ್ಜುನಹಳ್ಳಿ ಗ್ರಾಪಂ ಅಧ್ಯಕ್ಷ ಮಹದೇವಪ್ಪ, ಹೊಸಕೋಟೆ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಕೆ. ಬಸವರಾಜು, ಯುವ ಮುಖಂಡ ವೈ.ಎಸ್. ಜಯಂತ್ ಸೇರಿದಂತೆ ದೊಡ್ಡಸ್ವಾಮೇಗೌಡರ ಅಭಿಮಾನಿಗಳು, ಹಿತೈಷಿಗಳು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಸಾವಿರಾರು ಮಂದಿ ಇದ್ದರು.