ಅಮರಜ್ಞಾನಪೀಠದಿಂದ ತತ್ವಪದ ಸಾಹಿತ್ಯ, ಭಜನೆ, ಹಾಡಿಗೆ ಹೊಸ ದಿಕ್ಕು

| Published : Sep 20 2024, 01:41 AM IST

ಅಮರಜ್ಞಾನಪೀಠದಿಂದ ತತ್ವಪದ ಸಾಹಿತ್ಯ, ಭಜನೆ, ಹಾಡಿಗೆ ಹೊಸ ದಿಕ್ಕು
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಸಂಘ-ಸಂಸ್ಥೆಗಳೂ ಆಧುನಿಕ ಸಂಗೀತದ ಭರಾಟೆಯಲ್ಲಿ ದೇಶಿಯವಾಗಿ ಇರುವ ಅದ್ಭುತ ಕಲಾವಿದರ ಮರೆತಿವೆ.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಗ್ರಾಮೀಣ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ತತ್ವಪದ, ಭಜನೆ, ಜನಪದ, ಅಂತಿಪದ, ಲಾವಣಿ, ಕುಟ್ಟುವ, ಬಿಸುವ ಸೇರಿದಂತೆ ಕ್ರಾಂತಿಕಾರಿ ಹಾಡುಗಳ ಕಲಿಗೆ, ಆಡಿಯೋ, ವಿಡಿಯೋ ರೆಕಾರ್ಡಿಂಗ್‌ಗೆ ಅನುಕೂಲವಾಗಲು ಆಧುನಿಕ ತಂತ್ರಜ್ಞಾದೊಂದಿಗೆ ಹೊಸದಾಗಿ ಅರವಿನ ಮಂಟಪ ನಿರ್ಮಿಸಲಾಗಿದೆ ಎಂದು ಅಮರಜ್ಞಾನಪೀಠದ ಅಧ್ಯಕ್ಷ ಆರ್.ಮಾನಸಯ್ಯ ಹೇಳಿದರು.

ಧರಗೆ ದೊಡ್ಡವರು ಕೊಡೇಕಲ್ ಬಸವಣ್ಣ ಅಮರ ಜ್ಞಾನಪೀಠದಲ್ಲಿ ಧ್ವಜಾರೋಹಣ ನೆರವೇರಿಸಿ, ಕಳಸಾರೋಹಣ ಮಾಡಿ, ನೂತನವಾಗಿ ನಿರ್ಮಾಣಗೊಂಡ ಆರೂಢ ಸಂಗಮನಾಥನ ಅರಿವಿನ ಮಂಟಪ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಅನೇಕ ಅಪ್ರತಿಮ ಕಲಾವಿದರು ಇದ್ದಾರೆ. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಸಂಘ-ಸಂಸ್ಥೆಗಳೂ ಆಧುನಿಕ ಸಂಗೀತದ ಭರಾಟೆಯಲ್ಲಿ ದೇಶಿಯವಾಗಿ ಇರುವ ಅದ್ಭುತ ಕಲಾವಿದರ ಮರೆತಿವೆ. ಇದನ್ನು ಮನಗಂಡು ಅಮರ ಜ್ಞಾನಪೀಠವು ಗ್ರಾಮೀಣ ಭಾಗದಲ್ಲಿ ಸುಶ್ರಾವ್ಯವಾಗಿ ಹಾಡುವಂತಹ ಕಂಠಸಿರಿ ಹೊಂದಿರುವ ಹಾಡುಗಾರರು ಹಾಗೂ ನಾನಾ ವಾಧ್ಯಗಳನ್ನು ಸ್ವಯಂ ಸಿದ್ಧಿಯಿಂದ ಕಲಿತ ಏಕಲವ್ಯರಂತಹ ಪ್ರತಿಭೆಗಳಿಗೆ ಅರವಿನ ಮಂಟಪ ಹೊಸ ಬೆಳಕು ನೀಡಲಿದೆ ಎಂದು ತಿಳಿಸಿದರು.

ಈ ವೇಳೆ ಅಮರಜ್ಞಾನಪೀಠದ ಗೌರವಾಧ್ಯಕ್ಷ ಯಲಗಟ್ಟಾದ ಗಡವಡಕೀಶನ ಮಠದ ಗುರುಸ್ವಾಮಿ ತಾತ, ನಾಗಪ್ಪ ತಳವಾರ, ತಿಪ್ಪಣ್ಣ ಚಿಕ್ಕಹೆಸರೂರು, ಚೆನ್ನಮ್ಮ ಮಾನಸಯ್ಯ, ಎಂ.ಗಂಗಾಧರ, ತಿಪ್ಪರಾಜು ಗೆಜ್ಜಲಗಟ್ಟಾ, ಆದೇಶ ನಗನೂರು, ನಾಟಕ ನಿರ್ದೇಶಕ ರಂಜಾನ್ಸಾಬ ಉಳ್ಳಾಗಡ್ಡಿ, ಎಂ.ನಿಸರ್ಗ, ಹುಸೇನಪ್ಪ ಹೆಸರೂರು, ಹನುಮನಗೌಡ ದೇವರಬುಪೂರ, ಸಿದ್ದಪ್ಪ, ಹನುಮಂತ್ರಾಯ ಮಾಸ್ತರ, ಬಸವರಾಜ ಹಿರೇಹೆಸರೂರು, ಗಂಗಾಧರ ಗುಂತಗೋಳ, ರಮೇಶ, ಪಾಮನಕೆಲ್ಲೂರು ಸೇರಿದಂತೆ ಇದ್ದರು.