- ಅಂತರ ಜಿಲ್ಲಾಮಟ್ಟದ ಕೇರಂ ಪಂದ್ಯಾವಳಿ-2026 । ಬಹುಮಾನ ವಿತರಣೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಲಿಂಗೈಕ್ಯ ಡಾ.ಶಾಮನೂರು ಶಿವಶಂಕರಪ್ಪನವರ 96ನೇ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆ ಜಿಲ್ಲಾ ಕೇರಂ ಸಂಸ್ಥೆ, ಯಂಗ್ ಚಾಲೆಂಜರ್ಸ್ ಕೇರಂ ಸಂಸ್ಥೆ ಸಹಯೋಗದಲ್ಲಿ ಇಲ್ಲಿನ ಜಿಲ್ಲಾ ಗುರು ಭವನದಲ್ಲಿ ಜೂನ್ 12ರಿಂದ 15 ರವರೆಗೆ ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡ ಅಂತರ ಜಿಲ್ಲಾಮಟ್ಟದ ಕೇರಂ ಪಂದ್ಯಾವಳಿ-2026 ನಡೆಯಿತು.ಸೋಮವಾರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ದಾವಣಗೆರೆ ಜಿಲ್ಲೆಯು ಕೇರಂ ಪ್ರಿಯರ ನಾಡಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಿರುವುದಕ್ಕೆ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ರಾಷ್ಟ್ರಮಟ್ಟದ ಕೇರಂ ಪಂದ್ಯಾವಳಿಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು.
ಪಂದ್ಯದಲ್ಲಿ ಅಪೇಕ್ಷಾ ಭಂಡಾರಿ ಸಿರಸಿ (ಪ್ರಥಮ ಬಹುಮಾನ), ಶಾಲಿನಿ ಹೆಗಡೆ (ದ್ವಿತೀಯ), ಎಂ.ಪಿ.ಸುಮಾ ಚಿಕ್ಕಮಗಳೂರು, ಕೃತಿಕಾ ದಾವಣಗೆರೆ (ತೃತೀಯ) ಹಾಗೂ ಸಮಾಧಾನಕರ ಬಹುಮಾನಗಳನ್ನು ವಿದ್ಯಾಹೆಗಡೆ ಸಿರಸಿ, ಕೆ.ಕೆ.ಶಶಿರೇಖಾ ಶಿವಮೊಗ್ಗ, ಇಂದಿರಾ ದಾವಣಗೆರೆ, ತೇಜಾವತಿ ದಾವಣಗೆರೆ ರೂಪಾ ಪಡೆದಿದ್ದಾರೆ. ಡಬಲ್ಸ್‌ನಲ್ಲಿ ಸಾಜಿಲ್-ನೌಶಾದ್ (ಪ್ರಥಮ ಬಹುಮಾನ), ಹರೀಶ- ಸಮಿವುಲ್ಲಾ (ದ್ವಿತೀಯ), ಸೈಯದ್- ಅಂಬರೀಷ (ತೃತೀಯ), ಸಿಂಗಲ್ಸ್‌ನಲ್ಲಿ ಆರ್.ಶಿವು (ಪ್ರಥಮ), ಹರೀಶ (ದ್ವಿತೀಯ), ಜಿಯಾವುಲ್ಲಾಕ್ (ತೃತೀಯ), ವೆಟ್ರಾನ್ಸ್ ಸಿರಾಜುದ್ದೀನ್ (ಪ್ರಥಮ), ಲಿಯಾಕತ್ (ದ್ವಿತೀಯ), ಚಂದ್ರಶೇಖರ ಭಟ್ (ತೃತೀಯ), ಮಹಿಳಾ ಸಿಂಗಲ್ ಅಪೇಕ್ಷಾ (ಪ್ರಥಮ), ಶಾಲಿನಿ ಭಟ್ (ದ್ವಿತೀಯ), ಸುಮಾ ತೃತೀಯ ಬಹುಮಾನ ಪಡೆದರು.
ಈ ಸಂದರ್ಭ ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಕೇರಂ ಗಣೇಶ್, ಮಂಜುಳಾ ಗಣೇಶ್, ಎಚ್. ಪರಮೇಶ್ವರಪ್ಪ, ಎಸ್. ಬಸವರಾಜ, ಮಾರುತಿ, ಸುರೇಶ್, ಕೆ.ಎಸ್.ವಿಜಯಕುಮಾರ, ಭುಜಂಗರಾಜ್, ಶ್ರೀನಿವಾಸ್, ಚಮನ್‌ಸಾಬ್, ವಿಜಯಕುಮಾರ್ (ಗಂಭೀರ್), ಶ್ರೀಧರ್, ಅಭಿ, ಉಮೇಶ್, ಗೋಪಿ, ಮತ್ತಿತರರು ಉಪಸ್ಥಿತರಿದ್ದರು.
- - --15ಕೆಡಿವಿಜಿ39:
ದಾವಣಗೆರೆಯಲ್ಲಿ ಡಾ.ಎಸ್ಸೆಸ್ ಹುಟ್ಟುಹಬ್ಬದ ಅಂಗವಾಗಿ ನಡೆದ ಕೇರಂ ಸ್ಪರ್ಧೆ ವಿಜೇತರಿಗೆ ಶಾಸಕ ಸಮರ್ಥ ಶಾಮನೂರು ಮಲ್ಲಿಕಾರ್ಜುನ ಬಹುಮಾನ ವಿತರಿಸಿದರು.