ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬರ್ತಾರೆ, ಆದ್ರೆ ಡಿಕೆಶಿ ಸಿಎಂ ಆಗಲ್ಲ

| Published : Nov 06 2025, 02:15 AM IST

ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬರ್ತಾರೆ, ಆದ್ರೆ ಡಿಕೆಶಿ ಸಿಎಂ ಆಗಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶಕ್ಕೆ ಹೊಸಮುಖ್ಯಮಂತ್ರಿ ಬರುತ್ತಾರೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಬಿ. ಶ್ರೀರಾಮುಲು ಹೊಸ ಬಾಂಬ್‌ ಸಿಡಿಸಿದ್ದಾರೆ.

ಕೂಡ್ಲಿಗಿ: ಕಾಂಗ್ರೆಸ್ಸಿನಲ್ಲಿ ನವೆಂಬರ್ ಕ್ರಾಂತಿ ಆಗುತ್ತದೆ. ಆದರೆ, ಡಿಕೆಸಿ ಈಗ ಮುಖ್ಯಮಂತ್ರಿ ಆಗುವುದಿಲ್ಲ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶಕ್ಕೆ ಹೊಸಮುಖ್ಯಮಂತ್ರಿ ಬರುತ್ತಾರೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಬಿ. ಶ್ರೀರಾಮುಲು ಹೊಸ ಬಾಂಬ್‌ ಸಿಡಿಸಿದ್ದಾರೆ.

ಬುಧವಾರ ಇಲ್ಲಿ ಬಿಜೆಪಿ ಮುಖಂಡರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸೂಕ್ಷ್ಮವಾಗಿ ಗಮನಿಸಿದಂತೆ ಡಿಕೆಶಿ ಮುಖ್ಯಮಂತ್ರಿ ಆಗುವುದು ಕನಸಿನ ಮಾತೇ ಸರಿ. ಆದರೆ, ಮುಖ್ಯಮಂತ್ರಿ ಬದಲಾವಣೆ ಖಂಡಿತ ಎಂದರು.

ಕಾಂಗ್ರೆಸ್ ಒಳಜಗಳ ನಡೆದರೂ ನಡೆಯಬಹುದು. ಇದರಿಂದ ಸರ್ಕಾರ ಬೀಳಲೂಬಹುದು. ಇದಕ್ಕಾಗಿ ಬಿಜೆಪಿ ಮಧ್ಯಂತರ ಚುನಾವಣೆಗೂ ಸಿದ್ಧತೆ ಮಾಡಿಕೊಂಡಿದೆ. ರಾಜ್ಯದಲ್ಲಿ ಹಾಗೂ ಕೂಡ್ಲಿಗಿಯಲ್ಲಿ 60 ಪರ್ಸೆಂಟ್ ಸರ್ಕಾರ ಇದೆ. ಇದರಿಂದ ಕಾಮಗಾರಿ ಗುಣಮಟ್ಟ ನಿರೀಕ್ಷೆ ಮಾಡುವುದು ಅಸಾಧ್ಯ. ರಾಜ್ಯದಲ್ಲಿ ಎರಡೂವರೆ ವರ್ಷ ಅವಧಿಯಲ್ಲಿ ಒಂದೇ ಒಂದು ಮನೆ ಮಂಜೂರು ಆಗಿಲ್ಲ. ಕೂಡ್ಲಿಗಿಯಲ್ಲಿ ನಮ್ಮ ಸರ್ಕಾರ ಇದ್ದಾಗ ಮಂಜೂರಾದ 396 ಮನೆಗಳಿಗೆ ಸಿಎಂ ಪಟ್ಟಾ ವಿತರಿಸಲು ಮುಂದಾಗಿದ್ದಾರೆ ಎಂದರು.

ಕೂಡ್ಲಿಗಿಗೆ ಸ್ಪರ್ಧಿಸುವ ಇಂಗಿತ

ನಾನು ರಾಜ್ಯ ಬಿಜೆಪಿ ಮುಖಂಡ ಇರುವುದರಿಂದ ನನಗೆ ಹೈಕಮಾಂಡ್ ಈ ಹಿಂದೆ ಬಾದಾಮಿಯಲ್ಲಿ, ಮೊಳಕಾಲ್ಮೂರಿನಲ್ಲಿ, ನನ್ನ ಸ್ವಕ್ಷೇತ್ರ ಬಳ್ಳಾರಿ ಗ್ರಾಮಾಂತರದಲ್ಲಿ ಟಿಕೆಟ್ ನೀಡಿದೆ. ಈಗ ಕೂಡ್ಲಿಗಿ ಕ್ಷೇತ್ರಕ್ಕೆ ಟಿಕೆಟ್ ನೀಡಿದರೆ ಸ್ಪರ್ಧಿಸುವುದಾಗಿ ಹೇಳಿದ ಅವರು. ಆದರೆ, ಅಂತಿಮ ನಿರ್ಧಾರ ಪಕ್ಷಕ್ಕೆ ಬಿಟ್ಟದ್ದು ಎಂದರು.